ಪುರುಷರೇನು ರೋಬೋಟ್​ಗಳಲ್ಲ.. ಮಹಿಳೆಯರು ಕಡಿಮೆ ಬಟ್ಟೆ ಧರಿಸುವುದೇ ಅತ್ಯಾಚಾರ ಹೆಚ್ಚಲು ಕಾರಣ: ಇಮ್ರಾನ್ ಖಾನ್

ಪುರುಷರೇನು ರೋಬೋಟ್​ಗಳಲ್ಲ.. ಮಹಿಳೆಯರು ಕಡಿಮೆ ಬಟ್ಟೆ ಧರಿಸುವುದೇ ಅತ್ಯಾಚಾರ ಹೆಚ್ಚಲು ಕಾರಣ ಎಂದು ಹೇಳಿಕೆ ನೀಡುವ ಮೂಲಕ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಹಿಳಾಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂದರ್ಶನ
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂದರ್ಶನ

ಇಸ್ಲಾಮಾಬಾದ್: ಪುರುಷರೇನು ರೋಬೋಟ್​ಗಳಲ್ಲ.. ಮಹಿಳೆಯರು ಕಡಿಮೆ ಬಟ್ಟೆ ಧರಿಸುವುದೇ ಅತ್ಯಾಚಾರ ಹೆಚ್ಚಲು ಕಾರಣ ಎಂದು ಹೇಳಿಕೆ ನೀಡುವ ಮೂಲಕ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಹಿಳಾಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಪಾಕಿಸ್ತಾನದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಲು ಮಹಿಳೆಯರು ತೊಡುವ ಉಡುಗೆಗಳೇ ಕಾರಣ ಎಂದು ಇಮ್ರಾನ್ ಖಾನ್ ಹೇಳಿದ್ದು, ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ಇಮ್ರಾನ್​ ಖಾನ್​, ಮಹಿಳೆಯರು ಮೈಮೇಲೆ ಕಡಿಮೆ ಬಟ್ಟೆ  ಧರಿಸಿದರೆ ಅದು ಪುರುಷನ ಮೇಲೆ ಖಂಡಿತ ಪ್ರಭಾವ ಬೀರುತ್ತದೆ. ಯಾಕೆಂದರೆ ಪುರುಷರೇನೂ ರೋಬೋಟ್​ಗಳಲ್ಲ. ಇದು ಕಾಮನ್​ ಸೆನ್ಸ್​.. ಮಹಿಳೆಯರು ತುಂಡು ಉಡುಗೆ ತೊಟ್ಟರೆ ಪುರುಷರಿಗೆ ಸಹಜವಾಗಿಯೇ ಪ್ರಚೋದನೆ ಆಗುತ್ತದೆ. ಅದನ್ನು ನಿಯಂತ್ರಿಸಿಕೊಳ್ಳಲಾಗದವರು ಅತ್ಯಾಚಾರ ಮಾಡಲು  ಮುಂದಾಗುತ್ತಾರೆ. ಲೈಂಗಿಕ ದೌರ್ಜನ್ಯ ನಡೆಸುತ್ತಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇಮ್ರಾನ್ ಖಾನ್ ಹೇಳಿಕೆಯನ್ನು ಅಂತಾರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರ ಆಯೋಗದ ದಕ್ಷಿಣ ಏಷ್ಯಾದ ಕಾನೂನು ಸಲಹೆಗಾರ್ತಿ ರೀಮಾ ಓಮರ್​ ಟ್ವೀಟ್​ ಮಾಡಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ನಿಜಕ್ಕೂ ನಾಚಿಕೆ ಗೇಡು ಎಂದು ಹಲವು ಮಹಿಳೆಯರು ಹೇಳಿದ್ದಾರೆ. ಆದರೆ ಪಾಕಿಸ್ತಾನ  ಪ್ರಧಾನಮಂತ್ರಿ ಕಚೇರಿಯ ಡಿಜಿಟಲ್​ ಮೀಡಿಯಾ ವಿಭಾಗದ ಡಾ. ಅರ್ಸಲ್​ ಖಲೀದ್​ ಇದನ್ನು ತಳ್ಳಿಹಾಕಿದ್ದಾರೆ. ಪ್ರಧಾನಿ ಇಮ್ರಾನ್ ಖಾನ್​​ರ ಹೇಳಿಕೆಗಳನ್ನು ತಿರುಚಲಾಗಿದೆ. ಆಯ್ದ ಭಾಗಗಳನ್ನಷ್ಟೇ ವೈರಲ್ ಮಾಡಿಕೊಂಡು ಟೀಕಿಸಲಾಗುತ್ತಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com