ಡಾ. ವಿವೇಕ್ ಮೂರ್ತಿ
ಡಾ. ವಿವೇಕ್ ಮೂರ್ತಿ

ಭಾರತದಲ್ಲಿ ಎರಡನೇ ಅಲೆ ಒಂದು ದುರಂತ: ಅಮೆರಿಕದ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ

ಭಾರತದಲ್ಲಿನ ಕೋವಿಡ್-19 ಎರಡನೇ ಅಲೆ ಒಂದು ದುರಂತ ಎಂದು ಹೇಳಿರುವ ಅಮೆರಿಕದ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ, ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶಗಳು ಪರಸ್ಪರ ಸಹಾಯ ಮಾಡುವ ಅವಶ್ಯಕತೆಯಿದೆ ಎಂದು ಒತ್ತಿ ಹೇಳಿದ್ದಾರೆ.

ವಾಷಿಂಗ್ಟನ್:  ಭಾರತದಲ್ಲಿನ ಕೋವಿಡ್-19 ಎರಡನೇ ಅಲೆ ಒಂದು ದುರಂತ ಎಂದು ಹೇಳಿರುವ ಅಮೆರಿಕದ ಸರ್ಜನ್
ಜನರಲ್ ಡಾ.ವಿವೇಕ್ ಮೂರ್ತಿ, ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶಗಳು ಪರಸ್ಪರ ಸಹಾಯ ಮಾಡುವ ಅವಶ್ಯಕತೆಯಿದೆ ಎಂದು
ಒತ್ತಿ ಹೇಳಿದ್ದಾರೆ.

ಕೋವಿಡ್ -19 ನಮಗೆ ಏನನ್ನಾದರೂ ಕಲಿಸಿದ್ದರೆ, ಅದು ಪರಸ್ಪರ ಸಹಕಾರದ ಅಗತ್ಯತೆಯಿಂದ ಸಾಂಕ್ರಾಮಿಕದಿಂದ 
ಹೊರಬರುವುದಾಗಿದೆ. ಒಂದು ವಿಶ್ವವಾಗಿ ನೋಡಿದಾಗ ರಾಷ್ಟ್ರಗಳು ಸೂಕ್ತ ಲಸಿಕೆ ಪೂರೈಕೆ ಮಾಡುವ ಮೂಲಕ ಜನರಿಗೆ
ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಬೇಕಾಗಿದೆ. ಪಿಪಿಇ ಪೂರೈಸಬೇಕಾಗಿದೆ. ಏಕೆಂದರೆ, ಕೋವಿಡ್ ವಿಶ್ವದ ಎಲ್ಲ ರಾಷ್ಟ್ರಗಳಿಗೂ
ಹೊಡೆತ ನೀಡಿದೆ ಎಂದು ನ್ಯೂಸ್ ಚಾನೆಲ್ ವೊಂದರ ಸಂದರ್ಶನದಲ್ಲಿ ಭಾರತೀಯ-ಅಮೆರಿಕನ್ ಪ್ರಜೆ ಡಾ. ವಿವೇಕ್ ಮೂರ್ತಿ
ಹೇಳಿದ್ದಾರೆ.

ಪ್ರಸ್ತುತ ಭಾರತ ಎದುರಿಸುತ್ತಿರುವ ಸಮಸ್ಯೆ ಅಮೆರಿಕಕ್ಕೂ ಎದುರಾಗಲಿದ್ದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ.ಮೂರ್ತಿ, ಅಂತಹ
ಸಮಸ್ಯೆ ಎಂದಿಗೂ ಎದುರಾಗದು,ಆದರೆ ಇದು ಯಾವಾಗಲೂ ಒಂದು ಸಾಧ್ಯತೆಯಾಗಿದೆ ಮತ್ತು ನಾವು ಎಚ್ಚರದಿಂದಿರಬೇಕು. 
ವಿಶೇಷವಾಗಿ ನಾವು ವ್ಯಾಕ್ಸಿನೇಷನ್ ಅಭಿಯಾನದಲ್ಲಿ  ನಮ್ಮ ಪ್ರಯತ್ನಗಳನ್ನು ಮುಂದುವರಿಸಿದರೆ,ಅಮೆರಿಕಾದಲ್ಲಿ ನಾವು ಉತ್ತಮ
ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದರು.

ಭಾರತದಲ್ಲಿ ಉಂಟಾಗಿರುವುದು ಒಂದು ದುರಂತವಾಗಿದೆ. ಭಾರತ ಎರಡು ಸವಾಲುಗಳನ್ನು ಎದುರಿಸುತ್ತಿದೆ. ಆದರೆ,ಅಲ್ಲಿ ಕಾಣಿಸಿಕೊಂಡಿರುವ ಬಿ1117 ರೂಪಾಂತರಿಯನ್ನು ಕಳೆದ ವರ್ಷ ಅಮೆರಿಕದಲ್ಲಿ ಸರಿಯಾಗಿ ನಿರ್ವಹಿಸಲಾಗಿತ್ತು. 617 ರೂಪಾಂತರಿ ಮಾರಕ ವೈರಸ್ ಆಗಿದ್ದು,  ಇದು ಹೆಚ್ಚು ಹರಡುವ ಸಾಧ್ಯತೆಯಿದೆ. ಡಾಕ್ಟರ್ ಅದರ ಬಗ್ಗೆ ಇನ್ನೂ ಅಧ್ಯಯನ ನಡೆಸುತ್ತಿದ್ದಾರೆ ಎಂದು ಮಂಡ್ಯ ಮೂಲದ ಅಮೆರಿಕದ ಸರ್ಜನ್ ಜನರಲ್ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com