ಭಾರತೀಯ ಮೂಲದ ಅಮೆರಿಕ ವೈದ್ಯರಿಂದ ಭಾರತಕ್ಕೆ 5000 ಆಕ್ಸಿಜನ್‌ ಪೂರೈಕೆ ಪರಿಕರ ವ್ಯವಸ್ಥೆ

ಕೊರೋನಾ ವೈರಸ್ ಸೋಂಕಿತ ಜನರ ಜೀವ ಉಳಿಸಲು ಭಾರತೀಯ ಮೂಲದ ಅಮೆರಿಕ ವೈದ್ಯರ ಸಂಘ 5,000 ಆಮ್ಲಜನಕ ಪೂರೈಕೆ ಪರಿಕರಗಳನ್ನು ಭಾರತಕ್ಕೆ ರವಾನಿಸುತ್ತಿದೆ.

Published: 08th May 2021 04:42 PM  |   Last Updated: 08th May 2021 04:51 PM   |  A+A-


OXYGEN

ಆಕ್ಸಿಜನ್ ಪೂರೈಕೆ ಪರಿಕರ

Posted By : Lingaraj Badiger
Source : PTI

ವಾಷಿಂಗ್ಟನ್: ಕೊರೋನಾ ವೈರಸ್ ಸೋಂಕಿತ ಜನರ ಜೀವ ಉಳಿಸಲು ಭಾರತೀಯ ಮೂಲದ ಅಮೆರಿಕ ವೈದ್ಯರ ಸಂಘ 5,000 ಆಮ್ಲಜನಕ ಪೂರೈಕೆ ಪರಿಕರಗಳನ್ನು ಭಾರತಕ್ಕೆ ರವಾನಿಸುತ್ತಿದೆ.

ಭಾರತಕ್ಕೆ ಕಳುಹಿಸುವುದಕ್ಕಾಗಿ ಈಗಾಗಲೇ 5,000 ಆಕ್ಸಿಜನ್ ಪೂರೈಕೆ ಪರಿಕರಗಳನ್ನು ಖರೀದಿಸಲಾಗಿದೆ ಎಂದು ಇತ್ತೀಚೆಗೆ ರಚಿಸಲಾದ ಫೆಡರೇಶನ್ ಆಫ್ ಇಂಡಿಯನ್ ಫಿಸಿಶಿಯನ್ಸ್ ಅಸೋಸಿಯೇಶನ್(ಎಫ್‌ಪಿಎ) ಶುಕ್ರವಾರ ತಿಳಿಸಿದೆ.

ಈ ಪೈಕಿ 450 ಪರಿಕರಗಳು ಈಗಾಗಲೇ ಅಹಮದಾಬಾದ್ ತಲುಪಿದ್ದು, 325 ದೆಹಲಿಗೆ ಮತ್ತು ಇನ್ನೂ 300 ಯೂನಿಟ್ ಗಳು ಮುಂಬೈಗೆ ತೆರಳುತ್ತಿವೆ. "ಈ ಯೂನಿಟ್ ಗಳನ್ನು ಸ್ಥಳೀಯ ಭಾರತೀಯ ಪಾಲುದಾರರು, ಆಸ್ಪತ್ರೆಗಳು, ತಾತ್ಕಾಲಿಕ ಪ್ರತ್ಯೇಕ ಕೇಂದ್ರಗಳು, ಹೊಸದಾಗಿ ರಚಿಸಲಾದ ಮೊಬೈಲ್ ಆಸ್ಪತ್ರೆಗಳು ಮತ್ತು ದತ್ತಿ ಸಂಸ್ಥೆಗಳು ಸ್ವೀಕರಿಸಬೇಕು. ಸ್ಥಳೀಯ ಪಾಲುದಾರರು ಈ ಘಟಕಗಳನ್ನು ಬಳಸಿಕೊಂಡು ಅಗತ್ಯವಿರುವ ರೋಗಿಗಳಿಗೆ ಆಮ್ಲಜನಕವನ್ನು ಒದಗಿಸಬಹುದು" ಎಂದು ಎಫ್‌ಐಪಿಎ ಅಧ್ಯಕ್ಷ ಡಾ. ರಾಜ್ ಭಯಾನಿ ಅವರು ಹೇಳಿದ್ದಾರೆ.

ಸುಮಾರು 3,500 ಯುನಿಟ್‌ಗಳು ಸಾಗಿಸಲು ಕಾಯುತ್ತಿದ್ದೇವೆ, ಎಫ್‌ಐಪಿಎ ಅವುಗಳನ್ನು ಭಾರತೀಯ ರಾಯಭಾರ ಕಚೇರಿಗೆ ತಲುಪಿಸಿದೆ ಮತ್ತು ಈ ಯೂನಿಟ್ ಗಳನ್ನು ತಕ್ಷಣ ಸಾಗಿಸಲು ವಿಮಾನಯಾನ ಮತ್ತು ಏರ್ ಇಂಡಿಯಾ ಸಚಿವಾಲಯ ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.


Stay up to date on all the latest ಅಂತಾರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp