ಭಾರತದಲ್ಲಿ ಭೀಕರ ಕೊರೋನಾ ಸಮಸ್ಯೆಗೆ ಜನರು ಲಸಿಕೆ ಹಾಕಿಸಿಕೊಳ್ಳುವುದೊಂದೇ ದೀರ್ಘ ಪರಿಹಾರ: ಅಮೆರಿಕದ ಖ್ಯಾತ ತಜ್ಞ ಡಾ. ಫೌಸಿ

ಭಾರತದಲ್ಲಿ ಸದ್ಯ ಉಂಟಾಗಿರುವ ಕೊರೋನಾ ಆರೋಗ್ಯ ಸಮಸ್ಯೆಗೆ ಜನರು ಲಸಿಕೆ ಹಾಕಿಸಿಕೊಳ್ಳುವುದೊಂದೇ ದೀರ್ಘ ಕಾಲದ ಪರಿಹಾರವಾಗಿದೆ ಎಂದು ಅಮೆರಿಕದ ಉನ್ನತ ಆರೋಗ್ಯ ತಜ್ಞ ಡಾ ಆಂಟನಿ ಫೌಸಿ ಹೇಳಿದ್ದಾರೆ.
ಡಾ ಫೌಸಿ
ಡಾ ಫೌಸಿ

ವಾಷಿಂಗ್ಟನ್: ಭಾರತದಲ್ಲಿ ಸದ್ಯ ಉಂಟಾಗಿರುವ ಕೊರೋನಾ ಆರೋಗ್ಯ ಸಮಸ್ಯೆಗೆ ಜನರು ಲಸಿಕೆ ಹಾಕಿಸಿಕೊಳ್ಳುವುದೊಂದೇ ದೀರ್ಘ ಕಾಲದ ಪರಿಹಾರವಾಗಿದೆ ಎಂದು ಅಮೆರಿಕದ ಉನ್ನತ ಆರೋಗ್ಯ ತಜ್ಞ ಡಾ ಆಂಟನಿ ಫೌಸಿ ಹೇಳಿದ್ದಾರೆ.

ಮಾರಣಾಂತಿಕ ಕೊರೋನಾ ವೈರಸ್ ವಿರುದ್ಧ ಹೋರಾಡಲು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊರೋನಾ ಲಸಿಕೆ ಉತ್ಪಾದನೆಯನ್ನು ತೀವ್ರಗೊಳಿಸಬೇಕೆಂದು ಅವರು ಕರೆ ನೀಡಿದ್ದಾರೆ.

ಜನರು ಹೆಚ್ಚುಚ್ಚು ಸಂಖ್ಯೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವುದೊಂದೇ ಇದಕ್ಕೆ ಪರಿಹಾರ. ಜಗತ್ತಿನಲ್ಲಿಯೇ ಭಾರತದಲ್ಲಿ ಅತಿ ಹೆಚ್ಚು ಕೊರೋನಾ ಲಸಿಕೆ ಉತ್ಪಾದನೆಯಾಗುತ್ತಿದೆ. ಇದಕ್ಕೆ ಸಾಕಷ್ಟು ಸಂಪನ್ಮೂಲವನ್ನು ಕೂಡ ಭಾರತ ಹೊಂದಿದೆ ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರಿಗೆ ಮುಖ್ಯ ವೈದ್ಯಕೀಯ ಸಲಹೆಗಾರರೂ ಆಗಿರುವ ಫೌಸಿ ಎಬಿಸಿ ನ್ಯೂಸ್ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಇತರ ದೇಶಗಳು ತಮ್ಮದೇ ಆದ ಲಸಿಕೆಗಳನ್ನು ತಯಾರಿಸಲು ಅಥವಾ ಲಸಿಕೆಗಳನ್ನು ದಾನ ಮಾಡಲು ಭಾರತೀಯರಿಗೆ ಸರಬರಾಜು ಮಾಡಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಲಸಿಕೆ ತಯಾರಿಸುವ ಸಾಮರ್ಥ್ಯವನ್ನು ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಳ ಮಾಡಬೇಕು ಎಂದಿದ್ದಾರೆ.

ಭಾರತದಲ್ಲಿ ಆಸ್ಪತ್ರೆಗಳ ಸಮಸ್ಯೆ ಎದುರಾಗಿರುವ ಬಗ್ಗೆ ಅವರು, ಚೀನಾ ಕಳೆದ ವರ್ಷ ಮಾಡಿದಂತೆ ಭಾರತದಲ್ಲಿ ಕೂಡ ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಬೇಕು, ಜನರು ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಚಿಕಿತ್ಸೆ ಸಿಗದೆ ಬೀದಿಗಳಲ್ಲಿ ಬಿದ್ದು ಸಾಯುವಂತಾಗಬಾರದು ಪರಿಸ್ಥಿತಿ. ಭಾರತದಲ್ಲಿ ಆಕ್ಸಿಜನ್ ಸಮಸ್ಯೆ ತೀವ್ರವಾಗಿದೆ. ಭಾರತದಲ್ಲಿ ಸದ್ಯದ ಪರಿಸ್ಥಿತಿ ನಿಜಕ್ಕೂ ದುರಂತವಾಗಿದೆ ಎಂದರು.

ಭಾರತದಲ್ಲಿ ಸದ್ಯಕ್ಕೆ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ಪಿಪಿಇ ಕಿಟ್ ಗಳು, ವೆಂಟಿಲೇಟರ್ ಮತ್ತು ಇತರ ಸಮಸ್ಯೆಗಳಿವೆ. ಇದನ್ನು ಹೇಗೆ ಬಗೆಹರಿಸುವುದು ಎಂಬುದು ಸದ್ಯದ ಪ್ರಶ್ನೆಯಾಗಿದೆ. ಕೊರೋನಾ ವೈರಸ್ ಹಬ್ಬುವುದನ್ನು ತಡೆಯುವುದು ಕೂಡ ಭಾರತದ ಎದುರಿರುವ ಸವಾಲಾಗಿದೆ, ಇದಕ್ಕೆ ದೇಶಾದ್ಯಂತ ಲಾಕ್ ಡೌನ್ ಮಾಡುವುದೊಂದೇ ಪರಿಹಾರ ಎಂದು ಡಾ ಫೌಸಿ ಅಭಿಪ್ರಾಯಪಟ್ಟಿದ್ದಾರೆ.

ಲಸಿಕೆ ಒಂದು ಪರಿಹಾರ ಮಾರ್ಗವಾದರೆ ಬೇರೆ ಉಪಾಯಗಳು ಕೂಡ ಇವೆ, ಸರ್ಕಾರಿ, ಖಾಸಗಿ ಕಚೇರಿಗಳನ್ನು ಲಾಕ್ ಡೌನ್ ಮಾಡುವುದು. ಇದು ಭಾರತದಲ್ಲಿ ಖಂಡಿತವಾಗಿಯೂ ಆಗಬೇಕೆಂದು ಈ ಹಿಂದೆ ಕೂಡ ಹೇಳಿದ್ದೆ. ಭಾರತದಲ್ಲಿ ಹಲವು ರಾಜ್ಯಗಳು ಲಾಕ್ ಡೌನ್ ಮಾಡುತ್ತಿವೆ. ಕೊರೋನಾ ವೈರಸ್ ಹರಡುವುದನ್ನು ತಡೆಯಬೇಕು, ಅದಕ್ಕೆ ಲಾಕ್ ಡೌನ್ ಪರಿಹಾರವಾಗಿದೆ ಎಂದಿದ್ದಾರೆ.

ಭಾರತದಲ್ಲಿ ಸದ್ಯ ದಿನಕ್ಕೆ ನಾಲ್ಕು ಲಕ್ಷಕ್ಕೂ ಅಧಿಕ ಸೋಂಕಿತರು ವರದಿಯಾಗುತ್ತಿದ್ದಾರೆ. ಚೀನಾ ದೇಶದಲ್ಲಿ 2019ರ ಅಂತ್ಯದಲ್ಲಿ ಕಂಡುಬಂದ ಕೊರೋನಾ ಸೋಂಕು ಇಂದು ವಿಶ್ವವ್ಯಾಪಿ ಹರಡಿದ್ದು 15 ಕೋಟಿಗೂ ಅಧಿಕ ಮಂದಿಯ ಆರೋಗ್ಯ ಮೇಲೆ ಪರಿಣಾಮ ಬೀರಿದೆ. ವಿಶ್ವಾದ್ಯಂತ ಈವರೆಗೆ 32 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com