ಗಾಜಾ ಪಟ್ಟಿಯಲ್ಲಿ ಹೆಚ್ಚಿದ ಹಿಂಸಾಚಾರ, ಇಸ್ರೇಲ್ ರಾಕೆಟ್ ದಾಳಿಗೆ 35 ಸಾವು

ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನ ಹಮಾಸ್ ಬಂಡುಕೋರರ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಗಾಜಾ ಪಟ್ಟಣದ ಮೇಲೆ ಇಸ್ರೇಲ್ ನಡೆಸಿದ ರಾಕೆಟ್ ದಾಳಿಯಲ್ಲಿ 35 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ರಾಕೆಟ್ ದಾಳಿ
ರಾಕೆಟ್ ದಾಳಿ

ಗಾಜಾ ಸಿಟಿ: ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನ ಹಮಾಸ್ ಬಂಡುಕೋರರ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಗಾಜಾ ಪಟ್ಟಣದ ಮೇಲೆ ಇಸ್ರೇಲ್ ನಡೆಸಿದ ರಾಕೆಟ್ ದಾಳಿಯಲ್ಲಿ 35 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಹಮಾಸ್ ಬಂಡುಕೋರರೂ ಇಸ್ರೇಲ್ ಸೇನಾಪಡೆ ಮೇಲೆ ಸರಣಿ ರಾಕೆಟ್ ದಾಳಿ ನಡೆಸಿದ್ದು, ಇಬ್ಬರು ಇಸ್ರೇಲ್ ಅಧಿಕಾರಿಗಳು ಸಹ ಹತರಾಗಿದ್ದಾರೆ. ಮತ್ತೊಂದೆಡೆ, ಇಸ್ರೇಲ್ 5,000 ಮೀಸಲು ಪಡೆ ಯೋಧರನ್ನು ನಿಯೋಜಿಸುವ ಮೂಲಕ ಗಡಿಯಲ್ಲಿ ಸೇನಾಪಡೆ ಹೆಚ್ಚಿಸಿದೆ.

ಇಸ್ರೇಲ್ ನಡೆಸಿದ ರಾಕೆಟ್ ದಾಳಿಯ ವೇಳೆ ಹಮಾಸ್ ಬಂಡುಕೋರರ ಫೀಲ್ಡ್ ಕಮಾಂಡರ್ ಮನೆ ಹಾಗೂ ಹಮಾಸ್ ಬಂಡುಕೋರರ ಗಡಿ ಸುರಂಗ ಮಾರ್ಗಗಳನ್ನು ಗುರಿ ಮಾಡಲಾಗಿದೆ.

ಇಸ್ರೇಲಿ ವೈಮಾನಿಕ ದಾಳಿಯಿಂದ ಗಾಜಾ ಪಟ್ಟಿಯಲ್ಲಿರುವ ಎರಡು ಅಪಾರ್ಟ್ಮೆಂಟ್ ಗೋಪುರಗಳನ್ನು ನೆಲಸಮ ಮಾಡಲಾಗಿದೆ. ಅಲ್ಲಿ 2007 ರಲ್ಲಿ ಹಮಾಸ್ ಅಧಿಕಾರ ವಹಿಸಿಕೊಂಡಾಗಿನಿಂದ 2 ಮಿಲಿಯನ್ ಪ್ಯಾಲೆಸ್ಟೀನಿಯರು ದುರ್ಬಲ ಇಸ್ರೇಲಿ-ಈಜಿಪ್ಟ್ ದಿಗ್ಬಂಧನದ ಅಡಿಯಲ್ಲಿ ವಾಸಿಸುತ್ತಿದ್ದರು. ಅಲ್ಲಿನ ನಾಗರಿಕರಿಗೆ ಕಟ್ಟಡ ಖಾಲಿ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. 2014ರ ಯುದ್ಧದ ಸಮಯದಲ್ಲಿ ಇಸ್ರೇಲ್ ನ ಈ ತಂತ್ರದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು.

ಅರಬ್-ಯಹೂದಿ ದೇಶಗಳಲ್ಲಿ ಭಾರಿ ಹಿಂಸಾಚಾರ ಹಾಗೂ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಲಾಡ್ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com