ಭಾರತದ ಕೊರೋನಾ ಸೋಂಕಿಗೆ ಅಮೆರಿಕ ಲಸಿಕೆ ಅತ್ಯಂತ ಪರಿಣಾಮಕಾರಿ ಮದ್ದು!

ಅಮೆರಿಕದಲ್ಲಿ ಪ್ರಸ್ತುತ ಕೊರೋನಾ ನಿಗ್ರಹಕ್ಕಾಗಿ ಬಳಕೆಯಾಗುತ್ತಿರುವ ಫೈಜರ್ ಮತ್ತು ಮೆಡೆರ್ನಾ ಲಸಿಕೆಗಳು ಭಾರತದಲ್ಲಿ ಕಾಣಿಸಿಕೊಂಡ ರೂಪಾಂತರಿ ಹೊಸ ಕೊರೋನಾ ಸೋಂಕು ಪ್ರಬೇದವನ್ನು ಪರಿಣಾಮಕಾರಿಯಾಗಿ ಎದುರಿಸುವ ಶಕ್ತಿ ಹೊಂದಿವೆ.
ಫೈಜರ್ ಲಸಿಕೆ
ಫೈಜರ್ ಲಸಿಕೆ

ವಾಷಿಂಗ್ಟನ್: ಅಮೆರಿಕದಲ್ಲಿ ಪ್ರಸ್ತುತ ಕೊರೋನಾ ನಿಗ್ರಹಕ್ಕಾಗಿ ಬಳಕೆಯಾಗುತ್ತಿರುವ ಫೈಜರ್ ಮತ್ತು ಮೆಡೆರ್ನಾ ಲಸಿಕೆಗಳು ಭಾರತದಲ್ಲಿ ಕಾಣಿಸಿಕೊಂಡ ರೂಪಾಂತರಿ ಹೊಸ ಕೊರೋನಾ ಸೋಂಕು ಪ್ರಬೇದವನ್ನು ಪರಿಣಾಮಕಾರಿಯಾಗಿ ಎದುರಿಸುವ ಶಕ್ತಿ ಹೊಂದಿವೆ.

ಅಮೆರಿಕದ ನ್ಯೂಯಾರ್ಕ್ ವಿಶ್ವವಿದ್ಯಾಲಯ ಪ್ರಕಟಿಸಿರುವ ಸಂಶೋಧನಾ ಪ್ರಬಂಧದಲ್ಲಿ ಈ ಅಂಶ ಬಹಿರಂಗವಾಗಿದೆ.

ಭಾರತದಲ್ಲಿ ಕಾಣಿಸಿಕೊಂಡಿರುವ ಹೊಸ ರೂಪಾಂತರಿ ಕೊರೋನಾ ಸೋಂಕಿನ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಅಮೆರಿಕದ ಎರಡು ಲಸಿಕೆಗಳು ಹೊಸ ರೂಪಾಂತರಿ ಕೊರೋನಾ ಸೋಂಕಿನ ವಿರುದ್ದ ಹೋರಾಡುವ ಶಕ್ತಿಯನ್ನು ಪಡೆದುಕೊಂಡಿವೆ ಎಂದು ಹೇಳಲಾಗಿದ್ದರು, ಈ ವಿಚಾರದಲ್ಲಿ ಮತ್ತಷ್ಟು ಸಂಶೋಧನೆ ನಡೆಯಬೇಕು ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಎರಡು ಲಸಿಕೆಗಳು ಶೇಕಡ 95ರಷ್ಟು ಯಶಸ್ವಿಯಾಗಿದ್ದು ಇವುಗಳಿಗೆ ರೂಪಾಂತರಿ ಕೊರೋನಾ ಸೋಂಕು ನಿವಾರಿಸುವ ಶಕ್ತಿಯಿದೆ ಎಂಬುದು ವಿಶ್ವವಿದ್ಯಾಲಯದ ಸಂಶೋಧನಾ ಪ್ರಬಂಧಗಳಲ್ಲಿ ಪ್ರಸ್ತಾಪವಾಗಿದೆ. ಭಾರತದಲ್ಲಿ ಕಾಣಿಸಿಕೊಂಡಿರುವ ಎರಡನೇ ಅಲೆಯ ಸೊಂಕು ಅತ್ಯಂತ ವೇಗವಾಗಿ ಹಬ್ಬುವ ಶಕ್ತಿ ಪಡೆದುಕೊಂಡಿದೆ ಎಂದೂ ಸಹ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com