ಪ್ರಧಾನಿ ನೇತನ್ಯಾಹು ಕೆಳಗಿಸಿಳಿ ಸಮ್ಮಿಶ್ರ ಸರ್ಕಾರ ರಚನೆಗೆ ಇಸ್ರೇಲಿ ನಾಯಕರು ಮುಂದು

ಹಮಾಸ್- ಇಸ್ರೇಲ್ ನಡುವಿನ ಘರ್ಷಣೆಯ ಪರಿಸ್ಥಿತಿಯ ಬೆನ್ನಲ್ಲೆ ಇಸ್ರೇಲ್ ನಲ್ಲಿ ರಾಜಕೀಯ ಸ್ಥಿತ್ಯಂತರಗಳ ಬೆಳವಣಿಗೆಗಳು ವರದಿಯಾಗಿದೆ. 
ನೆತನ್ಯಹು
ನೆತನ್ಯಹು

ಜೆರುಸಲೇಮ್: ಹಮಾಸ್- ಇಸ್ರೇಲ್ ನಡುವಿನ ಘರ್ಷಣೆಯ ಪರಿಸ್ಥಿತಿಯ ಬೆನ್ನಲ್ಲೆ ಇಸ್ರೇಲ್ ನಲ್ಲಿ ರಾಜಕೀಯ ಸ್ಥಿತ್ಯಂತರಗಳ ಬೆಳವಣಿಗೆಗಳು ವರದಿಯಾಗಿದೆ. 

ಇಸ್ರೇಲಿ ರಾಷ್ಟ್ರೀಯವಾದಿ ಹಾರ್ಡ್‌ಲೈನರ್ ನಫ್ತಾಲಿ ಬೆನ್ನೆಟ್ಟ್ ಇಸ್ರೇಲ್ ನ ದೀರ್ಘಾವಧಿ ಸೇವೆ ಸಲ್ಲಿಸಿದ ನಾಯಕ ಬೆಂಜಮಿನ್ ನೇತನ್ಯಾಹು ಅವರನ್ನು ಕೆಳಗಿಳಿಸಿ ಹೊಸ ಸರ್ಕಾರ ರಚಿಸಲು ತಾವು ಸಮ್ಮಿಶ್ರ ಮೈತ್ರಿಕೂಟ ಸೇರುವುದಾಗಿ ಹೇಳಿದ್ದಾರೆ. 

ನೇತನ್ಯಾಹು ಅವರ ಎದುರಾಳಿ ವಿಪಕ್ಷ ನಾಯಕರು ಸಮ್ಮಿಶ್ರ ಸರ್ಕಾರ ರಚನೆಗೆ ಸಂಬಂಧಿಸಿದಂತೆ ತೀವ್ರವಾದ ಚರ್ಚೆಯಲ್ಲಿ ತೊಡಗಿದ್ದಾರೆ. ನೇತನ್ಯಾಹು ಅವರ ವಿರುದ್ಧ ವಂಚನೆ, ಭ್ರಷ್ಟಾಚಾರ ಆರೋಪಗಳು ಕೇಳಿಬಂದಿದೆ.

ಮಾರ್ಚ್ ತಿಂಗಳಲ್ಲಿ ನಡೆದ ಮತದಾನದಲ್ಲಿ ನೇತನ್ಯಾಹು ಅವರ ಲಿಕುಡ್ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿತ್ತು ಆದರೆ ಸ್ಪಷ್ಟ ಬಹುಮತ ಸಿಗದೇ ಸರ್ಕಾರ ರಚಿಸುವುದಕ್ಕೆ ವಿಫಲವಾಗಿತ್ತು. 

ಈಗ ಸಮ್ಮಿಶ್ರ ಸರ್ಕಾರ ರಚನೆಯ ಯತ್ನಗಳು ಇಸ್ರೇಲ್ ನಲ್ಲಿ ನಡೆದಿದ್ದು, ವಿಪಕ್ಷ ನಾಯಕ ಹಾಗೂ ಮಾಜಿ ಟಿವಿ ನಿರೂಪಕ ಯೇರ್ ಲ್ಯಾಪಿಡ್ ಗೆ ಸಮ್ಮಿಶ್ರ ಮೈತ್ರಿಕೂಟವನ್ನು ರಚಿಸುವುದಕ್ಕೆ ಬುಧವಾರ (ಜೂ.1)ರ ಸಂಜೆಯವರೆಗೂ ಗಡುವು ನೀಡಲಾಗಿದೆ. 

ಲ್ಯಾಪಿಡ್ ಬೆನ್ನೆಟ್ ಹಾಗೂ ಇತರ ಅರಬ್-ಇಸ್ರೇಲಿ ಶಾಸಕರನ್ನು ಒಳಗೊಂಡ ಮೈತ್ರಿಕೂಟದ ಮೂಲಕ ಸರ್ಕಾರ ರಚನೆ ಮಾಡುವುದಕ್ಕೆ ಯತ್ನಿಸುತ್ತಿದ್ದಾರೆ ಈ ನಡುವೆ ಬೆನ್ನೆಟ್ ಹೊಸ ಸರ್ಕಾರ ರಚಿಸಲು ತಾವು ಸಮ್ಮಿಶ್ರ ಮೈತ್ರಿಕೂಟ ಸೇರುವುದಾಗಿ ಹೇಳಿರುವುದು ಮಹತ್ವ ಪಡೆದುಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com