ಚೆಂಡು ಈಗ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಅಂಗಳದಲ್ಲಿದೆ: ಹವಾಮಾನ ಕಾರ್ಯತಂತ್ರ ಬಗ್ಗೆ ತಜ್ಞರ ಆಭಿಮತ

ಗ್ಲಾಸ್ಗೋ ನಲ್ಲಿ ಕೋಪ್ 26 ಸಮ್ಮೇಳನದಲ್ಲಿನ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೆ ತಜ್ಞರಿಂದ ಮೆಚ್ಚುಗೆ ವ್ಯಕ್ತವಾಗತೊಡಗಿದೆ. 
ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೋದಿ
ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೋದಿ

ನವದೆಹಲಿ: ಗ್ಲಾಸ್ಗೋ ನಲ್ಲಿ ಕೋಪ್ 26 ಸಮ್ಮೇಳನದಲ್ಲಿನ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೆ ತಜ್ಞರಿಂದ ಮೆಚ್ಚುಗೆ ವ್ಯಕ್ತವಾಗತೊಡಗಿದೆ. 

2070 ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಸ್ಪಷ್ಟ, ನೈಜ ಹವಾಮಾನ ಕಾರ್ಯಸೂಚಿಯನ್ನು ಮಂಡಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತ ತನ್ನ ಈ ನಡೆಯ ಮೂಲಕ ಹವಾಮಾನ ಆರ್ಥಿಕತೆಯ ಭರವಸೆಯನ್ನು ಈಡೇರಿಸುವುದಕ್ಕಾಗಿ ಚೆಂಡನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಅಂಗಳದಲ್ಲಿ ಹಾಕಿದೆ.

ಮೋದಿ ಭಾಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ತಜ್ಞರು, ಭಾರತ ಜಾಗತಿಕ ವೇದಿಕೆಯಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂದ ಸರಿಯಾದ ರೀತಿಯಲ್ಲಿ 1 ಟ್ರಿಲಿಯನ್ ಡಾಲರ್ ಹಣವನ್ನು ಕೇಳಿದೆ ಎಂದು ಹೇಳಿದ್ದಾರೆ.

"ಕಡಿಮೆ-ಇಂಗಾಲಕ್ಕಾಗಿ ದಿಟ್ಟ ಹೇಳಿಕೆ ನೀಡಿರುವ ಪ್ರಧಾನಿ ಮೋದಿ ಅವರ ಭಾಷಣಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಈ ಮೂಲಕ ಭಾರತ ಚೆಂಡನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಅಂಗಳಕ್ಕೆ ಹಾಕಿದೆ. ಇದೇ ನಿಜವಾದ ಹವಾಮಾನ ಕಾರ್ಯಸೂಚಿಯಾಗಿದೆ"

ಭಾರತ, ಹವಾಮಾನ ಆರ್ಥಿಕತೆಯ 1 ಟ್ರಿಲಿಯನ್ ಡಲರ್ ನ್ನು ಕೇಳಿದೆ. ಹವಾಮಾನ ಕಾರ್ಯಸೂಚಿಯ ಮೇಲ್ವಿಚಾರಣೆಯಷ್ಟೇ ಅಲ್ಲದೇ ಹವಾಮಾನ ಆರ್ಥಿಕತೆಯ ಮೇಲ್ವಿಚಾರಣೆಯನ್ನೂ ನಡೆಸಲಿದೆ. ಬಹುಮುಖ್ಯವಾಗಿ ಭಾರತ ಜೀವನಶೈಲಿಯಲ್ಲಿನ ಬದಲಾವಣೆಗಳಿಗೆ ಕರೆ ನೀಡಿದೆ. ನಾವು ಜೀವನ ನಡೆಸುವ ವಿಧಾನವನ್ನು ಸರಿಮಾಡಿಕೊಳ್ಳದೇ ಇದ್ದರೆ, ನಾವು ಜೀವಿಸುವ ಈ ಭೂಮಿಯನ್ನು ಸರಿ ಮಾಡಲು ಹೇಗೆ ಸಾಧ್ಯ ಎಂಬುದು ಎನರ್ಜಿ, ಎನ್ವಿರಾನ್ಮೆಂಟ್ ಮತ್ತು ವಾಟರ್ (CEEW) ಪರಿಷತ್ ನ ಸಿಇಒ ಅರುಣಾಭ ಘೋಷ್.

ಕ್ಲೈಮೆಟ್ ಟ್ರೆಂಡ್ಸ್ ನ ನಿರ್ದೇಶಕರಾಗಿರುವ ಆರತಿ ಖೋಸ್ಲಾ ಈ ಬಗ್ಗೆ ಮಾತನಾಡಿದ್ದು, ಭಾರತ 2070 ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿ ಪ್ರಕಟಿಸುವ ಮೂಲಕ ಜಾಗತಿಕ ಕರೆಗೆ ಭಾರತ ಸಕಾರಾತ್ಮಕವಾಗಿ ಸ್ಪಂದಿಸಿದೆ, ಇದು ಅತ್ಯುತ್ತಮ ಹವಾಮಾನ ಕಾರ್ಯಸೂಚಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಪ್ರಕಟಿಸಿರುವ "2030 ರ ವೇಳೆಗೆ ನವೀಕರಿಸಬಹುದಾದ ಇಂಧನವನ್ನು 500 ಗಿಗಾ ವ್ಯಾಟ್ ಗೆ ತಲುಪಿಸುವ ಬದ್ಧತೆ" ಇಂಧನ ಕ್ಷೇತ್ರದಲ್ಲಿ ತ್ವರಿತ ಬದಲಾವಣೆಗೆ ವೇದಿಕೆಯಾಗಲಿದ್ದು, ಈ ವರೆಗೂ ಇಂತಹದ್ದಕ್ಕೆ ಯಾರೂ ಸಾಕ್ಷಿಯಾಗಿಲ್ಲ ಎಂದು ಅವರು ಹೇಳಿದ್ದಾರೆ. "ಶೂನ್ಯ ಇಂಗಾಲ ಹೊರಸೂಸುವಿಕೆ ಜಗತ್ತಿನಲ್ಲಿ (ನೆಟ್ ಜೀರೋ ಜಗತ್ತು) ಸೌರ ಹಾಗೂ ಪವನ ಶಕ್ತಿಗಳು ಭವಿಷ್ಯವಾಗಿ ಹೊರಹೊಮ್ಮಲು ಸಿದ್ಧವಾಗಿದೆ" ಎನ್ನುತ್ತಾರೆ ಆರತಿ ಖೋಸ್ಲಾ.

ನವೀಕರಿಸಬಹುದಾದ ಇಂಧನ ಮೂಲಗಳಿಂದ ಶೇ.50 ರಷ್ಟು ವಿದ್ಯುತ್ ಉತ್ಪಾದನೆ ಹವಾಮಾನ ಕ್ರಮಗಳೆಡೆಗೆ ಭಾರತದ ನಾಯಕತ್ವ ಹಾಗೂ ಬದ್ಧತನ್ನು ಸ್ಪಷ್ಟವಾಗಿ ತೋರಿಸುತ್ತದೆ. ಪ್ರಧಾನಿ ಮೋದಿ ಅವರ ಭಾಷಣದಲ್ಲಿನ ಸದೃಢ ಘೋಷಣೆಗಳನ್ನು ಮಾಡಿದರು ಮತ್ತು ಭಾರತದ ಮುನ್ನೆಲೆಯ ನೇತೃತ್ವವನ್ನು ವಹಿಸಿದ್ದರು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com