ದೀಪಾವಳಿ ನಿಮಿತ್ತ ಮಹಾತ್ಮ ಗಾಂಧಿ ಸ್ಮರಣಾರ್ಥ ವಿಶೇಷ ನಾಣ್ಯ ಬಿಡುಗಡೆ ಮಾಡಿದ ಬ್ರಿಟನ್ ಸಚಿವ ರಿಷಿ ಸುನಕ್
ದೀಪಾವಳಿ ನಿಮಿತ್ತ ಮಹಾತ್ಮ ಗಾಂಧಿ ಸ್ಮರಣಾರ್ಥ ಬ್ರಿಟನ್ ಸರ್ಕಾರ ವಿಶೇಷ ನಾಣ್ಯ ಬಿಡುಗಡೆ ಮಾಡಿದ್ದು, ಭಾರತ ಮೂಲದ ಬ್ರಿಟನ್ ಸಚಿವ ರಿಷಿ ಸುನಕ್ ಅವರು ನಾಣ್ಯ ಪ್ರದರ್ಶಿಸಿದ್ದಾರೆ.
Published: 04th November 2021 10:11 PM | Last Updated: 04th November 2021 10:11 PM | A+A A-

ರಿಷಿ ಸುನಕ್-ವಿಶೇಷ ನಾಣ್ಯ
ಲಂಡನ್: ದೀಪಾವಳಿ ನಿಮಿತ್ತ ಮಹಾತ್ಮ ಗಾಂಧಿ ಸ್ಮರಣಾರ್ಥ ಬ್ರಿಟನ್ ಸರ್ಕಾರ ವಿಶೇಷ ನಾಣ್ಯ ಬಿಡುಗಡೆ ಮಾಡಿದ್ದು, ಭಾರತ ಮೂಲದ ಬ್ರಿಟನ್ ಸಚಿವ ರಿಷಿ ಸುನಕ್ ಅವರು ನಾಣ್ಯ ಪ್ರದರ್ಶಿಸಿದ್ದಾರೆ.
ಮಹಾತ್ಮ ಗಾಂಧಿ ಸ್ಮರಣಾರ್ಥ ಅವರ ಜೀವನ ಮತ್ತು ಪರಂಪರೆ ಕೊಂಡಾಡುವ 5 ಪೌಂಡ್‌ನ ಹೊಸ ನಾಣ್ಯವನ್ನು ದೀಪಾವಳಿ ಹಬ್ಬದ ಅಂಗವಾಗಿ ಗುರುವಾರ ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಅವರು ಅನಾವರಣಗೊಳಿಸಿದರು.
Today I’ve unveiled a new commemorative £5 coin with the @RoyalMintUK to celebrate the life and legacy of Mahatma Gandhi.
The striking design features India’s national flower and one of Gandhi’s most famous quotes.
Read more: https://t.co/C6fyvzIII4 pic.twitter.com/yw3PGvmIlA— Rishi Sunak (@RishiSunak) November 4, 2021
ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಹಲವು ಮಾನದಂಡಗಳಲ್ಲಿ ಈ ನಾಣ್ಯ ಲಭ್ಯವಿದೆ. ಸಂಗ್ರಹ ಯೋಗ್ಯವಾದ ಈ ನಾಣ್ಯವನ್ನು ಹೀನಾ ಗ್ಲೋವರ್ ವಿನ್ಯಾಸಗೊಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಹಾತ್ಮ ಗಾಂಧಿಯವರ ಅತ್ಯಂತ ಪ್ರಸಿದ್ಧ ಉಲ್ಲೇಖಗಳಲ್ಲಿ ಒಂದಾದ ‘ಮೈ ಲೈಫ್ ಈಸ್ ಮೈ ಮೆಸೇಜ್’ ಜೊತೆಗೆ ಭಾರತದ ರಾಷ್ಟ್ರೀಯ ಹೂವು ಕಮಲದ ಚಿತ್ರವನ್ನುಈ ವಿಶೇಷ ನಾಣ್ಯ ಒಳಗೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಿಷಿ ಸುನಕ್ ಅವರು, 'ಈ ನಾಣ್ಯವು ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ ಪ್ರಭಾವಿ ನಾಯಕನಿಗೆ ಸೂಕ್ತವಾದ ಗೌರವವಾಗಿದೆ' ಎಂದು ಹೇಳಿದರು.