ಭಾರತಕ್ಕೆ ಸೆಡ್ಡು: ಅಫ್ಘಾನ್ ಕುರಿತು ಪಾಕಿಸ್ತಾನದಿಂದ ಪ್ರತ್ಯೇಕ ಮೀಟಿಂಗ್; ಭಾರತ ಬಿಟ್ಟು ಬಲಿಷ್ಠ ದೇಶಗಳಿಗೆ ಆಹ್ವಾನ!

ಭಾರತ ಒಳಗೊಂಡ 8 ದೇಶಗಳ ಭದ್ರತಾ ಸಲಹೆಗಾರರ ಮಟ್ಟದ ಸಭೆ ದಿಲ್ಲಿಯಲ್ಲಿ ನಡೆಯುತ್ತಿದೆ. ತಾಲಿಬಾನ್ ಆಕ್ರಮಣದ ನಂತರ ಅಫ್ಘಾನಿಸ್ತಾನ ಸದ್ಯದ ಪರಿಸ್ಥಿತಿ ಕುರಿತು ಎನ್ಎಸ್ಎ ಮಟ್ಟದ ಸಂವಾದದಲ್ಲಿ ಚರ್ಚೆ ನಡೆಸಲಾಗುತ್ತಿದೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ನವದೆಹಲಿ: ಭಾರತ ಒಳಗೊಂಡ 8 ದೇಶಗಳ ಭದ್ರತಾ ಸಲಹೆಗಾರರ ಮಟ್ಟದ ಸಭೆ ದಿಲ್ಲಿಯಲ್ಲಿ ನಡೆಯುತ್ತಿದೆ. ತಾಲಿಬಾನ್ ಆಕ್ರಮಣದ ನಂತರ ಅಫ್ಘಾನಿಸ್ತಾನ ಸದ್ಯದ ಪರಿಸ್ಥಿತಿ ಕುರಿತು ಎನ್ಎಸ್ಎ ಮಟ್ಟದ ಸಂವಾದದಲ್ಲಿ ಚರ್ಚೆ ನಡೆಸಲಾಗುತ್ತಿದೆ.

ಅತ್ಯಂತ ಮಹತ್ವ ಪಡೆದುಕೊಂಡಿರುವ ದೆಹಲಿ ಸಭೆಯಲ್ಲಿ ಇರಾನ್, ರಷ್ಯಾ, ತಜಕಿಸ್ತಾನ್, ಕಿರ್ಗಿಸ್ತಾನ್, ಕಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತುರ್ಕಿಮೆನಿಸ್ತಾನ್ ರಾಷ್ಟ್ರಗಳು ಭಾಗವಹಿಸಿವೆ. ಆದರೆ, ಈ ಸಭೆಗೆ ಪಾಕಿಸ್ತಾನ, ಚೈನಾ ರಾಷ್ಟ್ರಗಳಿಗೂ ಆಹ್ವಾನ ನೀಡಲಾಗಿತ್ತು. ಆದರೆ, ಎರಡೂ ರಾಷ್ಟ್ರಗಳು ಈ ಸಭೆ ತಿರಸ್ಕಾರ ಮಾಡಿವೆ.

ಈ ಮಧ್ಯೆ, ಅಫ್ಘಾನಿಸ್ತಾನ ಕುರಿತಂತೆ ಪ್ರಮುಖ ರಾಷ್ಟ್ರಗಳೊಂದಿಗೆ ಚರ್ಚೆ ನಡೆಸಲು ಪಾಕಿಸ್ತಾನ ಪ್ರತ್ಯೇಕ ಸಭೆಯೊಂದನ್ನು ಆಯೋಜನೆ ಮಾಡಿದೆ. ಈ ಟ್ರೋಯ್ಕಾ ಪ್ಲಸ್ ಸಂವಾದದಲ್ಲಿ ಚೀನಾ, ಅಮೆರಿಕ, ರಷ್ಯಾ ದೇಶದ ಹಿರಿಯ ರಾಜತಂತ್ರಿಕರಿಗೆ ಆಹ್ವಾನ ನೀಡಲಾಗಿದೆ. 

ಪಾಕಿಸ್ತಾನದ ವಿದೇಶಾಂಗ ಮಂತ್ರಿ ಶಾ ಮೆಹಮೂದ್ ಖುರೇಶಿ ಹಾಗೂ ಅಲ್ಲಿನ ಭದ್ರತಾ ಸಲಹೆಗಾರ ಮೋಯಿದ್ ಯುಸೂಫ್ ಮುಂದಾಳತ್ವದಲ್ಲಿ ಈ ಸಂವಾದ ನಡೆಯಲಿದೆ.  ಗುರುವಾರದಂದು ನಡೆಯಲಿರುವ ಈ ಟ್ರೋಯ್ಕಾ ಪ್ಲಸ್ ಸಭೆಯಲ್ಲಿ ಯಾವ್ಯಾವ ರಾಷ್ಟ್ರಗಳ ರಾಜತಾಂತ್ರಿಕರು ಭಾಗವಸುತ್ತಿದ್ದಾರೆ ಅನ್ನೋ ಬಗ್ಗೆ ಈವರೆಗೆ ಮಾಹಿತಿ ಹೊರಬಿದ್ದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com