'ಅಮೆರಿಕದಲ್ಲಿ ರಾಜೀನಾಮೆ ಪರ್ವ': ಅಮೆರಿಕನ್ನರಿಗೆ ಏನಾಗಿದೆ? ಏಕೆ ರಾಜೀನಾಮೆ ಕೊಡ್ತಿದ್ದಾರೆ?

ಮನುಷ್ಯ ಪ್ರತಿಯೊಂದು ಹಂತದಲ್ಲೂ ಶಕ್ತಿಶಾಲಿಯಾಗುತ್ತಿದ್ದಾನೆ. ಜಲ, ನೆಲ, ಆಗಸ, ಅಗ್ನಿ ಸೇರಿದಂತೆ ಪ್ರತಿಯೊಂದು ರಂಗದಲ್ಲೂ ತನ್ನನ್ನು ತಾನು ಸರ್ವೋತ್ತಮನನ್ನಾಗಿ ಮಾಡಿಕೊಳ್ಳುತ್ತಿದ್ದಾನೆ. ತನ್ನ ತೋಳ್ಬಲವನ್ನು ತೋರಿಸಿಕೊಳ್ಳಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಮನುಷ್ಯ ಪ್ರತಿಯೊಂದು ಹಂತದಲ್ಲೂ ಶಕ್ತಿಶಾಲಿಯಾಗುತ್ತಿದ್ದಾನೆ. ಜಲ, ನೆಲ, ಆಗಸ, ಅಗ್ನಿ ಸೇರಿದಂತೆ ಪ್ರತಿಯೊಂದು ರಂಗದಲ್ಲೂ ತನ್ನನ್ನು ತಾನು ಸರ್ವೋತ್ತಮನನ್ನಾಗಿ ಮಾಡಿಕೊಳ್ಳುತ್ತಿದ್ದಾನೆ. ತನ್ನ ತೋಳ್ಬಲವನ್ನು ತೋರಿಸಿಕೊಳ್ಳಲು ಅಣು ಬಾಂಬ್ ಸಹ ಕಂಡುಹಿಡಿದಿದ್ದಾನೆ. ಆದರೆ, ಕಣ್ಣಿಗೆ ಕಾಣದ ಕೊರೋನಾ ವೈರಸ್ ಮುಂದೆ ಸೋಲೊಪ್ಪಿಕೊಂಡಿದ್ದಾನೆ.

ಇದು ಇಲ್ಲಿಗೆ ನಿಲ್ಲಲ್ಲ... ಪ್ರತಿ ವರ್ಷವೂ ಹೊಸ ಹೊಸ ವೈರಸ್ ಗಳು ಹುಟ್ಟಿಕೊಳ್ಳುತ್ತವೆ. ಮನುಷ್ಯ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಹೋರಾಡುತ್ತಲೇ ಇರುತ್ತಾನೆ.

ಪ್ರಪಂಚಕ್ಕೆ ಕೊರೋನಾ ಲಗ್ಗೆ ಇಟ್ಟಿದ್ದೆ ತಡ ಜಗತ್ತು ಬದಲಾವಣೆಯ ಗಾಳಿಗೆ ಸಿಲುಕಿದೆ.. ಯಾವುದನ್ನು ಊಹಿಸಿಕೊಳ್ಳಲು ಅಸಾಧ್ಯವಾಗುತ್ತಿತ್ತೋ ಅದನ್ನು ಕ್ಷಣಕಾಲದಲ್ಲೇ ನಮ್ಮ ಮುಂದೆ ದರ್ಶನ ಮಾಡಿಸುತ್ತಿದೆ ಕಣ್ಣಿಗೆ ಕಾಣಿಸದ ವಸ್ತು. ಇದರಿಂದಾಗಿ ವಿಶ್ವದ ಕೆಲ ದೇಶಗಳು ಕೆಲಸ ಸಿಗುತ್ತಿಲ್ಲ ಅಂತಾ ಬಾಯಿ ಬಾಯಿ ಬಡಿದುಕೊಂಡ್ರೆ, ಅಮೆರಿಕಾದಲ್ಲಿ ಮಾತ್ರ ಕೆಲಸ ಬಿಡುವವರ ಸಂಖ್ಯೆಯಲ್ಲಿ ಹಠಾತ್ ಜಿಗಿತ ಕಂಡುಬಂದಿದೆ.

US ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ, ಸೆಪ್ಟೆಂಬರ್‌ನಲ್ಲಿ 44 ಲಕ್ಷ ಅಮೆರಿಕನ್ನರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಆಗಸ್ಟ್ ತಿಂಗಳಿಗಿಂತ 2 ಲಕ್ಷ ಅಧಿಕ. ಆಗಸ್ಟ್‌ನಲ್ಲಿ 43 ಲಕ್ಷ ಜನರು ಕೆಲಸ ತೊರೆದಿದ್ದರೆ, ಜುಲೈನಲ್ಲಿ 36 ಲಕ್ಷ ಉದ್ಯೋಗಿಗಳು ತಮ್ಮ ರಾಜೀನಾಮೆ ಬೀಸಾಕಿದ್ದಾರೆ.

ವಾಷಿಂಗ್ಟನ್ ಪೋಸ್ಟ್‌ (Washington Post) ವರದಿಯ ಪ್ರಕಾರ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್‌ಅಪ್‌ಗಳ (StratUp) ಸಂಖ್ಯೆ ಸಹ ಕೆಲಸ ಬಿಡಲು ಕಾರಣ. ಅಮೆರಿಕದಲ್ಲಿ ಉದ್ಯೋಗವನ್ನು ತೊರೆಯುವ ಹೆಚ್ಚಿನ ಜನರು ಸೇವಾ ಅಥವಾ ಚಿಲ್ಲರೆ ವಲಯದಲ್ಲಿ ತಮ್ಮನ್ನು ಗುರುತಿಸಿಕೊಂಡು ಜೀವನ ಕಂಡುಕೊಳ್ಳುತ್ತಿದ್ದಾರೆ.

ಕೊರೋನಾ ಹೊಡೆತದಿಂದಾಗಿ ಕೆಲವರು ಬಹಳ ಸಮಯದಿಂದ ಕೆಲಸ ಬದಲಾಯಿಸುವ ಬಗ್ಗೆ ಆಲೋಚನೆ ಮಾಡುತ್ತಿದ್ದರು. ಇನ್ನೂ ಕೆಲವರು ಸ್ಟಾರ್ಟಪ್ (StratUp) ಗಳತ್ತ ಮುಖ ಮಾಡುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಅಮೆರಿಕದಲ್ಲಿ ಕೆಲಸ ಬಿಡೋದ್ರಲ್ಲಿ ಮಹಿಳೆಯರ ಒಂದು ಕೈ ಮುಂದು ಅನ್ನೋ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com