ಅಮೆರಿಕ: H-1B ವೀಸಾದಾರರ ಪತ್ನಿಯರಿಗೆ ಉದ್ಯೋಗ ಪರವಾನಗಿ; ಬೈಡನ್ ಸರ್ಕಾರದ ಮಹತ್ವದ ನಿರ್ಧಾರ

H-1B ವೀಸಾ ಹೊಂದಿರುವವರಲ್ಲಿ ಬಹುತೇಕರು ಭಾರತೀಯ ಐಟಿ ಉದ್ಯೋಗಿಗಳಾಗಿದ್ದಾರೆ. ಬೈಡನ್ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿರುವುದು ಭಾರತೀಯರಿಗೆ ಸಂತಸ ತಂದಿದೆ. 
ಅಮೆರಿಕ ಅಧ್ಯಕ್ಷ ಜೊ ಬೈಡನ್
ಅಮೆರಿಕ ಅಧ್ಯಕ್ಷ ಜೊ ಬೈಡನ್
Updated on

ವಾಷಿಂಗ್ಟನ್: ವಲಸೆ ನಿಯಮಗಳನ್ನು ಸಡಿಲಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಅಮೆರಿಕ H-1B ವೀಸಾದಾರರ ಪತ್ನಿಯರು ಅಮೆರಿಕದಲ್ಲಿ ಉದ್ಯೋಗ ಮಾಡಲು ಅನುಮತಿ ನೀಡಿದೆ. ಅಮೆರಿಕದ ಬೈಡನ್ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿರುವುದು ಭಾರತೀಯರಿಗೆ ಸಂತಸ ತಂದಿದೆ. 

H-1B ವೀಸಾ ಹೊಂದಿರುವವರಲ್ಲಿ ಬಹುತೇಕರು ಭಾರತೀಯ ಐಟಿ ಉದ್ಯೋಗಿಗಳಾಗಿದ್ದಾರೆ. ವಿಶೇಷ ಪರಿಣತಿ ಪಡೆದಿರುವ ಕೌಶಲ್ಯಪೂರ್ಣ ವಿದೇಶಿ ಪ್ರಜೆಗಳು, ಪ್ರತಿಭಾನ್ವಿತರು ಅಮೆರಿಕದಲ್ಲಿ ನೌಕರಿ ಮಾಡಲು H-1B ವೀಸಾ ಅನುವು ಮಾಡಿಕೊಡುತ್ತದೆ. 

ಅಮೆರಿಕದ ಐಟಿ ಕಂಪನಿಗಳು ಇದೇ ವೀಸಾವನ್ನು ನೆಚ್ಚಿಕೊಂಡಿದೆ. ಭಾರತದಿಂದ ಮತ್ತು ಚೀನಾದಿಂದ ತಮ್ಮ ಸಂಸ್ಥೆಗಳಿಗೆ ಉದ್ಯೋಗಿಗಳನ್ನು ಇದೇ ವೀಸಾ ಆಧಾರದ ಮೇಲೆ ಕರೆಸಿಕೊಂಡು ಕೆಲಸ ಮಾಡಿಸಿಕೊಳ್ಳುತ್ತವೆ. 

ಹಾಗೆ ಅಮೆರಿಕಕ್ಕೆ ಬಂದ H-1B ವೀಸಾದಾರರ ಪತ್ನಿಯರು ಅಲ್ಲಿನ ನೆಲದಲ್ಲಿ ಕೆಲಸ ಮಾಡಲು ಪರವಾನಗಿ ಪಡೆಯಲು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಿತ್ತು. ಇದೀಗ H-1B ವೀಸಾದಾರ ಪತ್ನಿಯರಿಗೆ ಈ ಪರವಾನಗಿ ನೇರವಾಗಿಯೇ ದೊರೆಯಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com