ಓಮಿಕ್ರಾನ್ ಕೋವಿಡ್ ರೂಪಾಂತರಿ ವಿರುದ್ಧ ಲಸಿಕೆ ಬಗ್ಗೆ ಬ್ರಿಟನ್ ವಿಜ್ಞಾನಿಗಳು ಹೇಳ್ತಿರೋದೇನು? ಹೀಗಿದೆ ವಿವರ...

ಕೊರೋನಾ ವೈರಾಣು ವಿರುದ್ಧ ಆಸ್ಟ್ರಾಜೆನಿಕಾ ಲಸಿಕೆ ಅಭಿವೃದ್ಧಿಯ ನೇತೃತ್ವ ವಹಿಸಿದ್ದ ಬ್ರಿಟನ್ ವಿಜ್ಞಾನಿ ಹೊಸ ರೂಪಾಂತರಿ ಓಮಿಕ್ರಾನ್ ವೈರಾಣುವಿನ ಬಗ್ಗೆ ಮಾತನಾಡಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ (ಸಂಗ್ರಹ ಚಿತ್ರ)
ಕೋವಿಡ್-19 ಸಾಂಕ್ರಾಮಿಕ (ಸಂಗ್ರಹ ಚಿತ್ರ)

ಲಂಡನ್: ಕೊರೋನಾ ವೈರಾಣು ವಿರುದ್ಧ ಆಸ್ಟ್ರಾಜೆನಿಕಾ ಲಸಿಕೆ ಅಭಿವೃದ್ಧಿಯ ನೇತೃತ್ವ ವಹಿಸಿದ್ದ ಬ್ರಿಟನ್ ವಿಜ್ಞಾನಿ ಹೊಸ ರೂಪಾಂತರಿ ಓಮಿಕ್ರಾನ್ ವೈರಾಣುವಿನ ಬಗ್ಗೆ ಮಾತನಾಡಿದ್ದು, ಅಗತ್ಯವಿದ್ದಲ್ಲಿ ಇದಕ್ಕಾಗಿಯೇ ಹೊಸ ವೈರಾಣುವಿಗಾಗಿಯೇ ಪ್ರತ್ಯೇಕ ಲಸಿಕೆಯನ್ನು ಅಭಿವೃದ್ಧಿಪಡಿಸಬಹುದು ಎಂದು ಹೇಳಿದ್ದಾರೆ. 

ಆಕ್ಸ್ಫರ್ಡ್ ಲಸಿಕೆ ಸಮೂಹದ ನಿರ್ದೇಶಕ ಪ್ರೊಫೆಸರ್ ಆಂಡ್ರೂ ಪೋಲಾರ್ಡ್, ಈಗಿರುವ ಲಸಿಕೆಗಳೇ ಕೆಲಸ ಮಾಡಬೇಕು. ಮುಂದಿನ ವಾರಗಳಲ್ಲಿ ಈ ಬಗ್ಗೆ ಇನ್ನಷ್ಟು ಸಂಶೋಧನೆ ನಡೆದರೆ ಇದು ಸ್ಪಷ್ಟವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಲಸಿಕೆ ಪಡೆದ ಜನಸಂಖ್ಯೆಯಲ್ಲಿ, ಕಳೆದ ವರ್ಷ ಆದಂತೆ (ಡೆಲ್ಟಾ ರೂಪಾಂತರಿ) ಸಾಂಕ್ರಾಮಿಕ ಮರುಕಳಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಬಿಬಿಸಿ ರೇಡಿಯೋಗೆ ಆಂಡ್ರೂ ಪೋಲಾರ್ಡ್ ಹೇಳಿದ್ದಾರೆ. ಒಂದು ವೇಳೆ ಓಮಿಕ್ರಾನ್ ಗಾಗಿಯೇ ಪ್ರತ್ಯೇಕ ಲಸಿಕೆ ಬೇಕಾದಲ್ಲಿ, ತ್ವರಿತಗತಿಯಲ್ಲಿ ಆಗಬಹುದು ಎಂದು ಹೇಳಿದ್ದಾರೆ. 

ಬ್ರಿಟನ್ ನಲ್ಲಿ ಈ ವರೆಗೂ ಕೊರೋನಾದ ಓಮಿಕ್ರಾನ್ ನ ರೂಪಾಂತರಿಗಳು ಪತ್ತೆಯಾಗಿಲ್ಲ. ಆದರೆ ಬ್ರಿಟನ್ ಸರ್ಕಾರ ದಕ್ಷಿಣ ಆಫ್ರಿಕಾವೂ ಸೇರಿದಂತೆ ಆಫ್ರಿಕಾ ರಾಷ್ಟ್ರಗಳಿಗೆ ಪ್ರಯಾಣ ನಿರ್ಬಂಧವನ್ನು ವಿಧಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com