ಓಮಿಕ್ರಾನ್‌ ಭಯ ಭೀತಿಗೊಳ್ಳಬೇಕಾದ ಅಗತ್ಯವಿಲ್ಲ; ಡಬ್ಲ್ಯುಎಚ್‌ ಓ ಪ್ರತಿನಿಧಿ

ಕೊರೋನಾ ವೈರಸ್‌ ನ ಹೊಸ ರೂಪಾಂತರಿ ಓಮಿಕ್ರಾನ್ ಬಗ್ಗೆ ಭಯ ಭೀತಿಗೊಳಗಾಗಲು ಯಾವುದೇ ಕಾರಣಗಳಿಲ್ಲ ಎಂದು ರಷ್ಯಾ ದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರತಿನಿಧಿ ಮೆಲಿಟಾ ವುಜ್ನೋವಿಕ್ ಶನಿವಾರ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಾಸ್ಕೋ: ಕೊರೋನಾ ವೈರಸ್‌ ನ ಹೊಸ ರೂಪಾಂತರಿ ಓಮಿಕ್ರಾನ್ ಬಗ್ಗೆ ಭಯ ಭೀತಿಗೊಳಗಾಗಲು ಯಾವುದೇ ಕಾರಣಗಳಿಲ್ಲ ಎಂದು ರಷ್ಯಾ ದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರತಿನಿಧಿ ಮೆಲಿಟಾ ವುಜ್ನೋವಿಕ್ ಶನಿವಾರ ಹೇಳಿದ್ದಾರೆ.

ಈ ತಳಿಯ ಬಗ್ಗೆ ಯಾವುದೇ ಭಯ ಭೀತಿಗೆ ಒಳಗಾಗಬಾರದು ಎಂದು ನನಗೆ ಕಂಡುಬರುತ್ತಿದೆ... ಒಂದೊಮ್ಮೆ ಈ ವೈರಸ್ ಲಸಿಕೆಯನ್ನು ಬೈಪಾಸ್ ಮಾಡಿದರೆ, ಲಸಿಕೆಯ ಪರಿಣಾಮಕಾರಿತ್ವವನ್ನು ಅದು ಎಷ್ಟು ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ ಎಂಬುದು ನಮಗೆ ಈಗ ತಿಳಿದಿಲ್ಲ," ಎಂದು ವುಜ್ನೋವಿಕ್ ಸೊಲೊವೀವ್ ಲೈವ್ ಯೂಟ್ಯೂಬ್ ಶೋಗೆ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಲಸಿಕೆ ಉತ್ಪಾದಿಸುತ್ತಿದ್ದರೂ ಸಹ, ಆಫ್ರಿಕಾ ಸಾಕಷ್ಟು ಲಸಿಕೆ ಡೋಸ್‌ ಗಳನ್ನು ಹೊಂದಿಲ್ಲ" ಎಂದು ಅಧಿಕಾರಿ ಹೇಳಿದ್ದಾರೆ. ಆದಾಗ್ಯೂ, ಓಮಿಕ್ರಾನ್ ರೂಪಾಂತರಿ ಇತರ ತಳಿಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿರಬಹುದು ಎಂದು ವುಜ್ನೋವಿಕ್ ಊಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com