ಕೋವಿಡ್-19 ಹೊಸ ಲಸಿಕೆಗಳ ಉತ್ಪಾದನೆಗೆ ಕಚ್ಚಾ ವಸ್ತುಗಳ ಪೂರೈಕೆ ಕೊಂಡಿಯನ್ನು ಮುಕ್ತವಾಗಿಡಬೇಕು: ವಿಶ್ವಸಂಸ್ಥೆಯಲ್ಲಿ ಭಾರತ ಹೇಳಿಕೆ

ಕೋವಿಡ್-19ಗೆ ಹೊಸ ಲಸಿಕೆಗಳು ತಯಾರಿಕೆಯ ಹಂತದಲ್ಲಿದ್ದು, ಭಾರತದ ಉತ್ಪಾದನಾ ಸಾಮರ್ಥ್ಯ ಹೆಚ್ಚಲಿದೆ. ಕೋವಿಡ್-19 ಲಸಿಕೆಗಳು ಜಗತ್ತಿನ ಮೂಲೆಮೂಲೆಗಳಿಗೂ ತಲುಪಬೇಕಾಗುವುದರಿಂದ ಲಸಿಕೆ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಪೂರೈಸುವ ಕೊಂಡಿಯನ್ನು ಮುಕ್ತವಾಗಿಡಬೇಕಾಗುತ್ತದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಹೇಳಿದೆ.
ವಿಶ್ವಸಂಸ್ಥೆಯ ಭಾರತದ ಅಂಬಾಸಿಡರ್ ಟಿ ಎಸ್ ತಿರುಮೂರ್ತಿ
ವಿಶ್ವಸಂಸ್ಥೆಯ ಭಾರತದ ಅಂಬಾಸಿಡರ್ ಟಿ ಎಸ್ ತಿರುಮೂರ್ತಿ

ಯುನೈಟೆಡ್ ನೇಶನ್ಸ್: ಕೋವಿಡ್-19ಗೆ ಹೊಸ ಲಸಿಕೆಗಳು ತಯಾರಿಕೆಯ ಹಂತದಲ್ಲಿದ್ದು, ಭಾರತದ ಉತ್ಪಾದನಾ ಸಾಮರ್ಥ್ಯ ಹೆಚ್ಚಲಿದೆ. ಕೋವಿಡ್-19 ಲಸಿಕೆಗಳು ಜಗತ್ತಿನ ಮೂಲೆಮೂಲೆಗಳಿಗೂ ತಲುಪಬೇಕಾಗುವುದರಿಂದ ಲಸಿಕೆ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಪೂರೈಸುವ ಕೊಂಡಿಯನ್ನು ಮುಕ್ತವಾಗಿಡಬೇಕಾಗುತ್ತದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಹೇಳಿದೆ.

ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಟಿ ಎಸ್ ತಿರುಮೂರ್ತಿ, ಭಾರತ ವೈದ್ಯಕೀಯ ಸಂಬಂಧಿ ನೆರವನ್ನು ನೀಡುತ್ತಿದ್ದು ಮತ್ತು ಪ್ರಪಂಚದಾದ್ಯಂತದ ಹಲವಾರು ದೇಶಗಳಿಗೆ ಲಸಿಕೆಗಳನ್ನು ಒದಗಿಸಿದೆ ಎಂದು ಹೇಳಿದೆ.

ಕೋವಿಡ್ ಬಿಕ್ಕಟ್ಟು ಇನ್ನೂ ಕೊನೆಯಾಗದಿರುವಾಗ ನಾವು ಭೇಟಿಯಾಗಿದ್ದೇವೆ. ಲಸಿಕೆಗಳನ್ನು ನಾವು ಪ್ರಪಂಚದ ಮೂಲೆಮೂಲೆಗಳಿಗೆ ತಲುಪಿಸಿದ್ದೇವೆ. 2030ರ ಬಿಕ್ಕಟ್ಟು, ಸ್ಥಿತಿಸ್ಥಾಪಕತ್ವ ಮತ್ತು ಚೇತರಿಕೆಯ ವೇಗವರ್ಧನೆಯ ಪ್ರಗತಿಯ ಎರಡನೇ ಸಮಿತಿಯ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾರ್ಯಸೂಚಿಯ ಕುರಿತು ಚರ್ಚೆ ವೇಳೆ ಟಿ ಎಸ್ ತಿರುಮೂರ್ತಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ ನಾವು ಹೊಸ ಲಸಿಕೆಗಳನ್ನು ಪರಿಚಯಿಸಲು ನಮ್ಮ ಸಹಭಾಗಿಗಳ ಜೊತೆ ಕೆಲಸ ಮಾಡುತ್ತೇವೆ, ಹೇಗಾದರೂ ಮಾಡಿ ಈ ಕೋವಿಡ್-19 ಸಾಂಕ್ರಾಮಿಕವನ್ನು ಕೊನೆಗೊಳಿಸಬೇಕು. ಇದಕ್ಕಾಗಿ ಕಚ್ಚಾ ಸಾಮಗ್ರಿಗಳನ್ನು ಪೂರೈಸುವ ಕೊಂಡಿಯನ್ನು ಮುಕ್ತವಾಗಿ ಇಡಬೇಕು ಎಂದು ತಿರುಮೂರ್ತಿ ಹೇಳಿದರು.

2021ರ ನಾಲ್ಕನೇ ತ್ರೈಮಾಸಿಕದಲ್ಲಿ ಹೆಚ್ಚುವರಿ ಕೋವಿಡ್-19 ಲಸಿಕೆಗಳನ್ನು ವ್ಯಾಕ್ಸಿನ್ ಮೈತ್ರಿ ಕಾರ್ಯಕ್ರಮದಡಿ ರಫ್ತು ಮಾಡಲಿದ್ದು, ಕೊವಾಕ್ಸ್ ಜಾಗತಿಕ ಬದ್ಧತೆಯನ್ನು ಪೂರೈಸುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com