ಅಮೇರಿಕಾ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು
ಅಮೇರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. 75 ವರ್ಷ ಕ್ಲಿಂಟನ್ ಅವರನ್ನು ದಕ್ಷಿಣ ಕ್ಯಾಲಿಫೋರ್ನಿಯಾದ ಇರ್ವಿನ್ನಲ್ಲಿರುವ ಆಸ್ಪತ್ರೆಯೊಂದಕ್ಕೆ ಮಂಗಳವಾರ ಸಂಜೆ ದಾಖಲಿಸಲಾಗಿದೆ.
Published: 15th October 2021 11:26 AM | Last Updated: 15th October 2021 11:26 AM | A+A A-

ಬಿಲ್ ಕ್ಲಿಂಟನ್
ವಾಷಿಂಗ್ಟನ್: ಅಮೇರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. 75 ವರ್ಷ ಕ್ಲಿಂಟನ್ ಅವರನ್ನು ದಕ್ಷಿಣ ಕ್ಯಾಲಿಫೋರ್ನಿಯಾದ ಇರ್ವಿನ್ನಲ್ಲಿರುವ ಆಸ್ಪತ್ರೆಯೊಂದಕ್ಕೆ ಮಂಗಳವಾರ ಸಂಜೆ ದಾಖಲಿಸಲಾಗಿದೆ ಎಂದು ಏಂಜೆಲ್ ಅರೇನಾ ಟ್ವೀಟ್ ಮಾಡಿದ್ದಾರೆ.
ಬಿಲ್ ಕ್ಲಿಂಟನ್ ಅವರ ವಕ್ತಾರರಾಗಿರುವ ಏಂಜೆಲ್, ಟ್ವೀಟ್ ಮುಖಾಂತರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬಿಲ್ ಕ್ಲಿಂಟನ್ ಅವರನ್ನು ಕೊವಿಡ್ ಹೊರತಾದ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಲ್ ಕ್ಲಿಂಟನ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ ಎರಡು ದಿನಗಳ ನಂತರ ಉತ್ತಮವಾಗಿ ಚೇತರಿಕೆ ಕಾಣುತ್ತಿದ್ದಾರೆ ಎಂದು ಏಂಜೆಲ್ ತಿಳಿಸಿದ್ದಾರೆ. ಇದಕ್ಕಾಗಿ ಅವರು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಕ್ಲಿಂಟನ್ ಅವರಿಗೆ 2004ರಲ್ಲಿ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿತ್ತು. ಆದರೆ ಪ್ರಸ್ತುತ ಆಸ್ಪತ್ರೆಯ ಸಿಬ್ಬಂದಿ ಕ್ಲಿಂಟನ್ ಅವರನ್ನು ಮತ್ತೆ ಈ ಸಮಸ್ಯೆಯಿಂದ ದಾಖಲಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಕೊವಿಡ್ ಸಂಬಂಧಿ ಸಮಸ್ಯೆಗಳೂ ಅವರಲ್ಲಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.