ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣು ತನಿಖೆ ತೀವ್ರ: ಬ್ರಿಟನ್ ನಲ್ಲಿ ಪ್ರಕರಣಗಳ ಹೆಚ್ಚಳ

ಡೆಲ್ಟಾ ವೈರಾಣುವಿಗಿಂತ ಡೆಲ್ಟಾ ಪ್ಲಸ್ ವೈರಾಣು ಅತಿ ವೇಗವಾಗಿ ಹರಡುತ್ತಿರುವುದು ಗಮನಕ್ಕೆ ಬಂದಿದ್ದು, ಆರೋಗ್ಯ ಸಿಬ್ಬಂದಿ ಎಚ್ಚರ ವಹಿಸಿದ್ದಾರೆ. ಇದೇ ವೇಳೆ ಆರೋಗ್ಯಾಧಿಕಾರಿಗಳು ಕೊರೊನಾ ಸಾಂಕ್ರಾಮಿಕ ಇನ್ನೂ ಕೊನೆಗೊಂಡಿಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.
ಲಂಡನ್ ನಲ್ಲಿ ಶಾಪಿಂಗ್ ಮಾಡುತ್ತಿರುವ ನಾಗರಿಕರು
ಲಂಡನ್ ನಲ್ಲಿ ಶಾಪಿಂಗ್ ಮಾಡುತ್ತಿರುವ ನಾಗರಿಕರು

ಲಂಡನ್: ಕೊರೊನಾ ಡೆಲ್ಟಾ ಪ್ಲಸ್ ರೂಪಾಂತರಿ ತಳಿಯ ವೈರಾಣು ಸೋಂಕು ಇತ್ತೀಚಿನ ದಿನಗಳಲ್ಲಿ ಹೆಚ್ಚಳ ಕಾಣುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ದೇಶದಾದ್ಯಂತ ಕಟ್ಟೆಚ್ಚರದಿಂದ ನಿಗಾ ಇರಿಸಲಾಗುತ್ತಿದೆ.

ಡೆಲ್ಟಾ ಪ್ಲಸ್ ವೈರಾಣುವನ್ನು ವೇರಿಯೆಂಟ್ ಅಂಡರ್ ಇನ್ವೆಸ್ಟಿಗೇಷನ್ (VUI) ಅಡಿ ನಿಗಾ ಇರಿಸಿದೆ. ಇದೇ ವೇಳೆ ಆರೋಗ್ಯಾಧಿಕಾರಿಗಳು ಕೊರೊನಾ ಸಾಂಕ್ರಾಮಿಕ ಇನ್ನೂ ಕೊನೆಗೊಂಡಿಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

ಡೆಲ್ಟಾ ವೈರಾಣುವಿಗಿಂತ ಡೆಲ್ಟಾ ಪ್ಲಸ್ ವೈರಾಣು ಅತಿ ವೇಗವಾಗಿ ಹರಡುತ್ತಿರುವುದು ಗಮನಕ್ಕೆ ಬಂದಿದ್ದು, ಆರೋಗ್ಯ ಸಿಬ್ಬಂದಿ ಎಚ್ಚರ ವಹಿಸಿದ್ದಾರೆ. 

ಬ್ರಿಟನ್ ಆರೋಗ್ಯ ಇಲಾಖೆಯ ಅಧಿಕೃತ ದಾಖಲೆ ಪ್ರಕಾರ ಭಾರತದಲ್ಲಿ ಮೊದಲು ಕಂಡು ಬಂದಿದ್ದ ಡೆಲ್ಟಾ ವೈರಾಣು ವೇರಿಯೆಂಟ್ ಆಫ್ ಕನ್ಸರ್ನ್ ಪಟ್ಟಿಗೆ ಸೇರಿಸಲಾಗಿತ್ತು. ನಂತರದ ದಿನಗಳಲ್ಲಿ ಬ್ರಿಟನ್ ನಲ್ಲಿ ಪತ್ತೆಯಾದ ಕೊರೊನಾ ಪ್ರಕರಣಗಳಲ್ಲಿ ಶೇ.೯೯.೮ ಪ್ರತಿಶತ ಮಂದಿ ಡೆಲ್ಟಾ ವೈರಾಣುವಿಗೆ ತುತ್ತಾಗಿದ್ದರು. 

ಇದೀಗ ಡೆಲ್ಟಾ ಪ್ಲಸ್ ರೂಪಾಂತರಿ ತಳಿ ಅಲ್ಲಿನ ಅಧಿಕಾರಿಗಳ ನಿದ್ದೆಗೆಡಿಸಿದೆ. ಈ ಕಾರಣಕ್ಕೆ ಡೆಲ್ಟಾ ಪ್ಲಸ್ ವೈರಾಣುವನ್ನು ಕುರಿತು ಅಧ್ಯಯನ ನಡೆಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com