ತನಿಖಾ ಹಂತದ ರೂಪಾಂತರಿ (ವೇರಿಯೆಂಟ್‌ ಆಫ್‌ ಇನ್ವೆಸ್ಟಿಗೇಷನ್‌): ಹೊಸ ಕೋವಿಡ್-19 ವೈರಸ್ ಕುರಿತು WHO

ಭಾರತಸ ಬ್ರಿಟನ್ ಮತ್ತು ರಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ನಿಧಾನವಾಗಿ ಸುದ್ದಿಗೆ ಗ್ರಾಸವಾಗುತ್ತಿರುವ ಕೋವಿಡ್ ವೈರಸ್ ನ ಡೆಲ್ಟಾ ರೂಪಾಂತರದ ನೂತನ ರೂಪಾಂತರ ತಳಿ ಎವೈ4.2 ತನಿಖಾ ಹಂತದ ರೂಪಾಂತರಿ (ವೇರಿಯೆಂಟ್‌ ಆಫ್‌ ಇನ್ವೆಸ್ಟಿಗೇಷನ್‌) ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಭಾರತಸ ಬ್ರಿಟನ್ ಮತ್ತು ರಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ನಿಧಾನವಾಗಿ ಸುದ್ದಿಗೆ ಗ್ರಾಸವಾಗುತ್ತಿರುವ ಕೋವಿಡ್ ವೈರಸ್ ನ ಡೆಲ್ಟಾ ರೂಪಾಂತರದ ನೂತನ ರೂಪಾಂತರ ತಳಿ ಎವೈ4.2 ತನಿಖಾ ಹಂತದ ರೂಪಾಂತರಿ (ವೇರಿಯೆಂಟ್‌ ಆಫ್‌ ಇನ್ವೆಸ್ಟಿಗೇಷನ್‌) ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಬಗ್ಗೆ  ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮೂಲಗಳು ಪ್ರಸ್ತುತ ಪತ್ತೆಯಾಗಿರುವ ಈ ಎವೈ 4.2 ರೂಪಾಂತರಿ ಕುರಿತು ಸಂಶೋಧನೆಗಳು ನಡೆಯುತ್ತಿದ್ದು, ಸದ್ಯಕ್ಕೆ ಈ ವೈರಾಣುವನ್ನು ಇನ್ನೂ ವೇರಿಯೆಂಟ್‌ ಆಫ್‌ ಇನ್ವೆಸ್ಟಿಗೇಷನ್‌ (ತನಿಖಾ ಹಂತದ ರೂಪಾಂತರಿ) ಎಂದೇ ಪರಿಗಣಿಸಲಾಗಿದೆ. ಇದು ಕೂಡಾ ಡೆಲ್ಟಾಅಥವಾ ಡೆಲ್ಟಾಪ್ಲಸ್‌ನಷ್ಟೇ ಅಪಾಯಕಾರಿ ಎಂದು ಹೆಚ್ಚಿನ ಅಧ್ಯಯನ ವರದಿಗಳಿಂದ ಸಾಬೀತಾದರೆ ಬಳಿಕ ಅದನ್ನು ವೇರಿಯಂಟ್‌ ಆಫ್‌ ಕನ್ಸರ್ನ್‌ ಎಂದು ಪಟ್ಟಿಮಾಡಲಾಗುತ್ತದೆ ಎಂದು ಹೇಳಿದೆ.

ಭಾರತದಲ್ಲಿ ಮೊದಲಿಗೆ ಪತ್ತೆಯಾಗಿ, ನಂತರ ಅಮೆರಿಕ, ಬ್ರಿಟನ್‌ ಸೇರಿ ಹಲವು ದೇಶಗಳಲ್ಲಿ ಭಾರೀ ಪ್ರಮಾಣದ ಸೋಂಕು ಸಾವಿಗೆ ಕಾರಣವಾಗಿದ್ದ ಡೆಲ್ಟಾತಳಿಯ ಉಪ ತಳಿಗೆ 'ಎವೈ 4.2' ಎಂದು ಹೆಸರಿಡಲಾಗಿದೆ. ಇದು ಡೆಲ್ಟಾಗಿಂತ ಹೆಚ್ಚು ಸೋಂಕುಕಾರಕ ಎಂಬುದು ವಿಜ್ಞಾನಿಗಳ ಪ್ರಾಥಮಿಕ ವಿಶ್ಲೇಷಣೆಗಳಿಂದ ಕಂಡುಬಂದಿದೆ. ಹೀಗಾಗಿಯೇ ಈ ಹೊಸ ರೂಪಾಂತರಿ ಬಗ್ಗೆ ಇದೀಗ ವಿಶ್ವದಾದ್ಯಂತ ಆತಂಕ ಎದುರಾಗಿದೆ. ಇದು ಭಾರತ ಮತ್ತು ವಿಶ್ವದ ಹಲವು ದೇಶಗಳಲ್ಲಿ 3 ಮತ್ತು 4ನೇ ಅಲೆಗೂ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com