ದೇಶದಲ್ಲಿ ದೊಡ್ಡದಾದ ಹೊಸ ಕೋವಿಡ್ ಅಲೆ ಬರುವ ಸಾಧ್ಯತೆಯಿಲ್ಲ: ತಜ್ಞರ ಹೇಳಿಕೆ

ಕೋವಿಡ್-2ನೇ ಅಲೆಯಂತಹ ವಿನಾಶಕಾರಿ ಅಲೆ ದೇಶದಲ್ಲಿ ಬರುವ ಸಾಧ್ಯತೆಯಿಲ್ಲ, ಆದರೆ,  ಪ್ರಕರಣಗಳ ಸಂಖ್ಯೆ ಕಡಿಮೆಯಾದ ಮಾತ್ರಕ್ಕೆ ಸಾಂಕ್ರಾಮಿಕ ಈಗ ಅಂತ್ಯವಾಯಿತು ಅಂತಾ ಭಾವಿಸುವುದಕ್ಕೆ ಅರ್ಥವಿಲ್ಲ ಎಂದು ಅನೇಕ ತಜ್ಞರು ಶುಕ್ರವಾರ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್-2ನೇ ಅಲೆಯಂತಹ ವಿನಾಶಕಾರಿ ಅಲೆ ದೇಶದಲ್ಲಿ ಬರುವ ಸಾಧ್ಯತೆಯಿಲ್ಲ, ಆದರೆ,  ಪ್ರಕರಣಗಳ ಸಂಖ್ಯೆ ಕಡಿಮೆಯಾದ ಮಾತ್ರಕ್ಕೆ ಸಾಂಕ್ರಾಮಿಕ ಈಗ ಅಂತ್ಯವಾಯಿತು ಅಂತಾ ಭಾವಿಸುವುದಕ್ಕೆ ಅರ್ಥವಿಲ್ಲ ಎಂದು ಅನೇಕ ತಜ್ಞರು ಶುಕ್ರವಾರ ಹೇಳಿದ್ದಾರೆ.

ದೀಪಾವಳಿ ಹಬ್ಬ ಮುಂದಿರುವಂತೆ ಪ್ರಕರಣಗಳ ಸಂಖ್ಯೆ ಹೆಚ್ಚಳದ ಮುನ್ನೆಚ್ಚರಿಕೆಯೊಂದಿಗೆ ಭರವಸೆ ನೀಡಿರುವ ತಜ್ಞರು, ಕೋವಿಡ್ ಗ್ರಾಫ್ ಇಳಿಕೆ ಕೇವಲ ಚಿತ್ರದ ಭಾಗವಾಗಿದೆ. ಮರಣ ಪ್ರಮಾಣದಂತಹ ಅಂಶಗಳನ್ನು ನೋಡಿದರೆ ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡುವಿಕೆಯ ಅಗತ್ಯವಿದೆ. ಉದಾಹರಣೆಗೆ ಇಂಗ್ಲೆಂಡ್ ನಂತರ ರಾಷ್ಟ್ರಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ 100 ಕೋಟಿ ಗೂ ಅಧಿಕ ಡೋಸ್  ಕೋವಿಡ್ ಲಸಿಕೆ ನೀಡಿಕೆ ಸಾಧನೆ ನಂತರ ಹೇಳಿಕೆ ನೀಡಿರುವ ವೈರಾಣು ಶಾಸ್ತ್ರಜ್ಞ ಶಾಹೀದ್ ಜಮೀಲ್, ಲಸಿಕೆ ಪ್ರಮಾಣದಲ್ಲಿ ಗಮನಾರ್ಹ ರೀತಿಯಲ್ಲಿ ಪ್ರಗತಿಯಾಗಿದೆ ಆದರೆ, ಇದು ಮತ್ತಷ್ಟು ಹೆಚ್ಚಾಗಬೇಕಾದ ಅಗತ್ಯಿವಿದೆ ಎಂದಿದ್ದಾರೆ.

ಇನ್ನೂ ಸಾಂಕ್ರಾಮಿಕ ಅಂತ್ಯಗೊಂಡ ಹಂತದಲ್ಲಿರುವುದಾಗಿ ನಾನು ಖಚಿತಪಡಿಸುವುದಿಲ್ಲ, 100 ಕೋಟಿ ಡೋಸ್ ಲಸಿಕೆ ನೀಡಿಕೆಯಲ್ಲಿ ಸಾಧನೆಗಾಗಿ ಸಂಭ್ರಮಿಸುತ್ತಿದ್ದು,ಇನ್ನೂ ಕೆಲವು ದೂರ ತಲುಪಬೇಕಾಗಿದೆ. ಸಾಂಕ್ರಾಮಿಕ ಅಂತ್ಯದತ್ತ ಸಾಗುತ್ತಿದ್ದೇವೆ. ಆದರೆ, ಇನ್ನೂ ನಿಯಂತ್ರಣವಾಗಿಲ್ಲ ಎಂದು ಹರಿಯಾಣದ ಅಶೋಕ ವಿಶ್ವವಿದ್ಯಾನಿಲಯದ ಅತಿಥಿ ಪ್ರೊಫೆಸರ್ ಜಮೀಲ್ ಹೇಳಿದ್ದಾರೆ.

ದೇಶದ ಕೆಲವು ಭಾಗಗಳಲ್ಲಿ ಸಾಂಕ್ರಾಮಿಕ ಅಂತ್ಯದ ಸನ್ನಿಹದಲ್ಲಿರುವ  ಸಾಧ್ಯತೆಯಿದೆ, ಆದರೆ ಇದನ್ನು ದೃಢೀಕರಿಸಲು ಅಗತ್ಯವಾದ ದತ್ತಾಂಶಗಳು ಸುಲಭವಾಗಿ ಲಭ್ಯವಿಲ್ಲ ಎಂದು ಭಾರತದ ಕೋವಿಡ್ ಗ್ರಾಫ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಯುಕೆಯ ಮಿಡ್ಲ್‌ಸೆಕ್ಸ್ ವಿಶ್ವವಿದ್ಯಾಲಯದ ಗಣಿತದ ಹಿರಿಯ ಉಪನ್ಯಾಸಕ ಮುರಾದ್ ಬಣಜಿ ಹೇಳುತ್ತಾರೆ. 

ಉದಾಹರಣೆಗೆ ಲಸಿಕೆ ಪಡೆದ ಎಷ್ಟು ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ ಅಥವಾ ಅದಕ್ಕೂ ಮುಂಚಿನ ಸೋಂಕು  ಸೇರಿದಂತೆ ಹಲವಾರು ಅಂಶಗಳು ತಮಗೆ ತಿಳಿದಿಲ್ಲ, ಕೋವಿಡ್ -19 ಯಾವಾಗ ನಿರ್ಮೂಲನೆಯಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಇನ್ನೂ ಅದು ಹರಡದಂತೆ ಮುಂಜಾಗ್ರತೆ ವಹಿಸಬೇಕಾದ ಅಗತ್ಯವಿದೆ ಎಂದು ಬಜಣಿ ತಿಳಿಸಿದ್ದಾರೆ. 

"ಕೋವಿಡ್ -19 ದೇಶಕ್ಕೆ ಭವಿಷ್ಯದಲ್ಲಿ ಮಹತ್ವದ ಬೆದರಿಕೆಯನ್ನುಂಟುಮಾಡುತ್ತದೆಯೇ? ಎಂಬುದನ್ನು ನಿರ್ಧರಿಸಲು ನಾವು ಇನ್ನೂ ಎರಡು ತಿಂಗಳು ಕಾಯಬೇಕು ಎಂದು ನಾನು ನಂಬುತ್ತೇನೆ ಎಂದು ವಾಷಿಂಗ್ಟನ್‌ನ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್  ಅಂಡ್ ಪಾಲಿಸಿಯ ನಿರ್ದೇಶಕ ಲಕ್ಷ್ಮಿನಾರಾಯಣ ಅವರು ಪಿಟಿಐ ಸುದ್ದಿಸಂಸ್ಥೆಗೆ ಇಮೇಲ್ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com