ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಲ್ಲಿ ಕುಟುಂಬ ನಿರ್ವಹಣೆಗೆ ಸ್ವಂತ ಮಕ್ಕಳ ಮಾರಾಟ

ಕಾಬೂಲ್ ನಲ್ಲಿ ಮಹಿಳೆಯೊಬ್ಬರು, ತನ್ನ ಹಸುಗೂಸನ್ನು 37 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾಳೆ. ಈ ಬಗ್ಗೆ ಪ್ರಶ್ನಿಸಿದರೆ, ಉಳಿದವರ ಪ್ರಾಣ ಉಳಿಬೇಕಂದ್ರೆ ಈ ಮಗು ಮಾರಾಟ ಮಾಡಲೇಬೇಕಿತ್ತು ಎಂದು ಅಸಹಾಯಕತೆ ತೋರ್ಪಡಿಸಿಕೊಂಡಿದ್ದಾಳೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾಬೂಲ್: ಹೊರಗಡೆ ಹೋದ್ರೆ ಬಾಂಬ್ ಸ್ಫೋಟ. ಮನೆಯಲ್ಲಿದ್ರೆ ಮಕ್ಕಳ ಆಕ್ರಂದನ. ಅನ್ನ-ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಹೌದು, ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಹಿಡಿತಕ್ಕೆ ಸಿಕ್ಕ ಮೇಲೆ ದೇಶ ನರಕವಾಗಿಬಿಟ್ಟಿದೆ. ಮಹಿಳೆಯರು, ಮಕ್ಕಳಿಗಂತೂ ರಕ್ಷಣೆಯೇ ಇಲ್ಲ. ಹೊಟ್ಟೆಗೆ ಹಿಟ್ಟಿಲ್ಲದೆ ದಿನ ದೂಡೂವುದು ಅಫ್ಘನ್ ಪ್ರಜೆಗಳಿಗೆ ಕಾಯಕವಾಗಿದೆ. ಈ ಸಮಯದಲ್ಲಿ ಸಿಕ್ಕ ಸಿಕ್ಕ ಬೆಲೆಗೆ ಮಕ್ಕಳನ್ನು ಮಾರಾಟ ಮಾಡಿ ಅಲ್ಲಿನ ಮಹಿಳೆಯರು ಇನ್ನುಳಿದ ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದಾರೆ.

ಕಾಬೂಲ್ ನಲ್ಲಿ ಮಹಿಳೆಯೊಬ್ಬರು, ತನ್ನ ಹಸುಗೂಸನ್ನು 37 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾಳೆ. ಈ ಬಗ್ಗೆ ಪ್ರಶ್ನಿಸಿದರೆ, ಉಳಿದವರ ಪ್ರಾಣ ಉಳಿಬೇಕಂದ್ರೆ ಈ ಮಗು ಮಾರಾಟ ಮಾಡಲೇಬೇಕಿತ್ತು ಅಂತಾ ಮಹಿಳೆ ತಿಳಿಸುತ್ತಾಳೆ. ಪಶ್ಚಿಮ ಅಫ್ಘಾನಿಸ್ತಾನದ ಮತ್ತೊಬ್ಬ ಮಹಿಳೆ, ಹೊಟ್ಟೆ ತುಂಬಿಸಿಕೊಳ್ಳಲು ತನ್ನ ಗಂಡ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆಗಾಗಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. 6 ವರ್ಷ ಹಾಗೂ 18 ವರ್ಷದ ಇಬ್ಬರು ಮಕ್ಕಳನ್ನು ಸ್ವಲ್ಪ ದೊಡ್ಡವರಾದ ಮೇಲೆ ಖರೀದಿದಾರರಿಗೆ ಒಪ್ಪಿಸಬೇಕಿದೆ ಅಂತಾ ಹೇಳಿದ್ದಾಳೆ.

ಇದು ಒಂದು ಕುಟುಂಬದ ಪರಿಸ್ಥಿತಿಯಲ್ಲ. ನೂರಾರು ಕುಟುಂಬಗಳು ತಮ್ಮ ಮಕ್ಕಳನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲವರು ಪುಟ್ಟ ಕಂದಮ್ಮಗಳನ್ನು ಮಾರಾಟ ಮಾಡುವುದಕ್ಕೋಸ್ಕರ ಚಿಂತನೆ ಮಾಡುತ್ತಿದ್ದಾರೆ ಅಂತಾ ಅಲ್ಲಿನ ಮಹಿಳೆಯರು ತಿಳಿಸುತ್ತಾರೆ.
ಅಫ್ಘಾನಿಸ್ತಾನದಲ್ಲಿ ಬಾಲ್ಯ ವಿವಾಹ ಪದ್ಧತಿ ಶತಮಾನಗಳಿಂದಲೂ ನಡೆಯುತ್ತಾ ಬಂದಿದೆ. ಆದರೆ, ತಾಲಿಬಾನ್ ಆಕ್ರಮಣದ ನಂತ್ರ ಬಡತನ ಹಾಗೂ ಹಿಂಸೆಯಿಂದಾಗಿ ಮದುವೆಯಾದವರನ್ನು ಸಹ ಮಾರಾಟ ಮಾಡುವ ಸ್ಥಿತಿ ಅಲ್ಲಿನ ಜನ ಎದುರಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com