ಮುಂದಿನ ವರ್ಷ 5 ಬಿಲಿಯನ್ ಕೋವಿಡ್ ಲಸಿಕೆಗಳನ್ನು ತಯಾರಿಸಲು ಭಾರತ ಸಿದ್ಧವಾಗಿದೆ: ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ 

ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಜಗತ್ತಿಗೆ ಸಹಾಯ ಮಾಡಲು ಭಾರತವು ಮುಂದಿನ ವರ್ಷ 5 ಬಿಲಿಯನ್ ಕೋವಿಡ್ ಲಸಿಕೆ ಡೋಸ್‌ಗಳನ್ನು ಉತ್ಪಾದಿಸಲು ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಿ20 ಸಭೆಯಲ್ಲಿ ಪ್ರಧಾನಿ ಮೋದಿ
ಜಿ20 ಸಭೆಯಲ್ಲಿ ಪ್ರಧಾನಿ ಮೋದಿ
Updated on

ರೋಮ್: ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಜಗತ್ತಿಗೆ ಸಹಾಯ ಮಾಡಲು ಭಾರತವು ಮುಂದಿನ ವರ್ಷ 5 ಬಿಲಿಯನ್ ಕೋವಿಡ್ ಲಸಿಕೆ ಡೋಸ್‌ಗಳನ್ನು ಉತ್ಪಾದಿಸಲು ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರೋಮ್‌ನಲ್ಲಿ ನಡೆಯುತ್ತಿರುವ ಜಿ -20 ಶೃಂಗಸಭೆಯ ಅಧಿವೇಶನದಲ್ಲಿ ಮಾತನಾಡಿರುವ ಅವರು, ವಿಶ್ವ ಆರೋಗ್ಯ ಸಂಸ್ಥೆ ಭಾರತೀಯ ಲಸಿಕೆಗಳನ್ನು ಆದಷ್ಟು ಬೇಗ ಅನುಮೋದಿಸುವುದು ಅಗತ್ಯವಾಗಿತ್ತು ಎಂದು ಕೂಡ ಹೇಳಿದ್ದಾರೆ.

"ಜಾಗತಿಕ ಆರ್ಥಿಕತೆ ಮತ್ತು ಜಾಗತಿಕ ಆರೋಗ್ಯ" ಕುರಿತ ಅಧಿವೇಶನದಲ್ಲಿ ಪ್ರಧಾನಿಯವರು ಭಾಗವಹಿಸಿ ಮಾತನಾಡಿ, ಅಂತರಾಷ್ಟ್ರೀಯ ಪ್ರಯಾಣವನ್ನು ಸುಗಮಗೊಳಿಸುವ ಮತ್ತು ಇದನ್ನು ಸಾಧಿಸುವ ಸಾಧನವಾಗಿ ಲಸಿಕೆ ಪ್ರಮಾಣೀಕರಣವನ್ನು ಪರಸ್ಪರ ಗುರುತಿಸುವ ಕಾರ್ಯವಿಧಾನದ ಬಗ್ಗೆ ಮಾತನಾಡಿದರು.

ಜಾಗತಿಕ ಹಣಕಾಸು ವಿನ್ಯಾಸ ಇನ್ನಷ್ಟು ಸುಗಮಗೊಳಿಸಲು ಶೇಕಡಾ 15ರಷ್ಟು ಕನಿಷ್ಠ ಕಾರ್ಪೊರೇಟ್ ತೆರಿಗೆಯನ್ನು ತರಲು ಜಿ20ಯಲ್ಲಿ ತೀರ್ಮಾನಿಸಿರುವುದು ಪ್ರಧಾನಿಯವರಿಗೆ ಸಂತಸ ತಂದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ ಶೃಂಗ್ಲ ತಿಳಿಸಿದ್ದಾರೆ. 

ಕಂಪನಿಗಳು ತಾವು ನೆಲೆಗೊಂಡಿರುವ ದೇಶಗಳಲ್ಲಿ ನಿರ್ದಿಷ್ಟ ಪ್ರಮಾಣದ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. 2014 ರಲ್ಲಿ ಪ್ರಧಾನ ಮಂತ್ರಿಗಳು ತೆರಿಗೆಯಿಂದ ತಪ್ಪಿಸಿಕೊಳ್ಳುವುದನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟುವ ಸಲುವಾಗಿ ಕನಿಷ್ಠ ಕಾರ್ಪೊರೇಟ್ ತೆರಿಗೆಯ ಕಲ್ಪನೆಯನ್ನು ಮೊದಲು ಪ್ರಸ್ತಾಪಿಸಿದರು. ಇಂದು, ಈ G-20 ವೇದಿಕೆಯಿಂದ, ಮುಂದಿನ ವರ್ಷ ಪ್ರಪಂಚಕ್ಕೆ 5 ಶತಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ಉತ್ಪಾದಿಸಲು ಭಾರತ ಸಿದ್ಧವಾಗಿದೆ ಎಂದು ಮೋದಿ ಹೇಳಿದ್ದಾರೆ.

ಕೊರೋನವೈರಸ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಭಾರತದ ಈ ಬದ್ಧತೆ ಬಹಳ ದೂರ ಸಾಗುತ್ತದೆ. ಆದ್ದರಿಂದ, ಭಾರತೀಯ ಲಸಿಕೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಯಿಂದ ಶೀಘ್ರವಾಗಿ ಅನುಮೋದಿಸುವುದು ಅವಶ್ಯಕ" ಎಂದು ಅವರು ಪ್ರತಿಪಾದಿಸಿದರು.

ಕೊವಾಕ್ಸಿನ್ ನ ತುರ್ತು ಬಳಕೆಯ ಪಟ್ಟಿಗಾಗಿ ಅಂತಿಮ "ಅಪಾಯ-ಪ್ರಯೋಜನ ಮೌಲ್ಯಮಾಪನ" ನಡೆಸಲು ವಿಶ್ವಸಂಸ್ಥೆ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಗುಂಪು ನವೆಂಬರ್ 3 ರಂದು ಸಭೆ ಸೇರುತ್ತದೆ. ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಮತ್ತು ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೋವಿಶೀಲ್ಡ್ ಸದ್ಯ ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುವ ಎರಡು ಲಸಿಕೆಗಳಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com