ಗರ್ಭಿಣಿ ಮಹಿಳಾ ಪೊಲೀಸ್ ಅಧಿಕಾರಿಯನ್ನು ಕುಟುಂಬ ಸದಸ್ಯರೆದುರು ಗುಂಡಿಕ್ಕಿ ಕೊಂದ ತಾಲೀಬಾನ್!

ಅಫ್ಘಾನಿಸ್ತಾನದಲ್ಲಿ ಗರ್ಭಿಣಿ ಮಹಿಳಾ ಪೊಲೀಸ್ ಅಧಿಕರಿಯನ್ನು ತಾಲೀಬಾನಿ ಉಗ್ರರು ಆಕೆಯ ಕುಟುಂಬ ಸದಸ್ಯರ ಎದುರೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 
ತಾಲೀಬಾನ್
ತಾಲೀಬಾನ್

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಗರ್ಭಿಣಿ ಮಹಿಳಾ ಪೊಲೀಸ್ ಅಧಿಕರಿಯನ್ನು ತಾಲೀಬಾನಿ ಉಗ್ರರು ಆಕೆಯ ಕುಟುಂಬ ಸದಸ್ಯರ ಎದುರೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 

ಅಫ್ಘಾನಿಸ್ತಾನದ ಪತ್ರಕರ್ತರೊಬ್ಬರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.  ನಿಗಾರಾ ಎಂಬ 6 ತಿಂಗಳ ಗರ್ಭಿಣಿ ಮಹಿಳೆಯನ್ನು ಆಕೆಯ ಪತಿ ಹಾಗೂ ಮಕ್ಕಳ ಎದುರು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 

ಸ್ಪುಟ್ನಿಕ್ ನ ಪ್ರತಿನಿಧಿ, ಹಿಜಾಬ್, ಬುರ್ಖಾ ಇಲ್ಲದೇ ಅಡ್ಡಾಡಿದರೆ ತಾಲೀಬಾನಿಗಳು ಥಳಿಸುತ್ತಾರೆ ಎಂಬ ಭಯದಿಂದ ಮಹಿಳೆಯರು ಬುರ್ಖಾ, ಹಿಜಾಬ್ ಖರೀದಿಸಲು ಮುಂದಾಗುತ್ತಿರುವುದು ಎಲ್ಲೆಡೆ ಕಂಡುಬಂದಿರುವ ಸಾಮಾನ್ಯ ದೃಶ್ಯವಾಗಿದೆ. 

ತಾಲೀಬಾನ್ ಆಡಳ್ತದಲ್ಲಿ ದೇಶದ ರಾಜಕೀಯದಲ್ಲಿ ಮಹಿಳೆಯರನ್ನು ಹೊರಗಿಟ್ಟಿರುವುದನ್ನು ವಿರೋಧಿಸಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. 

20 ವರ್ಷಗಳ ನಂತರ ಅಫ್ಘಾನಿಸ್ತಾನ ತಾಲೀಬಾನ್ ವಶವಾಗಿದ್ದು, ಮಹಿಳೆಯರ ಭವಿಷ್ಯ ಅತಂತ್ರವಾಗಿದೆ. ಸಜ್ಜನ್ ಗೊಹೆಲ್ ಭದ್ರತೆ ಮತ್ತು ಭಯೋತ್ಪಾದಕ ವಿಶ್ಲೇಷಕರು ಹೇಳುವ ಪ್ರಕಾರ ಮಹಿಳೆಯರು ತಾಲೀಬಾನ್ ಮನಸ್ಥಿತಿಯ ಬಗ್ಗೆ ಆತಂಕ ಹೊಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com