ಅಯ್ಮನ್ ಅಲ್ ಜವಾಹಿರಿ
ವಿದೇಶ
9/11 ವಿಡಿಯೋದಲ್ಲಿ ಕಾಣಿಸಿಕೊಂಡ ಅಲ್ ಖೈದಾ ಮುಖ್ಯಸ್ಥ ಜವಾಹಿರಿ: ಸಾವಿನ ಸುದ್ದಿಗಳಿಗೆ ತೆರೆ
ಈ ಹಿಂದೆ ಜವಾಹಿರಿ ಸತ್ತಿದ್ದಾನೆ ಎಂದೇ ಹೇಳಲಾಗಿತ್ತು. ಅದರ ನಡುವೆಯೇ ಆತನ ವಿಡಿಯೋ ಬಿಡುಗಡೆಯಾಗಿದೆ. ವಿಡಿಯೋದಲ್ಲಿ ಆತ ಜೆರೂಸಲೇಂ ಕುರಿತು ಮಾತನಾಡಿದ್ದಾನೆ.
ಭೈರೂತ್: ಅಮೆರಿಕ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ ನಡೆದು ೨೦ ವರ್ಷಗಳಾಗಿರುವ ಈ ಸಮಯದಲ್ಲಿಯೇ ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ.
ಈ ಹಿಂದೆ ಜವಾಹಿರಿ ಸತ್ತಿದ್ದಾನೆ ಎಂದೇ ಹೇಳಲಾಗಿತ್ತು. ಅದರ ನಡುವೆಯೇ ಆತನ ವಿಡಿಯೋ ಬಿಡುಗಡೆಯಾಗಿದೆ. ವಿಡಿಯೋದಲ್ಲಿ ಆತ ಜೆರೂಸಲೇಂ ಕುರಿತು ಮಾತನಾಡಿದ್ದಾನೆ. ಇಸ್ರೇಲ್ ನಲ್ಲಿರುವ ಜೆರೂಸಲೇಂ ಯಾವತ್ತಿಗೂ ಯಹೂದಿಗಳ ವಶವಾಗಲು ಬಿಡುವುದಿಲ್ಲ ಎಂದು ಕಿಡಿ ಕಾರಿದ್ದಾನೆ.
ಜವಾಹಿರಿ 2020ರಲ್ಲಿ ಅನಾರೋಗ್ಯದಿಂದ ಸತ್ತಿದ್ದಾನೆ ಎಂದೇ ಇದುವರೆಗೂ ನಂಬಲಾಗಿತ್ತು. ಅವಳಿ ಕಟ್ಟಡ ಮೇಲಿನ ದಾಳಿಯ ೨೦ ವರ್ಷಗಳಾದ ಸಂದರ್ಭದಲ್ಲಿಯೇ ಆತನ ವಿಡಿಯೊ ಬಿಡುಗಡೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ವಿಡಿಯೋದಲ್ಲೆಲ್ಲೂ ಆತ ತಾಲಿಬಾನ್ ಕುರಿತು ಉಲ್ಲೇಖ ಮಾಡದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಿಡೀಯೋದಲ್ಲಿ ಆತ ೬೧ ನಿಮಿಷ ಮಾತನಾಡಿದ್ದಾನೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ