ಬ್ರಿಟನ್ ನಲ್ಲಿ ಜಾನುವಾರುಗಳಿಗೆ ಹುಚ್ಚು ಕಾಯಿಲೆ ಹರಡುವ ಭೀತಿ: ಮೊದಲ ಬಲಿ

ಈ ಹಿಂದೆ 1990ರ ಸಮಯದಲ್ಲಿ ಈ ಹುಚ್ಚು ಕಾಯಿಲೆ ದೇಶವನ್ನು ಆಕ್ರಮಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಹತ್ತಾರು ಲಕ್ಷ ಜಾನುವಾರುಗಳನ್ನು ಹತ್ಯೆ ಮಾಡಲಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ಕಳೆದ ವಾರ ದನವೊಂದು ಅನುಮಾನಾಸ್ಪದವಾಗಿ ಮೃತಪಟ್ಟಿತ್ತು. ಅದರ ಕಳೇಬರದ ಮಾದರಿಯನ್ನು ತಜ್ನರು ಪ್ರಯೋಗಾಲಯ ಪರೀಕ್ಷೆಗೆಂದು ತೆಗೆದುಕೊಂಡು ಹೋಗಿದ್ದರು. ಇದೀಗ ಫಲಿತಾಂಶ ಹೊರಬಿದ್ದಿದೆ. 

ದನಕ್ಕೆ ಬೋವೀನ್ ಸ್ಪಾಂಜಿಫಾರ್ಮ್ ಎನ್ಸೆಫಲೋಪತಿ ಕಾಯಿಲೆ ತಗುಲಿರುವುದನ್ನು ದೃಢಪಡಿಸಿದ್ದಾರೆ. ಕಾಯಿಲೆಯನ್ನು ಸರಾಳೀಕರಿಸಿ ಹೇಳುವುದಾದರೆ ದನ ಹುಚ್ಚು ರೋಗದಿಂದಾಗಿ ಮೃತಪಟ್ಟಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದರಿಂದಾಗಿ ಗಳಿಗೆ ಈ ರೋಗ ಹರಡುವ ಭೀತಿ ವ್ಯಕ್ತವಾಗಿತ್ತು. ಆದರೆ ವಶುವೈದ್ಯಕೀಯ ವಿಜ್ನಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ. ಗೋ ಮಾಂಸವನ್ನು ಸೇವಿಸುವವರು ಇನ್ನುಮುಂದೆಯೂ ಯಾವುದೇ ಭಯವಿಲ್ಲದೆ ಸೇವಿಸಬಹುದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದವರು ತಿಳಿಸಿದ್ದಾರೆ.

ಈ ಹಿಂದೆ 1990ರ ಸಮಯದಲ್ಲಿ ಈ ಹುಚ್ಚು ಕಾಯಿಲೆ ದೇಶವನ್ನು ಆಕ್ರಮಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಹತ್ತಾರು ಲಕ್ಷ ಜಾನುವಾರುಗಳನ್ನು ಹತ್ಯೆ ಮಾಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com