ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿವಾದ ಪ್ರಸ್ತಾಪ, ಅಮೆರಿಕದ ದ್ವಿಮುಖ ನೀತಿಗೆ ಪಾಕ್ ಬಲಿ ಎಂದ ಇಮ್ರಾನ್ ಖಾನ್

ಅಮೆರಿಕದ ಉಪಕಾರ ಸ್ಮರಣೆಯಿಲ್ಲದಿರುವಿಕೆ ಗುಣಕ್ಕೆ ಮತ್ತು ಅಂತಾರಾಷ್ಟ್ರೀಯ ದ್ವಿಮುಖ ನೀತಿಗೆ ಪಾಕಿಸ್ತಾನ ಬಲಿಯಾಗುತ್ತಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಗಂಬೀರ ಆರೋಪ ಮಾಡಿದ್ದಾರೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ನ್ಯೂಯಾರ್ಕ್: ಅಮೆರಿಕದ ಉಪಕಾರ ಸ್ಮರಣೆಯಿಲ್ಲದಿರುವಿಕೆ ಗುಣಕ್ಕೆ ಮತ್ತು ಅಂತಾರಾಷ್ಟ್ರೀಯ ದ್ವಿಮುಖ ನೀತಿಗೆ ಪಾಕಿಸ್ತಾನ ಬಲಿಯಾಗುತ್ತಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಗಂಬೀರ ಆರೋಪ ಮಾಡಿದ್ದಾರೆ.

ಇಂದು ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆ ಭಾರತೀಯ ಕಾಲಮಾನ ಸಾಯಂಕಾಲ ಆರಂಭವಾಗಲಿದ್ದು ಅದಕ್ಕೂ ಮುನ್ನ ವಿಶ್ವನಾಯಕರು ಮಾಡಿರುವ ಪೂರ್ವ ರೆಕಾರ್ಡ್ ಭಾಷಣ ಪ್ರಸಾರವಾಗಿದ್ದು ಅದರಲ್ಲಿ ಪಾಕಿಸ್ತಾನ ಹವಾಮಾನ ಬದಲಾವಣೆ, ಜಾಗತಿಕ ಇಸ್ಲಾಮೊಫೋಬಿಯಾ ಮತ್ತು ಭ್ರಷ್ಠ ನಾಯಕರಿಂದ ಪ್ರಪಂಚ ಲೂಟಿಯಾಗುತ್ತಿದೆ ಎಂದು ಹೇಳಿರುವ ಪಾಕ್ ಪ್ರಧಾನಿ ಈಸ್ಟ್ ಇಂಡಿಯಾ ಕಂಪೆನಿ ಭಾರತಕ್ಕೆ ಮಾಡಿದ ದ್ರೋಹವನ್ನು ಹೋಲಿಸಿದ್ದಾರೆ.

ಭಾರತದಲ್ಲಿ ನರೇಂದ್ರ ಮೋದಿಯವರ ಹಿಂದೂ ರಾಷ್ಟ್ರೀಯವಾ ಸರ್ಕಾರ ಫ್ಯಾಸಿಸ್ಟ್ ಸರ್ಕಾರ ಎಂದು ಕೂಡ ಇಮ್ರಾನ್ ಖಾನ್ ಆರೋಪಿಸಿದ್ದಾರೆ. "ಪ್ರಪಂಚದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ದುರದೃಷ್ಟಕರ, ಭೌಗೋಳಿಕ ರಾಜಕೀಯ ಪರಿಗಣನೆಗಳು, ಅಥವಾ ಕಾರ್ಪೊರೇಟ್ ಹಿತಾಸಕ್ತಿಗಳು, ವಾಣಿಜ್ಯ ಹಿತಾಸಕ್ತಿಗಳು ಪ್ರಮುಖ ರಾಷ್ಟ್ರಗಳನ್ನು ತಮ್ಮ ಅಂಗಸಂಸ್ಥೆ ದೇಶಗಳ ಉಲ್ಲಂಘನೆಗಳನ್ನು ಕಡೆಗಣಿಸುವಂತೆ ಒತ್ತಾಯಿಸುತ್ತವೆ ಎಂದು ಆರೋಪಿಸಿದ್ದಾರೆ.

ಜಮ್ಮು-ಕಾಶ್ಮೀರ ಪ್ರಸ್ತಾಪ: ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ತೆಗೆದುಹಾಕಿದ್ದು ಭಾರತ ಸರ್ಕಾರ ಮಾಡಿದ ಮಾನವ ಹಕ್ಕುಗಳ ಸಮಗ್ರ ಮತ್ತು ವ್ಯವಸ್ಥಿತ ಉಲ್ಲಂಘನೆ ಎಂದು ಖಂಡಿಸಿದ್ದಾರೆ. ಕಾಶ್ಮೀರದಲ್ಲಿ ನಿಧನರಾದ ಪ್ರತ್ಯೇಕವಾದ ನಾಯಕನಿಗೆ ಸರಿಯಾದ ಸಮಾಧಿಯನ್ನು ನಿರಾಕರಿಸಲಾಯಿತು. ಕಾಶ್ಮೀರವನ್ನು ಭಾರತ ಮತ್ತು ಪಾಕಿಸ್ತಾನದ ನಡುವೆ ವಿಭಜಿಸಲಾಗಿದೆ. ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯವನ್ನು ಗೆದ್ದ ನಂತರ ಮತ್ತು ಅವರ ಪ್ರತಿಸ್ಪರ್ಧಿ ಹಕ್ಕುಗಳಿಗಾಗಿ ಹೋರಾಡಲು ಪ್ರಾರಂಭಿಸಿದ ನಂತರ ಇಬ್ಬರೂ ಹಕ್ಕು ಸಾಧಿಸಿದ್ದಾರೆ.

ಪಾಕಿಸ್ತಾನ ಶಾಂತಿಯನ್ನು ಬಯಸುತ್ತದೆ, ಆದರೆ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳುವುದು ಭಾರತದ ಜವಾಬ್ದಾರಿ ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com