12 ಹಾಗೂ ಮೇಲ್ಪಟ್ಟವರಿಗೆ ನೀಡಬಹುದಾದ ಡಿಎನ್ಎ ಲಸಿಕೆ ಅಭಿವೃದ್ಧಿಪಡಿಸಿದ ಮೊದಲ ದೇಶ ಭಾರತ: ಯುಎನ್ ಜಿಎಯಲ್ಲಿ ಪ್ರಧಾನಿ ಮೋದಿ
12 ವರ್ಷ ಹಾಗೂ ಮೇಲ್ಪಟ್ಟ ವ್ಯಕ್ತಿಗಳಿಗೆ ನೀಡಬಹುದಾದ ಡಿಎನ್ಎಯನ್ನು ಅಭಿವೃದ್ಧಿಪಡಿಸಿರುವ ಮೊದಲ ದೇಶ ಭಾರತ ಎಂದು ಪ್ರಧಾನಿ ಮೋದಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದಾರೆ.
Published: 25th September 2021 11:47 PM | Last Updated: 27th September 2021 12:49 PM | A+A A-

ವಿಶ್ವಸಂಸ್ಥೆ ಸಭೆಯಲ್ಲಿ ಮೋದಿ ಭಾಷಣ
ನ್ಯೂಯಾರ್ಕ್: 12 ವರ್ಷ ಹಾಗೂ ಮೇಲ್ಪಟ್ಟ ವ್ಯಕ್ತಿಗಳಿಗೆ ನೀಡಬಹುದಾದ ಡಿಎನ್ಎಯನ್ನು ಅಭಿವೃದ್ಧಿಪಡಿಸಿರುವ ಮೊದಲ ದೇಶ ಭಾರತ ಎಂದು ಪ್ರಧಾನಿ ಮೋದಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದಾರೆ.
ಸೇವಾ ಪರಮೋ ಧರ್ಮ ( ಸೇವೆಯೇ ಮುಖ್ಯ ಕರ್ತವ್ಯ) ಎಂಬ ತತ್ವವನ್ನು ಭಾರತ ಜೀವಿಸುತ್ತಿದ್ದು, ಸೀಮಿತ ಸಂಪನ್ಮೂಲಗಳ ನಡುವೆಯೂ ಲಸಿಕೆ ಅಭಿವೃದ್ಧಿ ಹಾಗೂ ಉತ್ಪಾದನೆಯನ್ನು ಮಾಡಿದೆ. ಭಾರತ ವಿಶ್ವದ ಮೊದಲ ಡಿಎನ್ಎ ಲಸಿಕೆಯನ್ನು ತಯಾರಿಸಿದೆ ಎಂದು ಯುಎನ್ ಜಿಎ ಗೆ ಹೇಳುತ್ತಿದ್ದೇನೆ" ಎಂದಿದ್ದಾರೆ ಮೋದಿ.
ಕಳೆದ ತಿಂಗಳು ಭಾರತದ ಔಷಧ ನಿಯಂತ್ರಕ ಝೈಡಸ್ ಕ್ಯಾಡಿಲಾಗೆ ತುರ್ತು ಬಳಕೆಗೆ ಅನುಮೋದನೆ ನೀಡಿತ್ತು. ಇದನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಇದು 12 ವರ್ಷ ಹಾಗೂ ಮೇಲ್ಪಟ್ಟವರಿಗೆ ನೀಡಬಹುದಾಗಿರುವ ಸೂಜಿ ರಹಿತ ಕೋವಿಡ್ -19 ಲಸಿಕೆಯಾಗಿದೆ.
ಮತ್ತೊಂದು ಎಂಆರ್ ಎನ್ಎ ಲಸಿಕೆ ಕೊನೆಯ ಹಂತದ ಅಭಿವೃದ್ಧಿಯಲ್ಲಿದ್ದು, ಕೊರೋನಾಗೆ ಮೂಗಿನ ಲಸಿಕೆ ಅಭಿವೃದ್ಧಿಪಡಿಸುವುದಕ್ಕೂ ಭಾರತದಲ್ಲಿ ವಿಜ್ಞಾನಿಗಳು ತೊಡಗಿದ್ದಾರೆ. ಮನುಕುಲದೆಡೆಗೆ ಭಾರತ ತನ್ನ ಜವಾಬ್ದಾರಿಯನ್ನು ಅರಿತು ಭಾರತ ವಿಶ್ವದಲ್ಲಿ ಅಗತ್ಯವಿರುವವರಿಗೆ ನೀಡಲು ಮುಂದಾಗಿದೆ. ಭಾರತದಲ್ಲಿ ಲಸಿಕೆಯನ್ನು ಉತ್ಪಾದಿಸಲು ಜಗತ್ತಿನ ಲಸಿಕೆ ತಯಾರಕರಿಗೆ ನಾನು ಕರೆ ನೀಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.