ಒಸ್ಲೊ: ನಾರ್ವೆ ದೇಶದಲ್ಲಿ ದೀರ್ಘಕಾಲದಿಂದ ಹೇರಲಾಗಿದ್ದ ಲಾಕ್ ಡೌನ್ ನಿರ್ಬಂಧ, ಕೊರೊನಾ ಮಾರ್ಗಸೂಚಿಗಳನ್ನು ಸರ್ಕಾರ ಸಡಿಲಿಸಿತ್ತು. ಮನೆಗಳಲ್ಲಿ ಕೂತು ಬೋರು ಹೊಡೆದಿದ್ದ ಜನತೆ ರಾತ್ರಿ ನೈಟ್ ಕ್ಲಬ್ಬುಗಳಲ್ಲಿ ಕಂಠಪೂರ್ತಿ ಕುಡಿದು ಸಂಭ್ರಮಾಚರಣೆ ನಡೆಸಿದೆ. ಇದೇ ವೇಳೆ ಹಲವೆಡೆ ಗುಂಪು ಘರ್ಷಣೆಗಳು ಸಂಭವಿರುವ ಬಗ್ಗೆ ವರದಿಯಾಗಿದೆ. ಒಂದೇ ರಾತ್ರಿಯಲ್ಲಿ 50 ದೂರುಗಳು ದಾಖಲಾಗಿರುವುದು ಪೊಲಿಸರಿಗೆ ತಲೆನೋವಾಗಿ ಪರಿಣಮಿಸಿದೆ.
ಶನಿವಾರ ಮಧ್ಯಾಹ್ನದ ವೇಳೆಗೆ ಪ್ರಧಾನಿ ಎರ್ನಾ ಸೊಲ್ಬರ್ಗ್ ಅವರು ಕೊರೊನಾ ನಿರ್ಬಂಧ ಸಡಿಲಿಸುತ್ತಿರುವುದಾಗಿ ಘೋಷಣೆ ಮಾಡಿದ್ದರು. ಆ ಕ್ಷಣದಿಂದಲೇ ನಾಗರಿಕರ ಗೂಂಡಾ ವರ್ತನೆ ಗರಿಗೆದರಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜನರು ಹುಚ್ಚು ಬಂದಂತೆ ಸಂಭ್ರಮಾಚರಣೆಯಲ್ಲಿ ತೊಡಗಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟುಮಾಡಿದ್ದಾರೆ.
ದೇಶದೆಲ್ಲೆಡೆ ಈ ಪರಿಸ್ಥಿತಿ ಕಂಡುಬಂದಿದ್ದರೂ ರಾಜಧಾನಿ ಒಸ್ಲೋನಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿರುವುದಾಗಿ ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನೈಟ್ ಕ್ಲಬ್ ಓದರ್ ಒಬ್ಬ ಹೀಗಾಗುತ್ತದೆ ಎಂದು ನನಗೆ ಮುಂಚೆಯೇ ತಿಳಿದಿತ್ತು ಎಂಡು ಹೇಳಿದ್ದಾನೆ. ಒಂದೇ ಬಾರಿಗೆ ಎಲ್ಲಾ ಮಾರ್ಗಸೂಚಿಯನ್ನು ತೆಗೆಯುವುದಕ್ಕೆ ಬದಲಾಗಿ ಹಂತ ಹಂತವಾಗಿ ಲಾಕ್ ಡೌನ್ ನಿರ್ಬಂಧ ತೆಗೆಯಬೇಕಿತ್ತು ಎಂಡು ಹಲವರು ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.
Advertisement