ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರಾನ್ ಮೇಲೆ ಮೊಟ್ಟೆ ಎಸೆತ: ಅದೃಷ್ಟವಶಾತ್ ಒಡೆಯದ ಮೊಟ್ಟೆ!
ಪ್ಯಾರಿಸ್: ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರಾನ್ ಯಾವ ಸ್ಥಳಕ್ಕೇ ಹೋದರೂ ಸುದ್ದಿಯಾಗುತ್ತಾರೆ ಎನ್ನುವ ಮಾತಿಗೆ ಮತ್ತೆ ಪುಷ್ಟಿ ದೊರೆತಿದೆ. ಲ್ಯಾನ್ ಎಂಬ ನಗರದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಆಹಾರ ಮೇಳದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಬಂದಿಳಿದಿದ್ದರು.
ಆಹಾರ ಮೇಳಕ್ಕೆ ಭೇಟಿ ನೀಡಿದ ಸಂದರ್ಭ ಓರ್ವ ವ್ಯಕ್ತಿ ಮೆಕ್ರಾನ್ ಮೇಲೆ ಮೊಟ್ಟೆಯೊಂದನ್ನು ಎಸೆದಿದ್ದಾನೆ. ಮೆಕ್ರಾನ್ ಪುಣ್ಯಕ್ಕೆ ಆ ಮೊಟ್ಟೆ ಒಡೆದು ಚೂರಾಗದೆ ಅವರ ಮೈಮೇಲಿಂದ ಬೌನ್ಸ್ ಆಗಿ ನೆಲಕ್ಕೆ ಬಿದ್ದ ನಂತರ ಒಡೆದಿದೆ. ಸ್ವಲ್ಪದರಲ್ಲಿ ಭಾರೀ ಪ್ರಮಾದದಿಂದ ಬಚಾವಾಗಿದ್ದಾರೆ.
ಮೊಟ್ಟೆ ಎಸೆತಕ್ಕೆ ಖಚಿತ ಕಾರಣ ತಿಳಿದುಬಂದಿಲ್ಲ. ಘಟನೆ ನಂತರ ಮೆಕ್ರಾನ್ ತಾವು ಆರೋಪಿಯೊಂದಿಗೆ ಮಾತನಾಡಬೇಕು ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮೆಕ್ರಾನ್ ಮೇಲೆ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸಾರ್ವಜನಿಕರನ್ನು ಭೇಟಿ ಮಾಡುವ ಸಂದರ್ಭ ಓರ್ವ ವ್ಯಕ್ತಿ ಮೆಕ್ರಾನ್ ಅವರ ಕಪಾಳಕ್ಕೆ ಬಾರಿಸಿದ್ದ. ಅದರ ವಿಡಿಯೊ ಅಂತರ್ಜಾಲದಲ್ಲಿ ಹರಿದಾಡಿ ಚರ್ಚೆಗೆ ಗ್ರಾಸವಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ