ಫ್ರಾನ್ಸ್, ಅಮೆರಿಕ ನಡುವೆ ಪ್ರಾಬಲ್ಯದ ಹೋರಾಟ; ಅಕೂಸ್ ಒಪ್ಪಂದ ಬದಿಗಿರಿಸಿದ ಆಸ್ಟ್ರೇಲಿಯಾ, 'ಬಹುದೊಡ್ಡ ಪ್ರಮಾದ ಎಂದ ಪ್ಯಾರಿಸ್'

ಫ್ರಾನ್ಸ್, ಅಮೆರಿಕಾ ನಡುವೆ ಪ್ರಸ್ತುತ ಪ್ರಾಬಲ್ಯಕ್ಕಾಗಿ ಹೋರಾಟ ನಡೆಯುತ್ತಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಬಲ ಹೆಚ್ಚಿಸಿಕೊಳ್ಳುವುದನ್ನು ತಡೆಯಲು ಅಮೆರಿಕಾ, ಬ್ರಿಟನ್, ಆಸ್ಟ್ರೇಲಿಯಾ ದೇಶಗಳು ಒಗ್ಗೂಡಿ ಅಕೂಸ್‌ ಎಂಬ ಮೈತ್ರಿ ಮಾಡಿಕೊಂಡಿವೆ. 
ಸಬ್ ಮೆರಿನ್  (ಸಂಗ್ರಹ ಚಿತ್ರ)
ಸಬ್ ಮೆರಿನ್ (ಸಂಗ್ರಹ ಚಿತ್ರ)

ವಾಷಿಂಗ್ಟನ್‌: ಫ್ರಾನ್ಸ್, ಅಮೆರಿಕಾ ನಡುವೆ ಪ್ರಸ್ತುತ ಪ್ರಾಬಲ್ಯಕ್ಕಾಗಿ ಹೋರಾಟ ನಡೆಯುತ್ತಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಬಲ ಹೆಚ್ಚಿಸಿಕೊಳ್ಳುವುದನ್ನು ತಡೆಯಲು ಅಮೆರಿಕಾ, ಬ್ರಿಟನ್, ಆಸ್ಟ್ರೇಲಿಯಾ ದೇಶಗಳು ಒಗ್ಗೂಡಿ ಅಕೂಸ್‌ ಎಂಬ ಮೈತ್ರಿ ಮಾಡಿಕೊಂಡಿವೆ. 

ಮೈತ್ರಿ ಒಪ್ಪಂದದ ಭಾಗವಾಗಿ ಫ್ರಾನ್ಸ್ ನಿಂದ ಜಲಾಂತರ್ಗಾಮಿಗಳನ್ನು ಖರೀದಿಸಲು 2016 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದ ಆಸ್ಟ್ರೇಲಿಯಾ, ಅದನ್ನು ಬದಿಗಿರಿಸಿದೆ. 60 ಬಿಲಿಯನ್ ಡಾಲರ್‌ ವೆಚ್ಚದಲ್ಲಿ 12 ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅಕೂಸ್ ಮೈತ್ರಿ ಹೊರಹೊಮ್ಮಿದ ನಂತರ ಡೀಸೆಲ್ ಜಲಾಂತರ್ಗಾಮಿಗಳ ಬದಲು ಪರಮಾಣು ಚಾಲಿತ ಜಲಾಂತರ್ಗಾಮಿ ಪೂರೈಸುವುದಾಗಿ ಆಸ್ಟ್ರೇಲಿಯಾಕ್ಕೆ ಆಮೆರಿಕಾ ನೀಡಿರುವ ಭರವಸೆಗೆ ಫ್ರಾನ್ಸ್ ತೀವ್ರ ಅಸಮಧಾನಗೊಂಡಿದೆ. ಅಕೂಸ್‌ ಮೈತ್ರಿಯ ಕ್ರಮಗಳನ್ನು ವಿರೋಧಿಸಿ ಅಮೆರಿಕಾ, ಆಸ್ಟ್ರೇಲಿಯಾ ದಿಂದ ತನ್ನ ರಾಯಭಾರಿಗಳನ್ನು ಫ್ರಾನ್ಸ್‌ ವಾಪಸ್ಸು ಕರೆದುಕೊಂಡಿದೆ. ಯೂರೋಪಿನಲ್ಲಿ ಫ್ರಾನ್ಸ್ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವುದರಿಂದ ಈ ಬೆಳವಣಿಗೆಗಳು ಏನಾಗಬಹುದೆಂಬ ಬಗ್ಗೆ ತಜ್ಞರು ಚಿಂತಿತರಾಗಿದ್ದಾರೆ. 

ಬಹುದೊಡ್ಡ ಪ್ರಮಾದ: ಫ್ರಾನ್ಸ್
ಇನ್ನು ಫ್ರಾನ್ಸ್‌ನೊಂದಿಗಿನ  ಗುತ್ತಿಗೆಯನ್ನು ಹಠಾತ್ತಾಗಿ ರದ್ದುಗೊಳಿಸಿ , ಅಮೆರಿಕದ ಜತೆ ಸಬ್ಮೆರಿನ್ ಪೂರೈಕೆ ಒಪ್ಪಂದ ಮಾಡಿಕೊಂಡಿರುವ ಆಸ್ಟ್ರೇಲಿಯಾದ ಉಪಕ್ರಮ ಬಹುದೊಡ್ಡ ಪ್ರಮಾದವಾಗಿದೆ ಎಂದು ಆಸ್ಟ್ರೇಲಿಯಾದಲ್ಲಿನ ಫ್ರಾನ್ಸ್ ರಾಯಭಾರಿ ಜೀನ್ ಪಿಯರೆ ಥೆಬಾಲ್ಟ್ ಪ್ರತಿಕ್ರಿಯಿಸಿದ್ದಾರೆ. ಫ್ರಾನ್ಸ್ನೊಂದಿಗಿನ ಶಸ್ತ್ರಾಸ್ತ್ರ ಕರಾರನ್ನು ಏಕಪಕ್ಷೀಯವಾಗಿ ರದ್ದುಗೊಳಿಸಿದ ಆಸ್ಟ್ರೇಲಿಯಾದ ನಿರ್ಧಾರವನ್ನು ಪ್ರತಿಭಟಿಸಿ ಫ್ರಾನ್ಸ್ ತನ್ನ ರಾಯಭಾರಿಯನ್ನು ಆಸ್ಟ್ರೇಲಿಯಾದಿಂದ ವಾಪಾಸು ಕರೆಸಿಕೊಂಡಿದೆ.

ಶನಿವಾರ ಅವರು ಆಸ್ಟ್ರೇಲಿಯಾದಿಂದ ತಮ್ಮ ಸ್ವದೇಶಕ್ಕೆ ಮರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು. ಇದೊಂದು ಬಹುದೊಡ್ಡ ಪ್ರಮಾದ. ಸಹಭಾಗಿತ್ವವನ್ನು ಅತ್ಯಂತ ಕೆಟ್ಟದಾಗಿ ನಿರ್ವಹಿಸಿದ ನಿದರ್ಶನವಾಗಿದೆ. ಫ್ರಾನ್ಸ್- ಆಸ್ಟ್ರೇಲಿಯಾ ನಡುವಿನ ಶಸ್ತ್ರಾಸ್ತ್ರ ಒಪ್ಪಂದವು ವಿಶ್ವಾಸ, ಪರಸ್ಪರ ತಿಳುವಳಿಕೆ ಮತ್ತು ಪ್ರಾಮಾಣಿಕತೆಯ ಆಧಾರ ಹೊಂದಿರಬೇಕು ಎಂದು ಆಶಿಸಲಾಗಿತ್ತು. ಆದರೆ ಈಗ ಆಸ್ಟ್ರೇಲಿಯಾ ಅತ್ಯಂತ ವಿಸ್ಮಯಕಾರಿ ನಡೆಯನ್ನು ಮುನ್ನಡೆಸಿದೆ ಎಂದು ಥೆಬಾಲ್ಟ್ ಹೇಳಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಮ್ಯಾರಿಸ್ ಪೇಯ್ನಾ, ಫ್ರಾನ್ಸ್ ತನ್ನ ರಾಯಭಾರಿಯನ್ನು ವಾಪಾಸು ಕರೆಸಿಕೊಂಡಿರುವುದಕ್ಕೆ ವಿಷಾದವಿದೆ. ಫ್ರಾನ್ಸ್ಗೆ ಆಗಿರುವ ಅಸಮಾಧಾನವನ್ನು ನಾವು ಅರಿತುಕೊಂಡಿದ್ದೇವೆ. ಆದರೆ ನಮ್ಮ ರಾಷ್ಟ್ರೀಯ ಹಿತಾಸಕ್ತಿಯ ನಿಟ್ಟಿನಲ್ಲಿ ಈ ನಿರ್ಧಾರ ಅತ್ಯಂತ ಸ್ಪಷ್ಟ ಮತ್ತು ಸೂಕ್ತವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com