ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಶುಕ್ರವಾರ ಅಮೆರಿಕದಲ್ಲಿ ನಡೆದ ಸಮಾರಂಭದಲ್ಲಿ ಮಾಡೆಲ್ ಮತ್ತು ನಟ ಮಿರ್ಜಾ ಬಿಲಾಲ್ ಬೇಗ್ ಅವರನ್ನು ವಿವಾಹವಾದರು.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ತಲಾಖ್ ನೀಡಿದ ಬಳಿಕ ಅಮೆರಿಕದಲ್ಲಿ ನೆಲೆಸಿರುವ 49 ವರ್ಷದ ರೆಹಮ್ ಖಾನ್, ತಮಗಿಂತ 13 ವರ್ಷ ಚಿಕ್ಕವರಾದ 36 ವರ್ಷದ ಬಿಲಾಲ್ ಮಾವ್ ರನ್ನು ಮದುವೆಯಾಗಿದ್ದಾರೆ. ಅಮೆರಿಕದಲ್ಲಿ ನಡೆದ ಸರಳ ಸಮಾರಂಭದಲ್ಲಿ ರೆಹಮ್ ಖಾನ್ ಮುಸ್ಲಿಂ ವಿಧಿವಿಧಾನದಂತೆ ವಿವಾಹವಾಗಿದ್ದಾರೆ. ಈ ಕುರಿತು ಸ್ವತಃ ತಾವೇ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ರೆಹಮ್ ಖಾನ್, 'ನಾವು @MirzaBilal__ ಪೋಷಕರು ಮತ್ತು ನನ್ನ ಪರ ವಕೀಲನಾಗಿ ನನ್ನ ಮಗ ಸಿಯಾಟಲ್‌ನಲ್ಲಿ ಸುಂದರವಾದ ನಿಕ್ಕಾ ಸಮಾರಂಭವನ್ನು ನಡೆಸಿದ್ದೇವೆ" ಎಂದು ಪೋಸ್ಟ್ ಮಾಡಿದ್ದಾರೆ. ಅಂತೆಯೇ "ಅಂತಿಮವಾಗಿ ನಾನು @MirzaBilal__ ಅನ್ನು ನಂಬಬಲ್ಲ ವ್ಯಕ್ತಿಯನ್ನಾಗಿ ಕಂಡುಕೊಂಡೆ" ಎಂದು ಅವರು ಹೇಳಿದ್ದಾರೆ.
ರೆಹಮ್ ಖಾನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಚಿತ್ರಗಳಲ್ಲಿ, ರೆಹಮಾನ್ ಬಿಳಿ ಮದುವೆಯ ಗೌನ್‌ನಲ್ಲಿ ಕಾಣಿಸಿಕೊಂಡರೆ, ಅವರ 36 ವರ್ಷದ ಪತಿ ಬಿಲಾಲ್ ಮಾವ್ ಬಣ್ಣದ ಸೂಟ್ ಧರಿಸಿದ್ದರು. ಇದಕ್ಕೂ ಮೊದಲು ಎರಡು ಕೈಗಳ ಚಿತ್ರ ಮತ್ತು "ಜಸ್ಟ್ ಮ್ಯಾರೀಡ್" ಎಂಬ ಪದಗಳನ್ನು ಪೋಸ್ಟ್ ಮಾಡುವ ಮೂಲಕ ರೆಹಮ್ ತನ್ನ ಮದುವೆಯನ್ನು ಘೋಷಿಸಿದ್ದರು.
ಅಮೆರಿಕ ಮೂಲದ ಕಾರ್ಪೊರೇಟ್ ವೃತ್ತಿಪರ ಮತ್ತು ಮಾಜಿ ಮಾಡೆಲ್ ಮಿರ್ಜಾ ಬಿಲಾಲ್ ಬೇಗ್ ಅವರಿಗೆ ಇದು ಮೂರನೇ ವಿವಾಹವಾಗಿದೆ. 2015 ರಲ್ಲಿ, ಪಾಕಿಸ್ತಾನಿ-ಬ್ರಿಟಿಷ್ ದೂರದರ್ಶನ ಪತ್ರಕರ್ತೆ ರೆಹಮ್ ಖಾನ್ ಜನವರಿಯಲ್ಲಿ ಇಮ್ರಾನ್ ಖಾನ್ ಅವರೊಂದಿಗೆ ಇಸ್ಲಾಮಾಬಾದ್ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಮದುವೆಯಾಗಿದ್ದರು. ಆದರೆ ಹತ್ತು ತಿಂಗಳ ನಂತರ ಅವರಿಗೆ ವಿಚ್ಛೇದನ ನೀಡಿದ್ದರು. ವಿಚ್ಛೇದನದ ನಂತರ, ರೆಹಾಮ್ ಅವರು - ಖಾನ್ ಅವರ ಮೊದಲ ಪತ್ನಿ ಜೆಮಿಮಾ ಅವರಂತೆ - ಪಾಕಿಸ್ತಾನದಲ್ಲಿ ದ್ವೇಷದ ಪ್ರಚಾರಕ್ಕೆ ಒಳಗಾಗಿದ್ದರು.
ರೆಹಮ್ ಖಾನ್ 1973 ರಲ್ಲಿ ಲಿಬಿಯಾದ ಅಜ್ದಬಿಯಾದಲ್ಲಿ ಜನಿಸಿದರು. ಪಾಕಿಸ್ತಾನದಲ್ಲಿ ಅಧ್ಯಯನ ಮಾಡಿದ ನಂತರ, ಅವರು 90 ರ ದಶಕದ ಮಧ್ಯಭಾಗದಲ್ಲಿ BBC ಸೌತ್ ಟುಡೇಗೆ ಹವಾಮಾನ ನಿರೂಪಕಿಯಾಗಿ ಸೇರಿದಂತೆ ಬ್ರಿಟನ್ ನಲ್ಲಿ ಪ್ರಸಾರ ಪತ್ರಕರ್ತರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. 2012 ರಲ್ಲಿ ಪಾಕಿಸ್ತಾನಕ್ಕೆ ತೆರಳಿದ ನಂತರ, ಡೈಲಿ ಪಾಕಿಸ್ತಾನದ ಪ್ರಕಾರ, ಸ್ಥಳೀಯ ಟಿವಿ ಕಾರ್ಯಕ್ರಮಕ್ಕಾಗಿ ಸಂದರ್ಶನ ಮಾಡುವಾಗ ಇಮ್ರಾನ್ ಖಾನ್ ಅವರನ್ನು ಭೇಟಿಯಾದರು.
ಜುಲೈನಲ್ಲಿ, ರೆಹಮ್ ಖಾನ್ ಪಾಕಿಸ್ತಾನಿ ಯೂಟ್ಯೂಬ್ ಶೋ 'ಜಿ ಸರ್ಕಾರ್' ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡರು, ಅಲ್ಲಿ ಅವರು ಮತ್ತೆ ಪ್ರೀತಿಯನ್ನು ಹುಡುಕುವ ಬಗ್ಗೆ ಮಾತನಾಡಿದರು. ತನ್ನ ಮದುವೆಯ ಯೋಜನೆಗಳ ಕುರಿತಾದ ಪ್ರಶ್ನೆಗೆ ಉತ್ತರಿಸಿದ ರೆಹಾಮ್, ತಾನು ನಿಜವಾಗಿ ಮತ್ತೆ ಮದುವೆಯಾಗುವುದಾಗಿ ಹಸ್ತಸಾಮುದ್ರಿಕರಾಗಿರುವ ಕುಟುಂಬದ ಸದಸ್ಯರಿಂದ ತಿಳಿಸಲಾಗಿದೆ ಎಂದು ಹೇಳಿದರು.
ಪ್ರಸ್ತುತ, ಇಮ್ರಾನ್ ಖಾನ್ ಅವರು ತಮ್ಮ ಮೂರನೇ ಪತ್ನಿ ಬುಶ್ರಾ ವಟ್ಟೂ ಅವರನ್ನು ವಿವಾಹವಾಗಿದ್ದಾರೆ.
Advertisement