ಸ್ವತಂತ್ರ ದೇಶವೆಂದರೆ ಇದು: ವಿದೇಶಾಂಗ ಸಚಿವ ಜೈಶಂಕರ್ ವಿಡಿಯೋ ತೋರಿಸಿ ಮತ್ತೆ ಭಾರತ ಕೊಂಡಾಡಿದ ಇಮ್ರಾನ್ ಖಾನ್
ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಮತ್ತೊಮ್ಮೆ ಶ್ಲಾಘಿಸಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ವಿದೇಶಾಂಗ ಸಚಿವ ಜೈಶಂಕರ್ ವಿಡಿಯೋ ತೋರಿಸಿ ಮತ್ತೆ ಭಾರತವನ್ನು ಕೊಂಡಾಡಿದ್ದಾರೆ.
Published: 14th August 2022 03:46 PM | Last Updated: 14th August 2022 03:59 PM | A+A A-

ಇಮ್ರಾನ್ ಖಾನ್
ಇಸ್ಲಾಮಾಬಾದ್: ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಮತ್ತೊಮ್ಮೆ ಶ್ಲಾಘಿಸಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ವಿದೇಶಾಂಗ ಸಚಿವ ಜೈಶಂಕರ್ ವಿಡಿಯೋ ತೋರಿಸಿ ಮತ್ತೆ ಭಾರತವನ್ನು ಕೊಂಡಾಡಿದ್ದಾರೆ.
Former Pak PM Imran Khan plays out video clip of India's foreign minister Dr S Jaishankar during his mega Lahore Rally on Saturday, pointing out his remarks how India is buying Russian oil despite western pressure. Says, 'yeh hoti hai Azad Haqumat' pic.twitter.com/tsSiFLteIv
— Sidhant Sibal (@sidhant) August 14, 2022
ಲಾಹೋರ್‌ನಲ್ಲಿ ಸೇರಿದ್ದ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದಕ್ಕೆ ಭಾರತವನ್ನು ಟೀಕಿಸುತ್ತಿರುವ ಪಾಶ್ಚಿಮಾತ್ಯ ದೇಶಗಳ ವಿರುದ್ಧ ಕಿಡಿಕಾರಿದರು. ಅಲ್ಲದೆ ಈ ಸಂಬಂಧ ಸ್ಲೋವಾಕಿಯಾದಲ್ಲಿ ನಡೆದ ಬ್ರಟಿಸ್ಲಾವಾ ವೇದಿಕೆಯ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಮಾತುಗಳ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಖರೀದಿ ಮಾಡುವುದರ ವಿರುದ್ಧ ಅಮೆರಿಕದ ಒತ್ತಡವನ್ನು ಲೆಕ್ಕಿಸದೆ ದೃಢವಾಗಿ ನಿಂತಿದ್ದಕ್ಕೆ ಜೈಶಂಕರ್ ಅವರನ್ನು ಹೊಗಳಿದ್ದಾರೆ.
ಇದನ್ನೂ ಓದಿ: ಇಮ್ರಾನ್ ಖಾನ್ ಮೂರು ಉಡುಗೊರೆ ವಾಚ್ಗಳನ್ನು ಅಕ್ರಮವಾಗಿ ಮಾರಾಟ ಮಾಡಿ 36 ಮಿಲಿಯನ್ ಗಳಿಸಿದ್ದಾರೆ: ವರದಿ
"ಪಾಕಿಸ್ತಾನದ ಸಂದರ್ಭದಲ್ಲಿಯೇ ಭಾರತ ಸ್ವಾತಂತ್ರ್ಯ ಪಡೆದಿದ್ದಾಗ, ಹೊಸದಿಲ್ಲಿಯು ದೃಢವಾಗಿ ನಿಂತು ತನ್ನ ಜನರ ಅಗತ್ಯಕ್ಕೆ ಅನುಗುಣವಾಗಿ ವಿದೇಶಾಂಗ ನೀತಿಯನ್ನು ರೂಪಿಸಲು ಸಾಧ್ಯವಾಗುವುದಾದರೆ, ದಾರಿ ತಪ್ಪುತ್ತಿರುವ ಅವರು (ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರ) ಯಾರು?". ರಷ್ಯಾದಿಂದ ತೈಲ ಖರೀದಿಸದಂತೆ ಭಾರತಕ್ಕೆ ಅಮೆರಿಕ ಆದೇಶ ನೀಡಿತ್ತು. ಭಾರತವು ಅಮೆರಿಕ ಕಾರ್ಯತಂತ್ರ ಮಿತ್ರ ದೇಶ. ಪಾಕಿಸ್ತಾನ ಅಲ್ಲ. ಆದರೆ ರಷ್ಯಾದಿಂದ ತೈಲ ಖರೀದಿಸಬೇಡಿ ಎಂದು ಅಮೆರಿಕ ಸೂಚಿಸಿದಾಗ ಭಾರತದ ವಿದೇಶಾಂಗ ಸಚಿವರು ಹೇಳಿದ್ದೇನು ನೋಡಿ ಎಂದು ಎಸ್ ಜೈಶಂಕರ್ ಅವರ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧಿಸಲು ಪಾಕಿಸ್ತಾನ ಸರಕಾರ ನಿರ್ಧಾರ
ಈ ವಿಡಿಯೋದಲ್ಲಿ ನೀವು ಯಾರು ಎಂದು ಜೈಶಂಕರ್ ಪ್ರಶ್ನಿಸುತ್ತಾರೆ. ರಷ್ಯಾದಿಂದ ಯುರೋಪ್ ಅನಿಲ ಖರೀದಿ ಮಾಡುತ್ತಿದೆ. ನಮ್ಮ ಜನರಿಗೆ ಅಗತ್ಯ ಇರುವುದರಿಂದ ನಾವೂ ಖರೀದಿ ಮಾಡುತ್ತೇವೆ ಎಂದು ಜೈಶಂಕರ್ ಹೇಳುತ್ತಾರೆ. ಇದೇ ವಿಡಿಯೋ ತೋರಿಸಿ ಇಮ್ರಾನ್ ಖಾನ್, ಸ್ವತಂತ್ರ ದೇಶವೆಂದರೆ ಇದು" ಎಂದು ಭಾರತವನ್ನು ಕೊಂಡಾಡಿದ್ದಾರೆ. ಅಂತೆಯೇ ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಅಮೆರಿಕದ ಒತ್ತಡಕ್ಕೆ ತಲೆಬಾಗಿದ ಶೆಹಬಾಜ್ ಷರೀಫ್ ಸರ್ಕಾರವನ್ನು ಇಮ್ರಾನ್ ಖಾನ್ ಟೀಕಿಸಿದ್ದಾರೆ.
ಇದನ್ನೂ ಓದಿ: ಇಂಧನ ದರ ಇಳಿಕೆ ಬೆನ್ನಲ್ಲೇ ಭಾರತವನ್ನು ಹೊಗಳಿದ ಇಮ್ರಾನ್ ಖಾನ್
"ರಷ್ಯಾದಿಂದ ಅಗ್ಗದ ತೈಲ ಖರೀದಿಗಾಗಿ ನಾವು ರಷ್ಯಾ ಜತೆ ಮಾತುಕತೆ ನಡೆಸಿದ್ದೆವು. ಆದರೆ ಅಮೆರಿಕದ ಒತ್ತಡಕ್ಕೆ ಇಲ್ಲ ಎನ್ನುವ ಧೈರ್ಯ ಈ ಸರ್ಕಾರಕ್ಕೆ ಇಲ್ಲ. ಇಂಧನ ದರಗಳು ಗಗನಕ್ಕೆ ಏರುತ್ತಿವೆ. ಜನರು ಬಡತನ ರೇಖೆಗಿಂತ ಕಡಿಮೆ ಇದ್ದಾರೆ. ನಾನು ಗುಲಾಮಗಿರಿಯ ವಿರುದ್ಧವಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಧರ್ಮ ನಿಂದನೆ ಪ್ರಕರಣ ದಾಖಲು: ಬಂಧನ ಸಾಧ್ಯತೆ!
ಇಮ್ರಾನ್ ಖಾನ್ ಅವರು ಭಾರತವನ್ನು ಹೊಗಳುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ತಾವು ಅಧಿಕಾರ ಕಳೆದುಕೊಳ್ಳುವ ಸನ್ನಿವೇಶ ಸೃಷ್ಟಿಯಾದ ಸಂದರ್ಭದಿಂದಲೂ ಅವರು ಭಾರತ ಮತ್ತು ಅದರ ವಿದೇಶಾಂಗ ನೀತಿಯನ್ನು ಪಾಕಿಸ್ತಾನದ ನೀತಿ ಜತೆ ಹೋಲಿಸಿ ಹೊಗಳುತ್ತಿದ್ದಾರೆ.