10 ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯರಿಗೆ ‘ಮದರ್ ಹೀರೋಯಿನ್’ ಬಿರುದು, 13 ಲಕ್ಷ ರೂ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದೀಗ ರಷ್ಯನ್ನರು ಹೆಚ್ಚು ಮಕ್ಕಳನ್ನು ಹೊಂದುವಂತೆ ಪ್ರೋತ್ಸಾಹಿಸುತ್ತಿದ್ದು, 10 ಮಕ್ಕಳನ್ನು ಹೊಂದುವ ತಾಯಂದಿರಿಗೆ ಬಹುಮಾನ ನೀಡುವ ಜೋಸೆಫ್ ಸ್ಟಾಲಿನ್ ಅವರು ಜಾರಿಗೆ ತಂದ ಪ್ರಶಸ್ತಿಯನ್ನು ಮರಳಿ ತರುವ ಮೂಲಕ ಜನಸಂಖ್ಯೆ ಕುಸಿತವನ್ನು ತಡೆಯಲು ಯೋಜಿಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
Updated on

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದೀಗ ರಷ್ಯನ್ನರು ಹೆಚ್ಚು ಮಕ್ಕಳನ್ನು ಹೊಂದುವಂತೆ ಪ್ರೋತ್ಸಾಹಿಸುತ್ತಿದ್ದು, 10 ಮಕ್ಕಳನ್ನು ಹೊಂದುವ ತಾಯಂದಿರಿಗೆ ಬಹುಮಾನ ನೀಡುವ ಜೋಸೆಫ್ ಸ್ಟಾಲಿನ್ ಅವರು ಜಾರಿಗೆ ತಂದ ಪ್ರಶಸ್ತಿಯನ್ನು ಮರಳಿ ತರುವ ಮೂಲಕ ಜನಸಂಖ್ಯೆ ಕುಸಿತವನ್ನು ತಡೆಯಲು ಯೋಜಿಸಿದ್ದಾರೆ.

ರಷ್ಯಾದ ಮಹಿಳೆಯರು ಹೆಚ್ಚು ಮಕ್ಕಳನ್ನು ಹೊಂದರು ಪ್ರೋತ್ಸಾಹ ನೀಡುವ ಉದ್ದೇಶದಿಂದಲೇ ಸೋವಿಯತ್ ಯುಗದಲ್ಲಿ ಜಾರಿಯಲ್ಲಿದ್ದ ಪ್ರಶಸ್ತಿಯನ್ನು ಪುಟಿನ್ ಮರಳಿ ತಂದಿದ್ದಾರೆ. ಎರಡನೇ ಮಹಾಯುದ್ಧದ ಸಮಯದಲ್ಲಿ ದೇಶವು ಅಪಾರ ಸಾವುನೋವುಗಳನ್ನು ಅನುಭವಿಸಿದ ನಂತರ 1944 ರಲ್ಲಿ ಜೋಸೆಫ್ ಸ್ಟಾಲಿನ್ ಅವರ ನೇತೃತ್ವದಲ್ಲಿ 'ಮದರ್ ಹೀರೋಯಿನ್' ಎಂಬ ಗೌರವ ಬಿರುದನ್ನು ಸ್ಥಾಪಿಸಲಾಯಿತು.

1994ರಲ್ಲಿ ಈ ಪ್ರಶಸ್ತಿಯನ್ನು ಜಾರಿಗೆ ತರಲಾಗಿತ್ತು. ರಷ್ಯಾದ 4,00,000ಕ್ಕೂ ಹೆಚ್ಚು ನಾಗರಿಕರು ಈ ಗೌರವ ಪ್ರಶಸ್ತಿಯನ್ನು ಪಡೆದಿದ್ದರು. ಆದರೆ, 1991ರಲ್ಲಿ ಸೋವಿಯತ್ ಒಕ್ಕೂಟ ಪತನವಾದ ನಂತರ ಈ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿತ್ತು. ಆದರೆ, ಇದೀಗ ರಷ್ಯಾ ಅಧ್ಯಕ್ಷ ಪುಟಿನ್ ಮತ್ತೆ ಈ ಪ್ರಶಸ್ತಿಯನ್ನು ಜಾರಿಗೆ ತಂದಿದ್ದಾರೆ. ದೇಶದಲ್ಲಿ ಕಡಿಮೆಯಾಗುತ್ತಿರುವ ಜನಸಂಖ್ಯೆಯ ಕುಸಿತವನ್ನು ಸರಿಪಡಿಸಲು ಇಂತಹ ಕ್ರಮಗಳು ಅಗತ್ಯವಿದೆ ಎಂದು ಹಿಂದೆಯೇ ಅವರು ಹೇಳಿದ್ದರು.

10 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡುವ ರಷ್ಯಾದ ತಾಯಂದಿರಿಗೆ ತಮ್ಮ 10ನೇ ಮಗುವಿಗೆ ಒಂದು ವರ್ಷ ತುಂಬಿದ ವೇಳೆ 1 ಮಿಲಿಯನ್ ರೂಬಲ್ಸ್‌ಗಳನ್ನು (ಸುಮಾರು 13 ಲಕ್ಷ ರೂಪಾಯಿ) ನೀಡಲಾಗುತ್ತದೆ. ಎಲ್ಲಾ ಒಂಬತ್ತು ಮಕ್ಕಳು ಇನ್ನೂ ಜೀವಂತವಾಗಿದ್ದರೆ ಮಾತ್ರ ಅವರು ಹಣವನ್ನು ಪಡೆಯಬಹುದು. ಆದರೆ, ಭಯೋತ್ಪಾದನಾ ಕೃತ್ಯಗಳಿಂದ ಅಥವಾ ಸಶಸ್ತ್ರ ಸಂಘರ್ಷದಲ್ಲಿ ಸಾವಿಗೀಡಾದವರಿಗೆ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.

‘ಮದರ್ ಹೀರೋಯಿನ್’ ಪ್ರಶಸ್ತಿ ವಿಜೇತರು ರಷ್ಯಾದ ಧ್ವಜದಿಂದ ಅಲಂಕರಿಸಲ್ಪಟ್ಟ ಚಿನ್ನದ ಪದಕಗಳನ್ನು ಸಹ ಸ್ವೀಕರಿಸುತ್ತಾರೆ.

145.20 ಇದ್ದ ರಷ್ಯಾದ ಜನಸಂಖ್ಯೆಯು 2022ರಲ್ಲಿ 4,00,000 ಕುಸಿತವಾಗುವುದರೊಂದಿಗೆ 145.1 ಮಿಲಿಯನ್‌ ತಲುಪಿದೆ. ಇತ್ತೀಚಿನ ವರ್ಷಗಳಲ್ಲಿ ಜನನ ದರ ಕುಸಿತವಾಗುತ್ತಿರುವುದು ರಷ್ಯಾಗೆ ಹೊಡೆತ ನೀಡಿದೆ. ಕುಸಿತದ ದರವು 2021 ರಿಂದ ಸುಮಾರು ದ್ವಿಗುಣಗೊಂಡಿದೆ ಮತ್ತು ಕೋವಿಡ್ -19 ಸಾಂಕ್ರಾಮಿಕದ ಪ್ರಭಾವದಿಂದಾಗಿ ಹಿಂದಿನ ವರ್ಷದಿಂದ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com