ನಿರ್ಬಂಧಗಳಿಂದ ಮಾನವೀಯ ನೆರವುಗಳಿಗೆ ವಿನಾಯಿತಿ ನಿರ್ಣಯ: ಮತ ಚಲಾಯಿಸದೇ ತಟಸ್ಥವಾಗಿ ಉಳಿದ ಭಾರತ

ನಿರ್ಬಂಧ ಎದುರಿಸುತ್ತಿರುವವರಿಗೆ ಮಾನವೀಯ ನೆರವುಗಳಿಗೆ ವಿನಾಯಿತಿ ನೀಡುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದಿಂದ ಭಾರತ ಮತಚಲಾವಣೆ ಮಾಡದೇ ತಟಸ್ಥವಾಗಿ ಉಳಿದಿದೆ.
ಯುಎನ್ಎಸ್ ಸಿ
ಯುಎನ್ಎಸ್ ಸಿ

ನವದೆಹಲಿ: ನಿರ್ಬಂಧ ಎದುರಿಸುತ್ತಿರುವವರಿಗೆ ಮಾನವೀಯ ನೆರವುಗಳಿಗೆ ವಿನಾಯಿತಿ ನೀಡುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದಿಂದ ಭಾರತ ಮತಚಲಾವಣೆ ಮಾಡದೇ ತಟಸ್ಥವಾಗಿ ಉಳಿದಿದೆ.
 
ತನ್ನ ನೆರೆ ರಾಷ್ಟ್ರದಲ್ಲಿರುವ ಭಯೋತ್ಪಾದಕ ಗುಂಪು ಸೇರಿದಂತೆ ನಿರ್ಬಂಧ ಎದುರಿಸುತ್ತಿರುವ ಹಲವು ಭಯೋತ್ಪಾದಕ ಸಂಘಟನೆಗಳು ಇಂತಹ ವಿನಾಯಿತಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಹಾಗೂ ಈ ಮೂಲಕ ದೇಣಿಗೆ ಗಳಿಸಿ, ತನಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳುತ್ತಿದೆ ಎಂದು ಭಾರತ ಅಭಿಪ್ರಾಯ ವ್ಯಕ್ತಪಡಿಸಿದೆ.
 
15 ರಾಷ್ಟ್ರಗಳ ಮಂಡಳಿಯಲ್ಲಿ ಭಾರತ ಅಧ್ಯಕ್ಷತೆ ವಹಿಸಿದೆ. ನಿರ್ಣಯವನ್ನು ಅಮೇರಿಕ ಹಾಗೂ ಐರ್ಲೇಂಡ್ ಗಳು ಮಂಡಿಸಿದ್ದವು.
 
ಈ ನಿರ್ಣಯವನ್ನು ಅಂಗೀಕರಿಸಿದ ಬಳಿಕ ಹಲವು ಜೀವಗಳು ಉಳಿಯಲಿದೆ ಎಂದು ನಿರ್ಣಯ ಮಂಡಿಸಿದ ಅಮೇರಿಕ, ಐರ್ಲೆಂಡ್ ಹೇಳಿವೆ. 14 ಸದಸ್ಯ ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ, ಭಾರತ ಒಂದೇ ತಟಸ್ಥವಾಗಿ ಉಳಿದ ರಾಷ್ಟ್ರವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com