ಉಕ್ರೇನ್ ಜೊತೆಗಿನ ಯುದ್ಧವನ್ನು ಶೀಘ್ರವೇ ನಿಲ್ಲಿಸುತ್ತೇವೆ: ಎಲ್ಲವೂ ಉತ್ತಮ ರೀತಿಯಲ್ಲಿ ಅಂತ್ಯವಾಗಲಿದೆ; ಪುಟಿನ್‌

ಕಳೆದ 10 ತಿಂಗಳುಗಳಿಂದ ನಡೆಯುತ್ತಿರುವ ರಷ್ಯಾ  ಹಾಗೂ ಉಕ್ರೇನ್  ನಡುವಿನ ಭೀಕರ ಯುದ್ಧವನ್ನು ಶೀಘ್ರವೇ ನಿಲ್ಲಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್  ತಿಳಿಸಿದ್ದಾರೆ.
ವ್ಲಾಡಿಮಿರ್ ಪುಟಿನ್
ವ್ಲಾಡಿಮಿರ್ ಪುಟಿನ್

ಮಾಸ್ಕೋ: ಕಳೆದ 10 ತಿಂಗಳುಗಳಿಂದ ನಡೆಯುತ್ತಿರುವ ರಷ್ಯಾ  ಹಾಗೂ ಉಕ್ರೇನ್  ನಡುವಿನ ಭೀಕರ ಯುದ್ಧವನ್ನು ಶೀಘ್ರವೇ ನಿಲ್ಲಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್  ತಿಳಿಸಿದ್ದಾರೆ.

ಉಕ್ರೇನ್‌ನೊಂದಿಗಿನ ಸಂಘರ್ಷವನ್ನು ಕೊನೆಗೊಳಿಸುವುದು ನಮ್ಮ ಗುರಿಯಾಗಿದೆ, ಇದಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ. ಆದಷ್ಟು ಬೇಗ ಎಲ್ಲವನ್ನೂ ಕೊನೆಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಅತ್ಯಂತ ಬೇಗನೇ ಅಂತ್ಯಗೊಳಿಸಲು ಬಯಸಿದ್ದೇವೆ ಎಂದು ಪುಟಿನ್‌ ಹೇಳಿದ್ದಾರೆ. ಇದು ರಾಜತಾಂತ್ರಿಕವಾಗಿರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಸಂಘರ್ಷವನ್ನು ಅಂತ್ಯಗೊಳಿಸುವುದು ನಮ್ಮ ಧ್ಯೇಯ. ಇದಕ್ಕಾಗಿ ಶ್ರಮ ಪಡುತ್ತಿದ್ದೇವೆ. ಇವೆಲ್ಲವೂ ಶೀಘ್ರವೇ, ಉತ್ತಮ ರೀತಿಯಲ್ಲಿ ಅಂತ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ  ಯುದ್ಧ ಪ್ರಾರಂಭವಾದಾಗಿನಿಂದ ಮೊದಲ ಬಾರಿ ಅಮೆರಿಕಾಗೆ ಭೇಟಿ ನೀಡಿದ್ದಾರೆ. ಗುರುವಾರ ವಾಷಿಂಗ್ಟನ್‌ನಲ್ಲಿ ನಡೆದ ಗಣ್ಯರೊಂದಿಗಿನ ಭೇಟಿಯ ಬಳಿಕ ಅಮೆರಿಕ ಪೇಟ್ರಿಯಾಟ್ ಕ್ಷಿಪಣಿಯನ್ನು ಉಕ್ರೇನ್‌ಗೆ ನೀಡಿದೆ.

ಅಮೆರಿಕ ಉಕ್ರೇನ್‌ಗೆ ನೀಡಿರುವ ಮಿಲಿಟರಿ ಸಹಾಯದಿಂದ ಯುದ್ಧವನ್ನು ನಿಲ್ಲಿಸಲು ಅಥವಾ ಮಾಸ್ಕೋ ತನ್ನ ಗುರಿಯನ್ನು ಸಾಧಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ರಷ್ಯಾ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com