ನಾಪತ್ತೆಯಾಗಿದ್ದ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಮತ್ತೆ ಕೆಲಸಕ್ಕೆ ಹಾಜರು; ಅಡುಗೆ ಅನಿಲ ವಿತರಣೆಗೆ ಆದೇಶ

ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಮತ್ತು ಜನರ ಮೂಲಭೂತ ಅಗತ್ಯಗಳನ್ನು ಪೂರೈಸಲು ವಿಫಲವಾದ ಶ್ರೀಲಂಕಾ ಸರ್ಕಾರದ ವಿರುದ್ಧ ಆಕ್ರೋಶಗೊಂಡ ಜನ ತಮ್ಮ ಕಚೇರಿ ಮತ್ತು ಅಧಿಕೃತ ನಿವಾಸ ಎರಡನ್ನೂ ಆಕ್ರಮಿಸಿಕೊಂಡ ನಂತರ...
ಸೀಮೆಎಣ್ಣೆಗಾಗಿ ಸಾಲುಗಟ್ಟಿ ನಿಂತಿರುವ ಜನ
ಸೀಮೆಎಣ್ಣೆಗಾಗಿ ಸಾಲುಗಟ್ಟಿ ನಿಂತಿರುವ ಜನ

ಕೊಲಂಬೊ: ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಮತ್ತು ಜನರ ಮೂಲಭೂತ ಅಗತ್ಯಗಳನ್ನು ಪೂರೈಸಲು ವಿಫಲವಾದ ಶ್ರೀಲಂಕಾ ಸರ್ಕಾರದ ವಿರುದ್ಧ ಆಕ್ರೋಶಗೊಂಡ ಜನ ತಮ್ಮ ಕಚೇರಿ ಮತ್ತು ಅಧಿಕೃತ ನಿವಾಸ ಎರಡನ್ನೂ ಆಕ್ರಮಿಸಿಕೊಂಡ ನಂತರ ನಾಪತ್ತೆಯಾಗಿದ್ದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಈಗ ಮತ್ತೆ ಕೆಲಸಕ್ಕೆ ಹಾಜರಾಗಿದ್ದು, ಅಡುಗೆ ಅನಿಲ ವಿತರಣೆಗೆ ಆದೇಶ ನೀಡಿದ್ದಾರೆ.

ಅದಾಗ್ಯೂ ಅಧ್ಯಕ್ಷರು ಎಲ್ಲಿದ್ದಾರೆ ಎಂದು ತಿಳಿದು ಬಂದಿಲ್ಲ. ಹಸಿವಿನಿಂದ ಬಳಲುತ್ತಿರುವ ದೇಶಕ್ಕೆ 3,700 ಮೆಟ್ರಿಕ್ ಟನ್ ಎಲ್‌ಪಿ ಗ್ಯಾಸ್ ದೊರೆತ ನಂತರ ಅಡುಗೆ ಅನಿಲವನ್ನು ಸುಗಮವಾಗಿ ವಿತರಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದು ಅವರ ಕಚೇರಿ ಭಾನುವಾರ ತಿಳಿಸಿದೆ.

ಇಂದು ಮಧ್ಯಾಹ್ನ ಮೊದಲ ಹಡಗು ಕೆರವಲಪಿಟಿಯಕ್ಕೆ ಆಗಮಿಸುತ್ತಿದ್ದಂತೆ ಅನಿಲ ಇಳಿಸುವಿಕೆ ಮತ್ತು ವಿತರಣೆ ಕೈಗೊಳ್ಳುವಂತೆ ಅಧ್ಯಕ್ಷ ರಾಜಪಕ್ಸೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.

3,740 ಮೆಟ್ರಿಕ್ ಟನ್ ಅನಿಲವನ್ನು ಸಾಗಿಸುವ ಎರಡನೇ ಹಡಗು ಜುಲೈ 11 ರಂದು ಬರಲಿದೆ ಮತ್ತು 3,200 ಮೆಟ್ರಿಕ್ ಟನ್ ಅನಿಲ ಹೊತ್ತ ಮೂರನೇ ಹಡಗು ಜುಲೈ 15 ರಂದು ತಲುಪಲಿದೆ ಎಂದು ಶ್ರೀಲಂಕಾ ಮಾಧ್ಯಮಗಳು ವರದಿ ಮಾಡಿವೆ.

ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಅವರ ನಿವಾಸವನ್ನು ವಶಪಡಿಸಿಕೊಂಡಿರುವ ಪ್ರತಿಭಟನಾಕಾರರು ಅವರ ಮನೆಯಲ್ಲಿ ಮನಬಂದಂತೆ ಎಂಜಾಯ್ ಮಾಡ್ತಿದ್ದಾರೆ. ಅಧ್ಯಕ್ಷರ ವಿರುದ್ಧ ಕೋಪಗೊಂಡಿರುವ ಪ್ರತಿಭಟನಾಕಾರರು ನಿನ್ನೆ ನಿವಾಸವನ್ನು ವಶಪಡಿಸಿಕೊಂಡಿದ್ದು, ಅವರ ಅರಮನೆಯು ಕೊಲಂಬೊದಲ್ಲಿ ಹೊಸ ಪ್ರವಾಸಿ ತಾಣವಾಗಿದೆ. ಇಂದು ಅರಮನೆಯಲ್ಲಿರುವ ಜಿಮ್‌ನಲ್ಲಿ ಜನಸಾಗರವೇ ಕಸರತ್ತು ನಡೆಸುತ್ತಿರುವುದು ಕಂಡುಬಂತು.

ಜಿಮ್‌ನಲ್ಲಿನ ಟ್ರೆಡ್‌ಮಿಲ್‌ಗಳ ಬಳಕೆ , ಕಾರ್ಡಿಯೋ ಮತ್ತು ತೂಕದ ಉಪಕರಣಗಳನ್ನು ಸಹ ಬಳಸುತ್ತಿದ್ದು ಮನಬಂದಂತೆ ವರ್ತಿಸುತ್ತಿದ್ದಾರೆ.  ಶನಿವಾರ  ಪ್ರತಿಭಟನಾಕಾರರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಸ್ನಾನ ಮಾಡುತ್ತಿರುವುದು, ಅಡುಗೆಮನೆಯಲ್ಲಿ ಊಟ ಮಾಡುವುದು ಮತ್ತು ಅಧ್ಯಕ್ಷರ ಮನೆಯಲ್ಲಿ ಮಲಗುವ ಕೋಣೆಗಳಲ್ಲಿ ವಿಶ್ರಾಂತಿ ಪಡೆಯುತ್ತಿರುವ ವೀಡಿಯೊಗಳು ಹೊರಬಿದ್ದ ಬೆನ್ನಲ್ಲೇ ಇಂದಿನ ವಿಡಿಯೋ ವೈರಲ್ ಆಗ್ತಿದೆ.

ಅಧ್ಯಕ್ಷ ರಾಜಪಕ್ಸೆ ಅವರು ಪಲಾಯನಗೈದಿದ್ದು ಪ್ರಸ್ತುತ ಶ್ರೀಲಂಕಾ ನೌಕಾಪಡೆಯ ಹಡಗಿನಲ್ಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ನಿನ್ನೆ ಜುಲೈ 13 ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ರಾಜಪಕ್ಸೆ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com