ಕ್ರೆಡಿಟ್‌ ಲೈನ್‌ ಆಧಾರದಲ್ಲಿ ಇಂಧನ ನೀಡಿದ ಏಕೈಕ ರಾಷ್ಟ್ರ ಭಾರತ; ರಷ್ಯಾದೊಂದಿಗೂ ಚರ್ಚೆ: ಶ್ರೀಲಂಕಾ ಸಚಿವ

ಕ್ರೆಡಿಟ್‌ ಲೈನ್‌ ಆಧಾರದಲ್ಲಿ ಶ್ರೀಲಂಕಾಗೆ ಇಂಧನ ನೀಡಿದ ಏಕೈಕ ರಾಷ್ಟ್ರ ಭಾರತ ಎಂದು ಶ್ರೀಲಂಕಾ ಇಂಧನ ಸಚಿವ ಕಾಂಚನ ವಿಜೆಸೇಖರ ಹೇಳಿದ್ದಾರೆ.
ಶ್ರೀಲಂಕಾ ಇಂಧನ ಸಚಿವ ಕಾಂಚನ ವಿಜೆಸೇಖರ
ಶ್ರೀಲಂಕಾ ಇಂಧನ ಸಚಿವ ಕಾಂಚನ ವಿಜೆಸೇಖರ

ಕೊಲಂಬೊ: ಕ್ರೆಡಿಟ್‌ ಲೈನ್‌ ಆಧಾರದಲ್ಲಿ ಶ್ರೀಲಂಕಾಗೆ ಇಂಧನ ನೀಡಿದ ಏಕೈಕ ರಾಷ್ಟ್ರ ಭಾರತ ಎಂದು ಶ್ರೀಲಂಕಾ ಇಂಧನ ಸಚಿವ ಕಾಂಚನ ವಿಜೆಸೇಖರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಜೆಶೇಖರ, ಆರ್ಥಿಕ ಬಿಕ್ಕಟ್ಟು 20 ಮಿಲಿಯನ್ ಶ್ರೀಲಂಕಾದವರ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಇಂಧನವನ್ನು ಖರೀದಿಸಲು ಕ್ರೆಡಿಟ್ ಲೈನ್ ನೀಡಿದ್ದಕ್ಕಾಗಿ ಭಾರತ ಸರ್ಕಾರವನ್ನು ಶ್ಲಾಘಿಸಿದರು.ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಇಂಧನ ಕೊರತೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಶ್ರೀಲಂಕಾಗೆ ಹಣ ಪಾವತಿಸುವ ಬಗ್ಗೆ ಬ್ಯಾಂಕ್‌ ಖಾತರಿ (ಕ್ರೆಡಿಟ್‌ ಲೈನ್) ಆಧಾರದಲ್ಲಿ ಈ ವರೆಗೆ ನಮಗೆ ಇಂಧನ ಪೂರೈಸಿದ ಏಕೈಕ ರಾಷ್ಟ್ರ ಭಾರತ ಮಾತ್ರ ಎಂದು ಶ್ರೀಲಂಕಾದ ಇಂಧನ ಸಚಿವ ಕಾಂಚನ ವಿಜೆಸೇಖರ ಶನಿವಾರ ಹೇಳಿದ್ದಾರೆ.

'ನಾವು ವಿವಿಧ ದೇಶಗಳಿಗೆ (ಇಂಧನಕ್ಕಾಗಿ) ವಿನಂತಿ ಮಾಡಿಕೊಂಡಿದ್ದೇವೆ. ಹೀಗಾಗಿ, ನಮಗೆ ಸಹಾಯ ಮಾಡಲು ಮುಂದೆ ಬರುವ ಯಾವುದೇ ದೇಶವನ್ನು ನಾವು ಪ್ರಶಂಸಿಸುತ್ತೇವೆ. ಕ್ರೆಡಿಟ್‌ ಲೈನ್ ಆಧಾರದಲ್ಲಿ ಈ ವರೆಗೆ ನಮಗೆ ಇಂಧನ ಪೂರೈಸಿದ ಏಕೈಕ ರಾಷ್ಟ್ರ ಭಾರತ ಮಾತ್ರ' ಎಂದು ಕಾಂಚನ ವಿಜೆಸೇಖರ ತಿಳಿಸಿದ್ದಾರೆ.

‘ರಷ್ಯಾ ಸರ್ಕಾರದೊಂದಿಗೂ ನಾವು ಚರ್ಚೆ ನಡೆಸುತ್ತಿದ್ದೇವೆ. ಆರಂಭಿಕ ಸಭೆಗಳು ರಷ್ಯಾದಲ್ಲಿ ನಡೆದಿವೆ. ನಾವು ನಮ್ಮ ಅಗತ್ಯವನ್ನು ತಿಳಿಸಿದ್ದೇವೆ. ಇನ್ನೂ ಮಾತುಕತೆಗಳು ನಡೆಯುತ್ತಿವೆ. ಯಾವ ರೀತಿಯ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂಬುದನ್ನು ತಿಳಿಯಲು ನಾವೂ ಕಾಯುತ್ತಿದ್ದೇವೆ‘ ಎಂದು ಅವರು ಹೇಳಿದ್ದಾರೆ.

ವಿಜೆಸ್ಕರ ಅವರು ಇಂದು "ರಾಷ್ಟ್ರೀಯ ಇಂಧನ ಪಾಸ್" ಯೋಜನೆ ಎಂಬ ಹೆಸರಿನ ಇಂಧನ ಪಡಿತರ ಯೋಜನೆಯನ್ನು ಪರಿಚಯಿಸಿದರು. ಹೊಸ ಪಾಸ್ ವಾರಕ್ಕೊಮ್ಮೆ ಇಂಧನ ಕೋಟಾದ ಹಂಚಿಕೆಯನ್ನು ಖಾತರಿಪಡಿಸುತ್ತದೆ. ವಾಹನದ ಗುರುತಿನ ಸಂಖ್ಯೆ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಪ್ರತಿ ರಾಷ್ಟ್ರೀಯ ಗುರುತಿನ ಚೀಟಿ ಸಂಖ್ಯೆಗೆ (NIC) QR ಕೋಡ್ ನೀಡಲಾಗುತ್ತದೆ. ನೋಂದಾಯಿತ ವಾಹನಗಳನ್ನು ಹೊಂದಿರುವ ಜನರು ತಮ್ಮ ನೋಂದಣಿ ಸಂಖ್ಯೆಯ ಕೊನೆಯ ಅಂಕಿಯ ಆಧಾರದ ಮೇಲೆ ತಮ್ಮ ಪಾಲಿನ ಇಂಧನ ಪಡೆಯುತ್ತಾರೆ. ಹಾಲಿ ನಡೆಯುತ್ತಿರುವ ಇಂಧನ ಬಿಕ್ಕಟ್ಟಿನ ಮಧ್ಯೆ, ಪ್ರವಾಸಿಗರು ಮತ್ತು ವಿದೇಶಿಯರಿಗೆ ಕೊಲಂಬೊದಲ್ಲಿ ಇಂಧನ ತೆಗೆದುಕೊಳ್ಳಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com