ಆರ್ಥಿಕ ಬಿಕ್ಕಟ್ಟು: ಗಿಲ್ಗಿಟ್-ಬಾಲ್ಟಿಸ್ತಾನ್ ಚೀನಾಕ್ಕೆ ಹಸ್ತಾಂತರಿಸುತ್ತಾ ಪಾಕಿಸ್ತಾನ?

ಪಾಕಿಸ್ತಾನವು ತನ್ನ ಹೆಚ್ಚುತ್ತಿರುವ ಸಾಲವನ್ನು ಪಾವತಿಸಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶ(PoK) ಗಿಲ್ಗಿಟ್-ಬಾಲ್ಟಿಸ್ತಾನ್(GB) ಅನ್ನು ಚೀನಾಕ್ಕೆ ಗುತ್ತಿಗೆ ನೀಡುವ ಸಾಧ್ಯತೆ ಇದೆ.
ಶೆಹಬಾಜ್-ಷರೀಷ್-ಕ್ಸಿ ಜಿನ್ ಪಿಂಗ್
ಶೆಹಬಾಜ್-ಷರೀಷ್-ಕ್ಸಿ ಜಿನ್ ಪಿಂಗ್

ನವದೆಹಲಿ: ಪಾಕಿಸ್ತಾನವು ತನ್ನ ಹೆಚ್ಚುತ್ತಿರುವ ಸಾಲವನ್ನು ಪಾವತಿಸಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶ(PoK) ಗಿಲ್ಗಿಟ್-ಬಾಲ್ಟಿಸ್ತಾನ್(GB) ಅನ್ನು ಚೀನಾಕ್ಕೆ ಗುತ್ತಿಗೆ ನೀಡುವ ಸಾಧ್ಯತೆ ಇದೆ. ಈ ಕುರಿತು ಕಾರಕೋರಂ ರಾಷ್ಟ್ರೀಯ ಚಳವಳಿಯ ಅಧ್ಯಕ್ಷ ಮುಮ್ತಾಜ್ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಪ್ರತ್ಯೇಕವಾದ ಮತ್ತು ಪಾಕಿಸ್ತಾನದಿಂದ ನಿರ್ಲಕ್ಷಿಸಲ್ಪಟ್ಟ ಗಿಲ್ಗಿಟ್ ಬಾಲ್ಟಿಸ್ತಾನ್ ಭವಿಷ್ಯದ ಯುದ್ಧಭೂಮಿಯಾಗಬಹುದು ಎಂದು ಅವರು ಶಂಕಿಸಿದ್ದಾರೆ.

ಕಾಶ್ಮೀರದ ಉತ್ತರ ಭಾಗವು ಚೀನಾದ ಗಡಿಗೆ ಹೊಂದಿಕೊಂಡಿದೆ. ತನ್ನ ಸಾಲವನ್ನು ತೀರಿಸಲು ಪಾಕಿಸ್ತಾನವು ಯಾವುದೇ ಸಮಯದಲ್ಲಿ ಅದನ್ನು ಚೀನಾಕ್ಕೆ ಹಸ್ತಾಂತರಿಸಬಹುದು ಎಂದು ಮುಮ್ತಾಜ್ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಮುಮ್ತಾಜ್ ಅವರ ಈ ಹೇಳಿಕೆಯನ್ನು ಪಾಕಿಸ್ತಾನದ ಮಾಧ್ಯಮಗಳು ಅಲ್ಲಗಳೆದಿವೆ.

ಚೀನಾದ ದಕ್ಷಿಣ ಏಷ್ಯಾ ವಿಸ್ತರಣೆಗೆ ಗಿಲ್ಗಿಟ್-ಬಾಲ್ಟಿಸ್ತಾನ್ ವರದಾನ
ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಗಿಲ್ಗಿಟ್-ಬಾಲ್ಟಿಸ್ತಾನ್, ಚೀನಾದ ದಕ್ಷಿಣ ಏಷ್ಯಾ ವಿಸ್ತರಣೆಗೆ ವರದಾನವಾಗಲಿದೆ ಎಂದು ಮಮ್ತಾಜ್ ಹೇಳಿದ್ದಾರೆ. ಪಾಕಿಸ್ತಾನವು ಗಿಲ್ಗಿಟ್-ಬಾಲ್ಟಿಸ್ತಾನ್ ಅನ್ನು ಚೀನಾಕ್ಕೆ ಹಸ್ತಾಂತರಿಸಿದರೆ, ಇದಕ್ಕಾಗಿ ಚೀನಾದಿಂದ ದೊಡ್ಡ ಮೊತ್ತವನ್ನು ಪಾಕಿಸ್ತಾನ ಪಡೆಯುವ ಸಾಧ್ಯತೆ ಇದೆ. ಇದು ಪ್ರಸ್ತುತ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾಗಲಿದೆ ಎಂದು ಮುಮ್ತಾಜ್ ಹೇಳಿದ್ದಾರೆ. ಆದರೆ ಇನ್ನೊಂದೆಡೆ ಈ ಹಂತವು ಪಾಕಿಸ್ತಾನಕ್ಕೆ ಸಮಸ್ಯೆಗೆ ಸಿಲುಕುವಂತೆ ಮಾಡುವ ಸಾಧ್ಯತೆ ಇದೆ. ಏಕೆಂದರೆ ಚೀನಾದ ಪ್ರಭಾವವು ಯಾವುದೇ ರೀತಿಯಲ್ಲಿ ಹೆಚ್ಚಾಗುವುದನ್ನು ಅಮೆರಿಕ ಎಂದಿಗೂ ಬಯಸುವುದಿಲ್ಲ. ಐಎಂಎಫ್, ವಿಶ್ವಬ್ಯಾಂಕ್ ಮತ್ತು ಇತರ ಜಾಗತಿಕ ಏಜೆನ್ಸಿಗಳಿಂದ ಹಣವನ್ನು ಪಡೆಯುವುದರಿಂದ ನಿರೀಕ್ಷಿತ ಭವಿಷ್ಯಕ್ಕಾಗಿ ಅಮೆರಿಕ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಬಹುದಾಗಿದೆ ಎಂದರು.

ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಕೆಟ್ಟ ಸ್ಥಿತಿ
ಗಿಲ್ಗಿಟ್-ಬಾಲ್ಟಿಸ್ತಾನ್ ಜನಸಂಖ್ಯೆಯು ದಿನೇ ದಿನೇ ಕಡಿಮೆಯಾಗುತ್ತಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ. ಸಮರ್ಥರು ಕುಟುಂಬ ಸಮೇತ ವಲಸೆ ಹೋಗುತ್ತಿದ್ದಾರೆ. ಪಾಕಿಸ್ತಾನದಲ್ಲಿನ ಒಂಬತ್ತು ಪ್ರತಿಶತದಷ್ಟು ಆತ್ಮಹತ್ಯೆಗಳು ಜಿಬಿಯಲ್ಲಿ ಸಂಭವಿಸುತ್ತವೆ ಎಂದು ವರದಿಯೊಂದು ಹೇಳುತ್ತಿದೆ. ಪಾಕಿಸ್ತಾನದ ಉಳಿದ ಭಾಗಗಳಿಗೆ ವಿದ್ಯುಚ್ಛಕ್ತಿಯನ್ನು ಒದಗಿಸಿದ್ರೂ, ಗಿಲ್ಗಿಟ್-ಬಾಲ್ಟಿಸ್ತಾನ್ ಕೇವಲ ಎರಡು ಗಂಟೆಗಳ ಕಾಲ ಮಾತ್ರ ವಿದ್ಯುತ್ ಒದಗಿಸಲಾಗುತ್ತಿದೆ. ಏಕೆಂದರೆ ಈ ಪ್ರದೇಶವು ಪಾಕಿಸ್ತಾನದ ರಾಷ್ಟ್ರೀಯ ಗ್ರಿಡ್‌ನ ಭಾಗವಾಗಿಲ್ಲ. ಇದರ ಜೊತೆಗೆ, ಹಿಂದುಳಿದ ಪ್ರದೇಶವಾಗಿರುವ ಗಿಲ್ಗಿಟ್ ಬಾಲ್ಟಿಸ್ತಾನ್ ಆಹಾರದ ಕೊರತೆ ಎದುರಿಸುತ್ತಿದೆ. ಜಲವಿದ್ಯುತ್ ಅಥವಾ ಇತರ ಸಂಪನ್ಮೂಲಗಳ ಮೇಲೆ ಯಾವುದೇ ನಿಯಂತ್ರಣವನ್ನು ಈ ಭಾಗದ ನಾಗರಿಕರು ಹೊಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com