50 ವರ್ಷಗಳಿಂದ ಜಾರಿಯಲ್ಲಿದ್ದ ಗರ್ಭಪಾತದ ಹಕ್ಕು ರದ್ದುಗೊಳಿಸಿದ ಅಮೆರಿಕಾ ಸುಪ್ರೀಂ ಕೋರ್ಟ್!

ಅಮೆರಿಕಾದಲ್ಲಿ 50 ವರ್ಷಗಳಿಂದ ಜಾರಿಯಲ್ಲಿದ್ದ ಕಾನೂನುಬದ್ಧ ಗರ್ಭಪಾತದ ಹಕ್ಕನ್ನು ರದ್ದುಕೊಳಿಸಲಾಗಿದೆ ಎಂದು ಅಮೆರಿಕಾದ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ವಾಷಿಂಗ್ಟನ್​: ಅಮೆರಿಕಾದಲ್ಲಿ 50 ವರ್ಷಗಳಿಂದ ಜಾರಿಯಲ್ಲಿದ್ದ ಕಾನೂನುಬದ್ಧ ಗರ್ಭಪಾತದ ಹಕ್ಕನ್ನು ರದ್ದುಕೊಳಿಸಲಾಗಿದೆ ಎಂದು ಅಮೆರಿಕಾದ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
    
ರೋ ಕೇಸಿ ಪ್ರಕರಣದ ತೀರ್ಪನ್ನು ನಾವು ರದ್ದುಗೊಳಿಸುತ್ತೇವೆ. ಗರ್ಭಪಾತಕ್ಕೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವು ಚುನಾಯಿತ ಪ್ರತಿನಿಧಿಗಳು, ಜನರಿಗೆ ಇರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಅಮೆರಿಕದಲ್ಲಿ 1973 ರಲ್ಲಿ ರೋಯ್ ವಿ ವೇಡ್ ಪ್ರಕರಣದಲ್ಲಿ ಮಹಿಳೆಯರಿಗೆ ಗರ್ಭಪಾತ ಮಾಡುವ ಸಾಂವಿಧಾನಿಕ ಹಕ್ಕನ್ನು ನೀಡುವ ಮಹತ್ವದ ತೀರ್ಪು ನೀಡಲಾಗಿತ್ತು. ಅಂದಿನಿಂದ ಅಲ್ಲಿ ಗರ್ಭಪಾತವನ್ನು ಕಾನೂನು ಬದ್ಧಗೊಳಿಸಲಾಗಿತ್ತು.

ಆದರೆ, ಅನಿಯಂತ್ರಿತ ಗರ್ಭಪಾತಗಳು ಮತ್ತು ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡಿತ್ತು. ಕಳೆದ ಕೆಲವು ವರ್ಷಗಳಿಂದ ಅಮೆರಿಕದ ಕೆಲವು ಭಾಗಗಳಲ್ಲಿ ಹೋರಾಡುತ್ತಿದ್ದು, ಗರ್ಭಪಾತದ ಹಕ್ಕನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತಿದ್ದವು.

ಇದೀಗ ಗರ್ಭಪಾತದ ಕುರಿತು ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿನಿಂದ ಕೆಲವರು ಸಂತೋಷಪಟ್ಟರೆ, ಕೆಲವರು ಅದನ್ನು ವಿರೋಧಿಸುತ್ತಿದ್ದಾರೆ. ಈ ಆದೇಶದಲ್ಲಿ ನೂರಾರು ಅಮೆರಿಕನ್ನರು ಸುಪ್ರೀಂಕೋರ್ಟ್ ಮುಂದೆ ಜಮಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಈ ವೇಳೆ, ಪೊಲೀಸರು ಬಿಗಿ ಭದ್ರತೆ ಕೈಗೊಂಡು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ಮಾಡಿದರು. ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಸ್ವಲ್ಪ ಸಮಯದ ನಂತರ ಸುಮಾರು 25 ರಿಂದ 50 ರಾಜ್ಯಗಳು ಗರ್ಭಪಾತದ ಮೇಲೆ ನಿಷೇಧವನ್ನು ಘೋಷಿಸಿದವು. ಯುನೈಟೆಡ್ ಸ್ಟೇಟ್ಸ್​ನ ಮಿಸೌರಿ ರಾಜ್ಯವು ಗರ್ಭಪಾತವನ್ನು ನಿಷೇಧಿಸಿದ ಮೊದಲ ರಾಜ್ಯವಾಯಿತು.

ಸುಪ್ರೀಂ ಕೋರ್ಟ್ ಆದೇಶ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು, ಅಮೆರಿಕಕ್ಕೆ ಅತ್ಯಂತ ದುಃಖದ ದಿನವಾಗಿದೆ ಎಂದು ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಿದೆ. ಮಹಿಳೆಯರ ಆರೋಗ್ಯ ಮತ್ತು ಜೀವನ ಅಪಾಯದಲ್ಲಿ ಬಿದ್ದಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com