ಎಷ್ಟಾದರು ದೂರಿ, ಆದರೆ ಟ್ವಿಟರ್​ನಲ್ಲಿ ಬ್ಲೂ ಟಿಕ್ ಪಡೆಯಲು ತಿಂಗಳಿಗೆ 8 ಡಾಲರ್ ಶುಲ್ಕ ಪಾವತಿಸಿ: ವಿರೋಧ ಹಿನ್ನೆಲೆ ಎಲಾನ್ ಮಸ್ಕ್ ಪ್ರತಿಕ್ರಿಯೆ

ನೀವೆಷ್ಟೇ ದೂರಿದರೂ ಟ್ವಿಟರ್ ನಲ್ಲಿ ಬ್ಲೂ ಟಿಕ್ ಪಡೆಯಲು ತಿಂಗಳಿಗೆ 8 ಡಾಲರ್ ಶುಲ್ಕ ಪಾವತಿಸಲೇಬೇಕೆಂದು ಕಂಪನಿಯ ನೂತನ ಮಾಲೀಕ ಎಲಾನ್​ ಮಸ್ಕ್ ಹೇಳಿದ್ದಾರೆ.
ಎಲಾನ್ ಮಸ್ಕ್
ಎಲಾನ್ ಮಸ್ಕ್

ವಾಷಿಂಗ್ಟನ್: ನೀವೆಷ್ಟೇ ದೂರಿದರೂ ಟ್ವಿಟರ್ ನಲ್ಲಿ ಬ್ಲೂ ಟಿಕ್ ಪಡೆಯಲು ತಿಂಗಳಿಗೆ 8 ಡಾಲರ್ ಶುಲ್ಕ ಪಾವತಿಸಲೇಬೇಕೆಂದು ಕಂಪನಿಯ ನೂತನ ಮಾಲೀಕ ಎಲಾನ್​ ಮಸ್ಕ್ ಹೇಳಿದ್ದಾರೆ.

ಟ್ವಿಟರ್​ನಲ್ಲಿ ಬ್ಲೂಟಿಕ್​ ಅಥವಾ ಪರಿಶೀಲಿಸಿದ ಟ್ವಿಟರ್ ಖಾತೆ ಪಡೆಯಲು 19.99 ಯಎಸ್​ ಡಾಲರ್​ ಕೊಡಬೇಕೆಂಬ ಸುದ್ದಿಗಳು ಹರಿದಾಡಿದ್ದವು. ಇದಕ್ಕೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಎಲಾನ್ ಮಸ್ಕ್, ಪ್ರತಿ​ ತಿಂಗಳಿಗೆ ಅಷ್ಟು ಬೇಡ, 8 ಯುಎಸ್ ಹಣ ಪಾವತಿಸಿ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಿ ಎಂದು ಹೇಳಿದ್ದರು.

ಜನರು ಸ್ವತಃ ಶುಲ್ಕ ತೆರಲು ಆರಂಭಿಸಿದರೆ ಜಾಹೀರಾತುದಾರರ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಕಂಪನಿಯ ಕಾರ್ಯನಿರ್ವಹಣೆಗೆ ಇದರಿಂದ ಹೆಚ್ಚಿನ ಸ್ವಾತಂತ್ರ್ಯ ಸಿಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

ಟ್ವಿಟರ್​ನಲ್ಲಿ ಬ್ಲೂಟಿಕ್ ಪಡೆಯುವುದು ಪ್ರತಿಷ್ಠೆಯ ವಿಷಯವೂ ಆಗಿದೆ. ‘ಪ್ರಸ್ತುತ ಟ್ವಿಟರ್​ನಲ್ಲಿ ಅಧಿಪತಿಗಳು ಮತ್ತು ಕೆಲಸಗಾರರು ಎಂಬ ಎರಡು ವರ್ಗ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಈ ಅಸಮಾನತೆ ಇರುವುದಿಲ್ಲ. ತಿಂಗಳಿಗೆ 8 ಡಾಲರ್ ಶುಲ್ಕ ತೆರುವ ಯಾರು ಬೇಕಾದರೂ ಬ್ಲೂಟಿಕ್​ಗೆ ಅಪ್ಲೈ ಮಾಡಬಹುದಾಗಿದೆ. ಈ ಮೊತ್ತವನ್ನು ಆಯಾ ದೇಶಗಳ ಆರ್ಥಿಕ ಸ್ಥಿತಿಗತಿಗೆ ತಕ್ಕಂತೆ ಪರಿಷ್ಕರಿಸಲಾಗುವುದು.

ಬ್ಲೂ-ಟಿಕ್ ಪಡೆದಿರುವ ಖಾತೆಗಳಿಗೆ ಟ್ವಿಟರ್​ ಆಲ್ಗರಿದಂನಲ್ಲಿ ಆದ್ಯತೆ ಸಿಗುತ್ತದೆ. ‘ಬ್ಲೂಟಿಕ್ ಪಡೆದ ಖಾತೆಗಳಿಗೆ ಪ್ರತಿಕ್ರಿಯೆಗಳು, ಉಲ್ಲೇಖಗಳು ಮತ್ತು ಹುಡುಕಾಟಗಳಲ್ಲಿ ಆದ್ಯತೆ ಸಿಗುತ್ತದೆ. ಇಂಥವರಿಗೆ ದೀರ್ಘ ಅವಧಿಯ ವಿಡಿಯೊ / ಆಡಿಯೊ ಪೋಸ್ಟ್ ಮಾಡಲೂ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ್ದರು.

ಬ್ಲೂ ಟಿಕ್'ಗೆ ಶುಲ್ಕ ಪಾವತಿ ಮಾಡಬೇಕೆಂಬ ಮಸ್ಕ್ ಹೇಳಿಕೆಗೆ ಹಲವರಿಂದ ತೀವ್ರ ವಿರೋಧಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇಂದೂ ಪ್ರತಿಕ್ರಿಯೆ ನೀಡಿರುವ ಎಲಾನ್ ಮಸ್ಕ್, ಎಲ್ಲಾ ದೂರುದಾರರಿಗೆ, ದಯವಿಟ್ಟು ನೀವು ದೂರು ನೀಡುವುದನ್ನು ಮುಂದುವರಿಸಿ, ಆದರೆ, ಬ್ಲೂ ಟಿಕ್ ಪಡೆಯಲು 8 ಡಾಲರ್ ವೆಚ್ಚವಾಗುತ್ತದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com