ಅರುಣಾಚಲ ಪ್ರದೇಶದಲ್ಲಿ ಇಬ್ಬರು ಯುವಕರ ನಾಪತ್ತೆ; ಚೀನಾದಿಂದ ಅಪಹರಣ ಶಂಕೆ 

ಅರುಣಾಚಲ ಪ್ರದೇಶದಲ್ಲಿ ಇಬ್ಬರು ಯುವಕರು ಆ.24 ರಿಂದ ಭಾರತ-ಚೀನಾ ಗಡಿಯ ಪ್ರದೇಶದಿಂದ ನಾಪತ್ತೆಯಾಗಿದ್ದು ಚೀನಾದಿಂದ ಅಪಹರಣಕ್ಕೆ ಒಳಗಾಗಿರುವ ಶಂಕೆ ವ್ಯಕ್ತವಾಗಿದೆ.
ಭಾರತ- ಚೀನಾ ರಾಷ್ಟ್ರ ಧ್ವಜ
ಭಾರತ- ಚೀನಾ ರಾಷ್ಟ್ರ ಧ್ವಜ

ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದಲ್ಲಿ ಇಬ್ಬರು ಯುವಕರು ಆ.24 ರಿಂದ ಭಾರತ-ಚೀನಾ ಗಡಿಯ ಪ್ರದೇಶದಿಂದ ನಾಪತ್ತೆಯಾಗಿದ್ದು ಚೀನಾದಿಂದ ಅಪಹರಣಕ್ಕೆ ಒಳಗಾಗಿರುವ ಶಂಕೆ ವ್ಯಕ್ತವಾಗಿದೆ.

ಎರಡು ತಿಂಗಳಾದರೂ ಇಬ್ಬರು ಯುವಕರ ಪತ್ತೆಯಾಗಿಲ್ಲ. ಬ್ಯಾಟಿಲಂ ಟಿಕ್ರೊ (33) ವರ್ಷ ಹಾಗೂ ಬಾಯಿಂಗ್ಸೋ ಮನ್ಯು (35) ಆ.19 ರಂದು ಔಷಧೀಯ ಸಸ್ಯಗಳ ಶೋಧದಲ್ಲಿ ಮನೆಯಿಂದ ತೆರಳಿದ್ದರು, ಆತ ಆ.24 ರಂದು ಕೊನೆಯದಾಗಿ ಕೆಲವು ಗ್ರಾಮಸ್ಥರಿಗೆ ಕಾಣಿಸಿಕೊಂಡಿದ್ದರು. 

ಅರುಣಾಚಲ ಪ್ರದೇಶದಲ್ಲಿ ಸಾಮಾನ್ಯವಾಗಿ ಔಷಧೀಯ ಸಸ್ಯಗಳನ್ನು ಶೋಧಿಸುವವರು 15-20 ದಿನಗಳ ಕಾಲ ತಮಗೆ ಬೇಕಾಗುವ ಆಹಾರ ಪದಾರ್ಥಗಳನ್ನು ಹೊತ್ತು ಹೋಗಿರುತ್ತಾರೆ. ಕುಟುಂಬ ಸದಸ್ಯರು ಅ.09 ರಂದು ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿದ್ದ ಬಗ್ಗೆ ದೂರು ದಾಖಲಿಸಿದ್ದರು. 

ನಾಪತ್ತೆಯಾಗಿರುವ ಯುವಕರ ಕುಟುಂಬ ಸದಸ್ಯರಿಗೆ ತಮ್ಮ ಯುವಕರು ಅಚಾನಕ್ ಆಗಿ ಚೀನಾ ಗಡಿ ದಾಟಿರಬಹುದು ತತ್ಪರಿಣಾಮ ಅವರು ಚೀನಾದಿಂದ ಅಪಹರಣಕ್ಕೆ ಒಳಗಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com