ಸ್ಫೋಟ ನಡೆದ ಪ್ರದೇಶದ ಚಿತ್ರ
ಸ್ಫೋಟ ನಡೆದ ಪ್ರದೇಶದ ಚಿತ್ರ

ಟರ್ಕಿ: ಪಾದಚಾರಿ ಮಾರ್ಗದಲ್ಲಿ ಸ್ಫೋಟ; ಕನಿಷ್ಠ 4 ಜನರ ಸಾವು, 38ಕ್ಕೂ ಹೆಚ್ಚು ಜನರಿಗೆ ಗಾಯ, ಭೀಕರ ವಿಡಿಯೋ!

ಇಸ್ತಾಂಬುಲ್‌ನ ಅತ್ಯಂತ ಜನಪ್ರಿಯ ಪಾದಚಾರಿ ಮಾರ್ಗವೊಂದರಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದು 38ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published on

ಇಸ್ತಾನ್‌ಬುಲ್‌(ಟರ್ಕಿ): ಇಸ್ತಾಂಬುಲ್‌ನ ಅತ್ಯಂತ ಜನಪ್ರಿಯ ಪಾದಚಾರಿ ಮಾರ್ಗವೊಂದರಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದು 38ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಸ್ತಿಕ್ಲಾಲ್ ಅವೆನ್ಯೂದಲ್ಲಿ ಸ್ಫೋಟ ಸಂಭವಿಸಿದೆ. ಇನ್ನು ಸ್ಫೋಟಕಕ್ಕೆ ಕಾರಣ ತಿಳಿದುಬಂದಿಲ್ಲ. ಸ್ಫೋಟದ ತನಿಖೆಗಾಗಿ ಐವರು ಪ್ರಾಸಿಕ್ಯೂಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ಸರ್ಕಾರಿ ಅನಾಡೋಲು ಸುದ್ದಿ ಸಂಸ್ಥೆ ತಿಳಿಸಿದೆ.

ಸ್ಫೋಟದ ವಿಡಿಯೋ ವೈರಲ್ ಆಗಿದ್ದು ನೂರಾರು ಜನರು ಓಡಾಡುತ್ತಿದ್ದ ಸ್ಟ್ರೀಟ್ ನಲ್ಲಿ ಸ್ಫೋಟ ಸಂಭವಿಸಿದ್ದು ಇದರಿಂದ ಭಯಭೀತರಾದ ಅಲ್ಲಿಂದ ಓಡಿಹೋಗುತ್ತಿರುವುದು ಕಾಣಬಹುದಾಗಿದೆ.

ಸ್ಫೋಟದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇನ್ನು ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಇಸ್ಲಾಮಿಕ್ ಸ್ಟೇಟ್ ಗುಂಪು ಮತ್ತು ಕಾನೂನುಬಾಹಿರ ಕುರ್ದಿಶ್ ಗುಂಪುಗಳಿಂದ 2015 ಮತ್ತು 2017ರ ನಡುವೆ ಟರ್ಕಿಯಲ್ಲಿ ಮಾರಣಾಂತಿಕ ಬಾಂಬ್ ದಾಳಿಗಳ ನಡೆದಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com