ಖೆರ್ಸನ್‌ನಲ್ಲಿ ರಷ್ಯಾ 'ದೌರ್ಜನ್ಯ' ಎಸಗಿದೆ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆರೋಪ

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ರಷ್ಯಾ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದು, ಖೆರ್ಸನ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಂದ ಸೇನೆಯನ್ನು ಹಿಂಪಡೆಯುವ ಮುನ್ನ ನಮ್ಮ ದೇಶದ ಇತರ ಪ್ರದೇಶಗಳಲ್ಲಿ ಮಾಡಿದಂತೆ ರಷ್ಯಾದ ಪಡೆಗಳು ಅದೇ ರೀತಿಯ ದುಷ್ಕೃತ್ಯಗಳನ್ನು ಅಲ್ಲಿಯೂ ಮಾಡಿದೆ ಎಂದಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ

ಕೀವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ರಷ್ಯಾ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದು, ಖೆರ್ಸನ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಂದ ಸೇನೆಯನ್ನು ಹಿಂಪಡೆಯುವ ಮುನ್ನ ನಮ್ಮ ದೇಶದ ಇತರ ಪ್ರದೇಶಗಳಲ್ಲಿ ಮಾಡಿದಂತೆ ರಷ್ಯಾದ ಪಡೆಗಳು ಅದೇ ರೀತಿಯ ದುಷ್ಕೃತ್ಯಗಳನ್ನು ಅಲ್ಲಿಯೂ ಮಾಡಿದೆ ಎಂದಿದ್ದಾರೆ.

ಭಾನುವಾರ ರಾತ್ರಿ ಮಾಡಿರುವ ವಿಡಿಯೋದಲ್ಲಿ, ತನಿಖಾಧಿಕಾರಿಗಳು ಈಗಾಗಲೇ 400 ಕ್ಕೂ ಹೆಚ್ಚು ರಷ್ಯಾದ ಯುದ್ಧ ಅಪರಾಧಗಳನ್ನು ದಾಖಲಿಸಿದ್ದಾರೆ. ಅಲ್ಲದೆ, ಅಲ್ಲಿ ನಾಗರಿಕರು ಮತ್ತು ಮಿಲಿಟರಿ ಸಿಬ್ಬಂದಿಯ ಶವಗಳು ಪತ್ತೆಯಾಗಿವೆ ಎಂದು ದೂರಿದ್ದಾರೆ.

ಖೆರ್ಸನ್ ಪ್ರದೇಶದಲ್ಲಿ ರಷ್ಯಾದ ಸೈನ್ಯವು ನಮ್ಮ ದೇಶದ ಇತರ ಪ್ರದೇಶಗಳಲ್ಲಿ ಮಾಡಿದ ರೀತಿಯಲ್ಲಿಯೇ ದೌರ್ಜನ್ಯ ಎಸಗಿದೆ. ನಾವು ಪ್ರತಿಯೊಬ್ಬ ಕೊಲೆಗಾರನನ್ನು ಪತ್ತೆ ಹಚ್ಚಿ ನ್ಯಾಯವನ್ನು ಕೊಡಿಸುತ್ತೇವೆ. ಎಂಟು ತಿಂಗಳಿಂದ ಆಕ್ರಮಣಕ್ಕೊಳಗಾಗಿದ್ದ ಖೆರ್ಸನ್ ನಗರದಿಂದ ರಷ್ಯಾ ಸೇನೆಯನ್ನು ಹಿಂಪಡೆದುಕೊಂಡಿರುವುದು ಸಂಭ್ರಮಕ್ಕೆ ಕಾರಣವಾಗಿದೆ. ಆದರೆ, ಮಾನವೀಯ ತುರ್ತು ಪರಿಸ್ಥಿತಿಯನ್ನು ಬಹಿರಂಗಪಡಿಸಿದೆ. ಅಲ್ಲಿನ ನಿವಾಸಿಗಳು ವಿದ್ಯುತ್, ನೀರು, ಆಹಾರ ಮತ್ತು ಔಷಧಿಗಳ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ರಷ್ಯಾ ಇನ್ನೂ ವಿಶಾಲವಾದ ಖೆರ್ಸನ್ ಪ್ರದೇಶದ ಸುಮಾರು ಶೇ 70 ರಷ್ಟನ್ನು ನಿಯಂತ್ರಿಸುತ್ತಿದೆ. ಕಳೆದ ವಾರ ತಮ್ಮ ಸೇನೆಯನ್ನು ಹಿಂಪಡೆದುಕೊಂಡ ಬಳಿಕವೂ ನಗರದಲ್ಲಿ ಉಳಿದಿರುವ ರಷ್ಯಾದ ಸೈನಿಕರನ್ನು ಬಂಧಿಸಲಾಗುತ್ತಿದೆ ಎಂದು ಹೇಳಿದರು.

ಅಲ್ಲದೆ, ರಷ್ಯಾದ ಪಡೆಗಳೊಂದಿಗೆ ಸಹಕರಿಸಿದ ಜನರನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ಪೊಲೀಸರು ಅಲ್ಲಿನ ನಿವಾಸಿಗಳಿಗೆ ಕರೆ ನೀಡಿದ್ದಾರೆ.

'ಖೆರ್ಸನ್ ನಗರದಲ್ಲಿನ ಜನರು ಬೂಬಿ ಟ್ರ್ಯಾಪ್ಸ್‌ಗಳ (booby traps) ಬಗ್ಗೆ ಎಚ್ಚರದಿಂದಿರಬೇಕು. ದಯವಿಟ್ಟು, ಖೆರ್ಸನ್ ಪ್ರದೇಶದ ಪರಿಸ್ಥಿತಿ ಇನ್ನೂ ತುಂಬಾ ಅಪಾಯಕಾರಿಯಾಗಿದೆ. ಹೀಗಾಗಿ ಎಚ್ಚರದಿಂದಿರಿ. ಮೊದಲನೆಯದಾಗಿ, ಸಿಡಿಮದ್ದುಗಳಿವೆ. ದುರದೃಷ್ಟವಶಾತ್, ನಮ್ಮ ಮಿಲಿಟರಿ ಎಂಜಿನಿಯರ್ ಒಬ್ಬರು ಸಾವಿಗೀಡಾದರು ಮತ್ತು ಇವುಗಳನ್ನು ತೆರವುಗೊಳಿಸುವಾಗ ಇತರ ನಾಲ್ವರು ಗಾಯಗೊಂಡಿದ್ದಾರೆ. ಅಗತ್ಯ ಸೇವೆಗಳನ್ನು ಪುನಃಸ್ಥಾಪಿಸಲಾಗುವುದು' ಎಂದು ಅವರು ಹೇಳಿದರು.

ವಿದ್ಯುತ್ ಮತ್ತು ನೀರು ಸರಬರಾಜನ್ನು ಸಾಧ್ಯವಾದಷ್ಟು ಬೇಗ ಪುನಃಸ್ಥಾಪಿಸಲು ನಾವು ಅಗತ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ. ನಾವು ಸಾರಿಗೆ ಮತ್ತು ಪೋಸ್ಟ್ ಅನ್ನು ಮರಳಿ ತರುತ್ತೇವೆ. ಆಂಬ್ಯುಲೆನ್ಸ್ ಮತ್ತು ಸಾಮಾನ್ಯ ಔಷಧವನ್ನು ಮರಳಿ ತರೋಣ. ಸಹಜವಾಗಿ, ಅಧಿಕಾರಿಗಳು, ಪೊಲೀಸರು ಮತ್ತು ಕೆಲವು ಖಾಸಗಿ ಕಂಪನಿಗಳ ಕೆಲಸವನ್ನು ಪುನಃಸ್ಥಾಪಿಸುವುದು ಈಗಾಗಲೇ ಪ್ರಾರಂಭವಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com