ಜಿ-20 ಶೃಂಗಸಭೆ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಜೊತೆ ಪ್ರಧಾನಿ ಮೋದಿ ಮಾತುಕತೆ

ಇಂಡೋನೇಷಿಯಾದ ಬಾಲಿಯಲ್ಲಿ ಇಂದಿನಿಂದ ಜಿ-20 ಶೃಂಗಸಭೆ ಆರಂಭವಾಗಿದ್ದು, ಮೊದಲ ದಿನ ಬ್ರಿಟನ್ ಪ್ರಧಾನಿ, ಭಾರತೀಯ ಸಂಜಾತ ರಿಷಿ ಸುನಾಕ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. 
ರಿಷಿ ಸುನಕ್, ಪ್ರಧಾನಿ ನರೇಂದ್ರ ಮೋದಿ
ರಿಷಿ ಸುನಕ್, ಪ್ರಧಾನಿ ನರೇಂದ್ರ ಮೋದಿ

ಬಾಲಿ: ಇಂಡೋನೇಷಿಯಾದ ಬಾಲಿಯಲ್ಲಿ ಇಂದಿನಿಂದ ಜಿ-20 ಶೃಂಗಸಭೆ ಆರಂಭವಾಗಿದ್ದು, ಮೊದಲ ದಿನ ಬ್ರಿಟನ್ ಪ್ರಧಾನಿ, ಭಾರತೀಯ ಸಂಜಾತ ರಿಷಿ ಸುನಾಕ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. 

ಕಳೆದ ತಿಂಗಳಷ್ಟೇ ಬ್ರಿಟನ್ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ ರಿಷಿ ಸುನಕ್, ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಿರು ಸಂವಾದ ನಡೆಸಿದ್ದಾರೆ. ಬ್ರಿಟನ್ ಇತಿಹಾಸದಲ್ಲೇ ಮೊದಲ ಬಾರಿಗೆ ದಕ್ಷಿಣ ಏಷ್ಯಾದ ಪ್ರಜೆಯೊಬ್ಬರು ಪ್ರಧಾನಿಯಾಗಿದ್ದು, ರಿಷಿ ಸುನಕ್ ಅವರನ್ನು ಭಾರತೀಯ ಸಮುದಾಯ ಶ್ಲಾಘಿಸಿದೆ. 

ಈ ಕುರಿತ ಫೋಟೋವೊಂದನ್ನು ಪ್ರಧಾನ ಮಂತ್ರಿ ಕಾರ್ಯಾಲಯದ ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಬಾಲಿಯಲ್ಲಿನ ಜಿ-20 ಶೃಂಗಸಭೆಯ ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಮತ್ತು ರಿಷಿ ಸುನಕ್ ಕಿರು ಸಂವಾದ ನಡೆಸಿದ್ದಾರೆ. ಸುನಕ್ ಅಲ್ಲದೇ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತಿತರ ವಿಶ್ವ ನಾಯಕರನ್ನು ಮೋದಿ ಭೇಟಿಯಾಗಿರುವುದಾಗಿ ಟ್ವೀಟ್ ಮಾಡಲಾಗಿದೆ.

ಜಿ-20 ಶೃಂಗಸಭೆಯಲ್ಲಿ ಜಾಗತಿಕ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದರ ಮೋದಿ, ಯುದ್ದಪೀಡಿತ ರಾಷ್ಟ್ರಗಳು ಶಾಂತಿಗೆ ಮರಳುವ ಹಾದಿಯನ್ನು ಕಂಡುಕೊಳ್ಳಬೇಕಿದೆ ಎಂದು ಕರೆ ನೀಡಿದರು. ಅರ್ಜೇಂಟಿನಾ, ಆಸ್ಟ್ರೇಲಿಯಾ, ಭ್ರಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರಬೀಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ, ಅಮೆರಿಕ ಮತ್ತು ಯೂರೋಪಿಯನ್ ಯೂನಿಯನ್ ರಾಷ್ಟ್ರಗಳು ಜಿ-20 ಶೃಂಗಸಭೆಯ ಸದಸ್ಯ ರಾಷ್ಟ್ರಗಳಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com