ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆ ಮರುಸ್ಥಾಪನೆ: ಎಲಾನ್ ಮಸ್ಕ್

2021ರ ಜನವರಿ 6ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಘೋಷಣೆ ವೇಳೆ ಗಲಾಟೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಶಾಶ್ವತವಾಗಿ ಅಮಾನತುಗೊಂಡಿದ್ದ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವಿಟರ್ ಖಾತೆ ಮರುಸ್ಥಾಪನೆ ಮಾಡಲಾಗುತ್ತದೆ ಎಂದು ಟ್ವಿಟರ್‌ನ ಹೊಸ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: 2021ರ ಜನವರಿ 6ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಘೋಷಣೆ ವೇಳೆ ಗಲಾಟೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಶಾಶ್ವತವಾಗಿ ಅಮಾನತುಗೊಂಡಿದ್ದ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವಿಟರ್ ಖಾತೆ ಮರುಸ್ಥಾಪನೆ ಮಾಡಲಾಗುತ್ತದೆ ಎಂದು ಟ್ವಿಟರ್‌ನ ಹೊಸ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ.

2021ರ ಜನವರಿ 6ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಘೋಷಣೆ ವೇಳೆ ಡೊನಾಲ್ಡ್​ ಟ್ರಂಪ್‌ ಬೆಂಬಲಿಗರು ಕ್ಯಾಪಿಟೋಲ್‌ ಮೇಲೆ ದಾಳಿ ಮಾಡಿದ್ದರು. ಇದಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಟ್ರಂಪ್‌ ಟ್ವಿಟರ್‌ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿತ್ತು.

ಇದರ ಬೆನ್ನಲ್ಲೇ, ಟ್ವಿಟರ್‌ನ ಹೊಸ ಮುಖ್ಯಸ್ಥ ಎಲೋನ್ ಮಸ್ಕ್, ಟ್ವಿಟರ್​ ಮಾಜಿ ಅಧ್ಯಕ್ಷ ಟ್ರಂಪ್ ಅವರನ್ನು ಮರುಸ್ಥಾಪಿಸಬೇಕು. 'ಹೌದು ಅಥವಾ ಇಲ್ಲ' ಎಂದು ಟ್ವೀಟ್​ ಮಾಡಿ ಎಂದು ಜನಮತ ಆರಂಭಿಸಿದ್ದರು.

ಇದಕ್ಕೆ ಶೇ.51.8ರಷ್ಟು ಜನರು ಟ್ರಂಪ್ ಟ್ವಿಟರ್ ಮರುಸ್ಥಾಪಿಸಬೇಕೆಂದು ಹಾಗೂ ಶೇ.48.2ರಷ್ಟು ಜನರು ಬೇಡ ಎಂದು ಪ್ರತಿಕ್ರಿಯೆ ನೀಡಿದ್ದರು. ಹೆಚ್ಚು ಜನರು ಹೌದು ಎಂದು ಪ್ರತಿಕ್ರಿಯೆ ನೀಡಿದ ಹಿನ್ನೆಲೆಯಲ್ಲಿ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಮರುಸ್ಥಾಪಿಸಲಾಗುವುದು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

ಈ ಬಗ್ಗೆ ಸ್ವತಃ ಎಲಾನ್ ಮಸ್ಕ್ ಅವರೇ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಜನರು ತಮ್ಮ ಅಭಿಪ್ರಾಯ ನೀಡಿದ್ದು, ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಮರುಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com