ನೊಬೆಲ್ ಶಾಂತಿ ಪ್ರಶಸ್ತಿ ಸ್ಪರ್ಧಿಗಳ ಪಟ್ಟಿಯಲ್ಲಿ ಫ್ಯಾಕ್ಟ್ ಚೆಕ್'ನ ಮೊಹಮ್ಮದ್ ಜುಬೇರ್, ಪ್ರತೀಕ್ ಸಿನ್ಹಾ

2022ರ ನೊಬೆಲ್ ಶಾಂತಿ ಪ್ರಶಸ್ತಿ ಸ್ಪರ್ಧಿಗಳ ಪಟ್ಟಿಯಲ್ಲಿ ಫ್ಯಾಕ್ಟ್ ಚೆಕರ್ ಮೊಹಮ್ಮದ್ ಜುಬೇರ್ ಮತ್ತು ಪ್ರತೀಕ್ ಸಿನ್ಹಾರ ಹೆಸರಿದೆ ಎಂದು ವರದಿಯಾಗಿದೆ.
ಮೊಹಮ್ಮದ್ ಜುಬೇರ್-ಪ್ರತೀಕ್ ಸಿನ್ಹಾ
ಮೊಹಮ್ಮದ್ ಜುಬೇರ್-ಪ್ರತೀಕ್ ಸಿನ್ಹಾ

ನವದೆಹಲಿ: 2022ರ ನೊಬೆಲ್ ಶಾಂತಿ ಪ್ರಶಸ್ತಿ ಸ್ಪರ್ಧಿಗಳ ಪಟ್ಟಿಯಲ್ಲಿ ಫ್ಯಾಕ್ಟ್ ಚೆಕರ್ ಮೊಹಮ್ಮದ್ ಜುಬೇರ್ ಮತ್ತು ಪ್ರತೀಕ್ ಸಿನ್ಹಾರ ಹೆಸರಿದೆ ಎಂದು ವರದಿಯಾಗಿದೆ.

ಟೈಮ್ ಪ್ರಕಾರ, ಫ್ಯಾಕ್ಟ್ ಚೆಕಿಂಗ್ ವೆಬ್ ಸೈಟ್ ಆಲ್ಟ್‌ನ್ಯೂಸ್‌ನ ಸಹ-ಸಂಸ್ಥಾಪಕರಾದ ಪ್ರತೀಕ್ ಸಿನ್ಹಾ ಮತ್ತು ಮೊಹಮ್ಮದ್ ಜುಬೇರ್ ಅವರು ನಾರ್ವೇಜಿಯನ್ ಶಾಸಕರು, ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ ಓಸ್ಲೋ (PRIO) ಬಹಿರಂಗಪಡಿಸಿದ ನಾಮನಿರ್ದೇಶನಗಳ ಆಧಾರದ ಮೇಲೆ ಬಹುಮಾನವನ್ನು ಗೆಲ್ಲುವ ಸ್ಪರ್ಧಿಗಳಾಗಿದ್ದಾರೆ.

ದೆಹಲಿ ಪೊಲೀಸರ ಎಫ್‌ಐಆರ್ ಪ್ರಕಾರ, 2018ರ ಟ್ವೀಟ್‌ಗಾಗಿ ಮೊಹಮ್ಮದ್ ಜುಬೇರ್ ನನ್ನು 2022ರ ಜೂನ್‌ನಲ್ಲಿ ಬಂಧಿಸಲಾಗಿತ್ತು. ಜುಬೇರ್ ಮಾಡಿದ ಟ್ವೀಟ್ ಹೆಚ್ಚು ಪ್ರಚೋದನಕಾರಿ ಮತ್ತು ದ್ವೇಷದ ಭಾವನೆಗಳನ್ನು ಪ್ರಚೋದಿಸುತ್ತದೆ ಎಂಬುದು ಆರೋಪವಾಗಿತ್ತು. ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಲು ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯಗಳಿಗಾಗಿ ದೆಹಲಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮೊಹಮ್ಮದ್ ಜುಬೇರ್ ಬಂಧನ ಜಾಗತಿಕ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ ಅಮೆರಿಕದ ನಾನ್ ಪ್ರಾಫಿಟ್ ಕಮಿಟಿ, ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತೊಮ್ಮೆ ಕೆಳಮಟ್ಟಕ್ಕೆ ತಲುಪಿದೆ. ಅಲ್ಲಿ ಸರ್ಕಾರವು ಪಂಥೀಯ ವಿಷಯಗಳ ಬಗ್ಗೆ ವರದಿ ಮಾಡುವ ಪತ್ರಿಕಾ ಸದಸ್ಯರಿಗೆ ಪ್ರತಿಕೂಲ ಮತ್ತು ಅಸುರಕ್ಷಿತ ವಾತಾವರಣವನ್ನು ಸೃಷ್ಟಿಸಿದೆ ಎಂದು ಹೇಳಿದೆ.

ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದ ಒಂದು ತಿಂಗಳ ನಂತರ, ಜುಬೇರ್ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದರು.

ಸುಮಾರು 343 ಅಭ್ಯರ್ಥಿಗಳು, 251 ವ್ಯಕ್ತಿಗಳು ಮತ್ತು 92 ಸಂಸ್ಥೆಗಳು 2022ರ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಸ್ಪರ್ಧಿಸುತ್ತಿವೆ. 2022ರ ನೊಬೆಲ್ ಶಾಂತಿ ಪ್ರಶಸ್ತಿಯ ವಿಜೇತರನ್ನು ಓಸ್ಲೋದಲ್ಲಿ ಅಕ್ಟೋಬರ್ 7ರಂದು ಸ್ಥಳೀಯ ಸಮಯ 11 ಗಂಟೆಗೆ ಘೋಷಿಸಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com