ಅಮೆರಿಕಾದಲ್ಲಿ ಪಂಜಾಬ್ ಮೂಲದ ಕುಟುಂಬ ಅಪಹರಣ: ಆಘಾತದಲ್ಲಿ ಕುಟುಂಬ!

ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಎಂಟು ತಿಂಗಳ ಮಗು ಸೇರಿದಂತೆ ನಾಲ್ವರ ಭಾರತೀಯ ಮೂಲದ ಕುಟುಂಬವನ್ನು ಅಪಹರಿಸಿದ ಸುದ್ದಿ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿರುವ ಅವರ ಸಂಬಂಧಿಕರನ್ನು ಆಘಾತಕ್ಕೆ ತಳ್ಳಿದೆ.
ಅಪಹರಣಕ್ಕೊಳಗಾದ ಕುಟುಂಬಸ್ಥರು
ಅಪಹರಣಕ್ಕೊಳಗಾದ ಕುಟುಂಬಸ್ಥರು

ಹೋಶಿಯಾರ್ಪುರ್(ಪಂಜಾಬ್): ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಎಂಟು ತಿಂಗಳ ಮಗು ಸೇರಿದಂತೆ ನಾಲ್ವರ ಭಾರತೀಯ ಮೂಲದ ಕುಟುಂಬವನ್ನು ಅಪಹರಿಸಿದ ಸುದ್ದಿ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿರುವ ಅವರ ಸಂಬಂಧಿಕರನ್ನು ಆಘಾತಕ್ಕೆ ತಳ್ಳಿದೆ.

ನಾಲ್ಕು ಸದಸ್ಯರ ಸಿಖ್ ಕುಟುಂಬದ ಅಪಹರಣ ಪ್ರಕರಣದಲ್ಲಿ 48 ವರ್ಷದ ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ . ಆದರೆ  ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೂ ಕಿಡ್ನಾಪ್ ಆಗಿರುವವರ ಸುಳಿವು ಸಿಕ್ಕಿಲ್ಲ.

ಸೋಮವಾರ ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯ ವ್ಯಾಪಾರದಲ್ಲಿ ಕುಟುಂಬವನ್ನು ಅಪಹರಿಸಲಾಗಿದೆ.

ಕುಟುಂಬದ ಸದಸ್ಯರನ್ನು ಎಂಟು ತಿಂಗಳ ಮಗು ಅರೂಹಿ ಧೇರಿ, ಆಕೆಯ 27 ವರ್ಷದ ತಾಯಿ ಜಸ್ಲೀನ್ ಕೌರ್, ಆಕೆಯ 36 ವರ್ಷದ ತಂದೆ ಜಸ್ದೀಪ್ ಸಿಂಗ್ ಮತ್ತು 39 ವರ್ಷದ ಅಂಕಲ್ ಅಮನದೀಪ್ ಸಿಂಗ್ ಎಂದು ಗುರುತಿಸಲಾಗಿದೆ.

ಜಸ್ದೀಪ್ ಅವರ ಪೋಷಕರು ಡಾ ರಣಧೀರ್ ಸಿಂಗ್ ಮತ್ತು ಕಿರ್ಪಾಲ್ ಕೌರ್ ಹೋಶಿಯಾರ್‌ಪುರದ ತಾಂಡಾ ಬ್ಲಾಕ್‌ನಲ್ಲಿರುವ ಹರ್ಸಿ ಪಿಂಡ್ ಗ್ರಾಮದ ಸ್ಥಳೀಯರು.

ರಣಧೀರ್ ಸಿಂಗ್ ಅವರ ನೆರೆಹೊರೆಯವರಾದ ಚರಂಜಿತ್ ಸಿಂಗ್ ಮಾತನಾಡಿ ಜಸ್ದೀಪ್ ಅವರ ಪೋಷಕರು ಆಘಾತಕ್ಕೊಳಗಾಗಿದ್ದಾರೆ ಮತ್ತು ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದರು.

ರಣಧೀರ್ ಸಿಂಗ್ ಮತ್ತು ಕಿರ್ಪಾಲ್ ಕೌರ್ ಕ್ರಮವಾಗಿ ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಿಂದ ನಿವೃತ್ತರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com