ರಷ್ಯಾ-ಉಕ್ರೇನ್ ಸಂಘರ್ಷ: ಉಕ್ರೇನ್ ರಾಜಧಾನಿ ಕೀವ್ ನಗರದಲ್ಲಿ ಸರಣಿ ಸ್ಫೋಟ
ರಷ್ಯಾ ಮತ್ತು ಕ್ರಿಮಿಯಾವನ್ನು ಸಂಪರ್ಕಿಸುವ ಸೇತುವೆ ಮೇಲೆ ಟ್ರಕ್ ಬಾಂಬ್ ಸ್ಫೋಟಗೊಂಡ ಘಟನೆಗೆ ರಷ್ಯಾ ಉಕ್ರೇನ್ ಅನ್ನು ದೂಷಿಸಿದ ಒಂದು ದಿನದ ನಂತರ ಸೋಮವಾರ ಮುಂಜಾನೆ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ.
Published: 10th October 2022 01:27 PM | Last Updated: 04th November 2022 11:47 AM | A+A A-

ಉಕ್ರೇನ್ ರಾಜಧಾನಿ ಕೀವ್ ನಗರದಲ್ಲಿ ಸ್ಫೋಟ
ಕೀವ್: ರಷ್ಯಾ ಮತ್ತು ಕ್ರಿಮಿಯಾವನ್ನು ಸಂಪರ್ಕಿಸುವ ಸೇತುವೆ ಮೇಲೆ ಟ್ರಕ್ ಬಾಂಬ್ ಸ್ಫೋಟಗೊಂಡ ಘಟನೆಗೆ ರಷ್ಯಾ ಉಕ್ರೇನ್ ಅನ್ನು ದೂಷಿಸಿದ ಒಂದು ದಿನದ ನಂತರ ಸೋಮವಾರ ಮುಂಜಾನೆ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ.
ಸ್ಫೋಟಗಳು ಸ್ಥಳೀಯ ಕಾಲಮಾನ 8:15 ರ ಸುಮಾರಿಗೆ ಕೀವ್ ನಗರದಲ್ಲಿ ಸಂಭವಿಸಿದ್ದು, ಸ್ಫೋಟದ ಸ್ಥಳದ ಕಡೆಗೆ ಹಲವಾರು ಆಂಬ್ಯುಲೆನ್ಸ್‌ಗಳು ತೆರಳಿರುವುದನ್ನು ಪತ್ರಕರ್ತರೊಬ್ಬರು ಕಂಡಿದ್ದಾರೆ.
ಉಕ್ರೇನ್‌ನ ರಾಜಧಾನಿ ಕೀವ್ ಸೇರಿದಂತೆ ಹಲವಾರು ನಗರಗಳಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ಉಕ್ರೇನ್ ಪ್ರೆಸಿಡೆನ್ಸಿ ವರದಿ ಮಾಡಿದೆ.
'ರಾಜಧಾನಿಯ ಮಧ್ಯಭಾಗವಾದ ಶೆವ್ಚೆಂಕಿವ್ಸ್ಕಿ ಜಿಲ್ಲೆಯಲ್ಲಿ ಹಲವಾರು ಸ್ಫೋಟಗಳು ಸಂಭವಿಸಿವೆ' ಎಂದು ಕೀವ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವಿಡಿಯೋಗಳು ನಗರದ ಹಲವಾರು ಪ್ರದೇಶಗಳಲ್ಲಿ ಕಪ್ಪು ಹೊಗೆ ಏರುತ್ತಿರುವುದನ್ನು ತೋರಿಸಿವೆ. ಕೀವ್ ಮೇಲೆ ರಷ್ಯಾದ ಕೊನೆಯ ದಾಳಿಯು ಜೂನ್ 26 ರಂದು ನಡೆದಿತ್ತು.
ಇದನ್ನೂ ಓದಿ: ಉಕ್ರೇನ್‌ನ ಜಪೋರಿಝಿಯಾ ನಗರದ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಿಂದ 17 ಮಂದಿ ಸಾವು
ಕ್ರಿಮಿಯಾ ಸೇತುವೆಯ ಮೇಲೆ ನಡೆದ ಬಾಂಬ್ ಸ್ಫೋಟದಲ್ಲಿನ ಉಕ್ರೇನ್‌ನ ಕೃತ್ಯ ಎಂದು ಹೇಳಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇದು ಭಯೋತ್ಪಾದಕ ಕೃತ್ಯ ಎಂದು ಶನಿವಾರ ಬಣ್ಣಿಸಿದ್ದರು.
ಬಾಂಬ್ ಸ್ಫೋಟದ ಕುರಿತು ಪರಿಶೀಲಿಸಲು ಅವರು ರಚಿಸಿರುವ ತನಿಖಾ ಸಮಿತಿಯ ಮುಖ್ಯಸ್ಥರೊಂದಿಗಿನ ಸಭೆಯಲ್ಲಿ ಪುಟಿನ್ ಮಾತನಾಡುತ್ತಿದ್ದರು ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಸೇತುವೆ ಮೇಲೆ ಉಂಟಾದ ಸ್ಫೋಟವು ಉಕ್ರೇನಿಯನ್ನರು ಮತ್ತು ಇತರರಿಂದ ಸಾಮಾಜಿಕ ಮಾಧ್ಯಮದಲ್ಲಿ ಸಂಭ್ರಮಾಚರಣೆಯನ್ನು ಹುಟ್ಟುಹಾಕಿತು. ಆದರೆ, ನೇರವಾಗಿ ಸ್ಫೋಟದ ಹೊಣೆಯನ್ನು ಹೊತ್ತಿಲ್ಲ.
ರಷ್ಯಾ ಮತ್ತು ಕ್ರಿಮಿಯಾವನ್ನು ಸಂಪರ್ಕಿಸುವ ಸೇತುವೆ ಮೇಲೆ ಟ್ರಕ್ ಬಾಂಬ್ ಸ್ಫೋಟಗೊಂಡ ಪರಿಣಾಮ ಸೇತುವೆಯ ಭಾಗವೊಂದು ಕುಸಿದಿದ್ದು, ಮೂವರು ಮೃತಪಟ್ಟಿದ್ದಾರೆ. ದಕ್ಷಿಣ ಉಕ್ರೇನ್‌ನಲ್ಲಿ ಯುದ್ಧದಲ್ಲಿ ತೊಡಗಿಕೊಂಡಿರುವ ರಷ್ಯಾದ ಯೋಧರಿಗೆ ಸಾಮಗ್ರಿಗಳನ್ನು ತಲುಪಿಸುವ ಪ್ರಮುಖ ಮಾರ್ಗ ಇದಾಗಿತ್ತು. ಇದಾದ ಬಳಿಕ ಉಕ್ರೇನ್ ನಗರದ ಮೇಲೆ ರಷ್ಯಾ ದಾಳಿ ನಡೆಸಿದೆ.