ಸ್ವಯಂಚಾಲಿತ ಮಾಹಿತಿ ವಿನಿಮಯ: ಭಾರತಕ್ಕೆ ಸಿಕ್ತು ಸ್ವಿಸ್ ಖಾತೆ ವಿವರದ 4 ನೇ ಸೆಟ್!

ಸ್ವಯಂಚಾಲಿತ ಮಾಹಿತಿ ವಿನಿಮಯದಡಿಯಲ್ಲಿ ಭಾರತಕ್ಕೆ ಸ್ವಿಸ್ ಖಾತೆ ವಿವರದ 4 ನೇ ಸೆಟ್ ಲಭ್ಯವಾಗಿದೆ.
ಸ್ವಿಸ್ ಬ್ಯಾಂಕ್
ಸ್ವಿಸ್ ಬ್ಯಾಂಕ್

ನವದೆಹಲಿ: ಸ್ವಯಂಚಾಲಿತ ಮಾಹಿತಿ ವಿನಿಮಯದಡಿಯಲ್ಲಿ ಭಾರತಕ್ಕೆ ಸ್ವಿಸ್ ಖಾತೆ ವಿವರದ 4 ನೇ ಸೆಟ್ ಲಭ್ಯವಾಗಿದೆ.

101 ರಾಷ್ಟ್ರಗಳಲ್ಲಿನ 34 ಲಕ್ಷ ಬ್ಯಾಂಕ್ ಖಾತೆಗಳ ಮಾಹಿತಿ ಭಾರತದ ಕೈ ಸೇರಿದ್ದು, ಅಧಿಕಾರಿಗಳ ಪ್ರಕಾರ ಈ ಪೈಕಿ ವ್ಯಕ್ತಿಗಳಿಗೆ ಸೇರಿದ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳ ಮಾಹಿತಿಯೂ ಲಭ್ಯವಾಗಿದೆ.

ಸರ್ಕಾರ, ಮುಂದಿನ ತನಿಖೆಯ ಮೇಲೆ ಪರಿಣಾಮ ಉಂಟುಮಾಡಬಹುದೆಂಬ ಕಾರಣಕ್ಕಾಗಿ ಖಾತೆಗಳ ವಿವರಗಳನ್ನು ಗೌಪ್ಯತೆಯ ಕಾರಣದಿಂದಾಗಿ ಹಂಚಿಕೊಂಡಿಲ್ಲ. ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (ಎಫ್ಎಟಿ) ಈ ಬಗ್ಗೆ ಮಾಹಿತಿ ನೀಡಿದ್ದು ಈ ವರ್ಷ ಮಾಹಿತಿ ಹಂಚಿಕೆಯಲ್ಲಿ ಹೊಸದಾಗಿ 5- ಅಲ್ಬೇನಿಯಾ, ಬ್ರೂನಿ ದಾರುಸ್ಸಲಾಮ್, ನೈಜೀರಿಯಾ, ಪೆರು ಮತ್ತು ಟರ್ಕಿ ದೇಶಗಳ ಸೇರ್ಪಡೆಯಾಗಿವೆ ಎಂದು ತಿಳಿಸಿದೆ.

ಒಟ್ಟಾರೆ ಬ್ಯಾಂಕ್ ಖಾತೆಗಳ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಿದೆ, 74 ದೇಶಗಳೊಂದಿಗೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com