ಪತನಗೊಂಡ ರಷ್ಯಾ ಮಿಲಿಟರಿ ಜೆಟ್‌ನ ಅವಶೇಷ
ಪತನಗೊಂಡ ರಷ್ಯಾ ಮಿಲಿಟರಿ ಜೆಟ್‌ನ ಅವಶೇಷ

ಉಕ್ರೇನ್ ಗಡಿಯ ಜನವಸತಿ ಪ್ರದೇಶದಲ್ಲಿ ರಷ್ಯಾದ ಮಿಲಿಟರಿ ಜೆಟ್ ಪತನ, 13 ಮಂದಿ ಸಾವು

ರಷ್ಯಾದ ಸೇನಾ ವಿಮಾನವೊಂದು ಉಕ್ರೇನ್ ಗಡಿಯ ಸಮೀಪವಿರುವ ನೈರುತ್ಯ ರಷ್ಯಾದ ಪಟ್ಟಣವಾದ ಯೆಸ್ಕ್‌ನ ವಸತಿ ಪ್ರದೇಶದಲ್ಲಿ ಪತನಗೊಂಡಿದ್ದು, ಪರಿಣಾಮವಾಗಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ ಎಂದು ಮಾಸ್ಕೊದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Published on

ಮಾಸ್ಕೊ: ರಷ್ಯಾದ ಸೇನಾ ವಿಮಾನವೊಂದು ಉಕ್ರೇನ್ ಗಡಿಯ ಸಮೀಪವಿರುವ ನೈರುತ್ಯ ರಷ್ಯಾದ ಪಟ್ಟಣವಾದ ಯೆಸ್ಕ್‌ನ ವಸತಿ ಪ್ರದೇಶದಲ್ಲಿ ಪತನಗೊಂಡಿದ್ದು, ಪರಿಣಾಮವಾಗಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ ಎಂದು ಮಾಸ್ಕೊದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ರಕ್ಷಣಾ ಪಡೆಯು ಪತನಗೊಂಡ ವಿಮಾನದ ಅವಶೇಷಗಳಡಿ ಹುಡುಕಾಟ ಪೂರ್ಣಗೊಳಿಸಿದ್ದು, 'ಇನ್ನೂ 10 ಮೃತದೇಹಗಳನ್ನು' ಪತ್ತೆ ಮಾಡಲಾಗಿದೆ. ಈ ಮೊದಲು ಮೂವರು ಸಾವಿಗೀಡಾಗಿರುವ ಕುರಿತು ಮಾಹಿತಿ ಲಭ್ಯವಾಗಿತ್ತು ಎಂದು ತುರ್ತು ಪರಿಸ್ಥಿತಿಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

'ಘಟನೆಯಲ್ಲಿ ಒಟ್ಟು ಮೂವರು ಮಕ್ಕಳು ಸೇರಿದಂತೆ 13 ಜನರು ಮೃತಪಟ್ಟಿದ್ದಾರೆ ಮತ್ತು 19 ಜನರು ಗಾಯಗೊಂಡಿದ್ದಾರೆ' ಎಂದು ಸಚಿವಾಲಯ ತಿಳಿಸಿರುವುದಾಗಿ ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಸುಖೋಯ್ ಸು-34 ಸೋಮವಾರ ಸಂಜೆ ಅಪಘಾತಕ್ಕೀಡಾಗಿದ್ದು, ಸುಮಾರು 600 ಜನರು ವಾಸಿಸುತ್ತಿದ್ದ ಒಂಬತ್ತು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಆವರಿಸಲು ಕಾರಣವಾಯಿತು. ವಿಮಾನದಲ್ಲಿದ್ದ ಇಂಧನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಬೆಂಕಿ ಆವರಿಸಿರುವ ಬಗ್ಗೆ ವಿಷಯ ತಿಳಿದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, 'ಮಿಲಿಟರಿ ವಿಮಾನದ ಘಟನೆಯಿಂದ ಗಾಯಗೊಂಡವರಿಗೆ ಎಲ್ಲಾ ಅಗತ್ಯ ನೆರವು ನೀಡುವಂತೆ' ಆದೇಶಿಸಿದ್ದಾರೆ ಎಂದು ಕ್ರೆಮ್ಲಿನ್ ಸರ್ಕಾರಿ ಸುದ್ದಿ ಸಂಸ್ಥೆ ಟಿಎಎಸ್ಎಸ್‌ಗೆ ತಿಳಿಸಿದೆ.

ಸೋವಿಯತ್ ಯುಗದ ವಸತಿ ಪ್ರದೇಶದ ಕಟ್ಟಡದ ಐದು ಮಹಡಿಗಳಲ್ಲಿ 2,000 ಚದರ ಮೀಟರ್ (21,500 ಚದರ ಅಡಿ) ಬೆಂಕಿ ವ್ಯಾಪಿಸಿದೆ. ವಿಮಾನದ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ತುರ್ತು ಪರಿಸ್ಥಿತಿಗಳ ಸಚಿವಾಲಯ ತಿಳಿಸಿದೆ.

ದಕ್ಷಿಣ ಮಿಲಿಟರಿ ಜಿಲ್ಲೆಯ ಮಿಲಿಟರಿ ಏರ್‌ಫೀಲ್ಡ್‌ನಿಂದ ತರಬೇತಿ ಹಾರಾಟವನ್ನು ಕೈಗೊಳ್ಳಲು ಟೇಕ್ ಆಫ್ ಆದ ನಂತರವೇ ವಿಮಾನ ಪತನಗೊಂಡಿದೆ. ಟೇಕ್-ಆಫ್ ಸಮಯದಲ್ಲಿ ವಿಮಾನದ ಒಂದು ಎಂಜಿನ್‌ಗೆ ಬೆಂಕಿ ಬಿದ್ದ ನಂತರ ಪತನಗೊಂಡಿದೆ ಎಂದು ಅದು ಹೇಳಿದೆ.

ತನಿಖೆಗೆ ಆದೇಶ

ಪ್ರಾದೇಶಿಕ ಗವರ್ನರ್ ವೆನಿಯಾಮಿನ್ ಕೊಂಡ್ರಾಟೀವ್ ಅವರು, ನಮ್ಮ ಆಡಳಿತವು ನಿವಾಸಿಗಳಿಗೆ 'ಗರಿಷ್ಠ ನೆರವು ನೀಡುತ್ತಿದೆ. ಸೋಮವಾರ ಹೊತ್ತಿಕೊಂಡ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಬೆಂಕಿ ಕೆಲವು ಮಹಡಿಗಳಿಗೆ ವ್ಯಾಪಿಸಿದೆ ಮತ್ತು 17 ಫ್ಲಾಟ್‌ಗಳ ಮೇಲೆ ಪರಿಣಾಮ ಬೀರಿದೆ. ಗಂಭೀರ ಅಪರಾಧಗಳನ್ನು ಪರಿಶೀಲಿಸುವ ರಷ್ಯಾದ ತನಿಖಾ ಸಮಿತಿಯು ವಿಮಾನ ಪತನದ ಬಗ್ಗೆ ಕ್ರಿಮಿನಲ್ ತನಿಖೆಯನ್ನು ಪ್ರಾರಂಭಿಸಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com