ನ್ಯೂಕ್ಲಿಯರ್ ತಾಲೀಮು ವೀಕ್ಷಿಸಿದ ಪುಟಿನ್; ಎಲ್ಲಾ ಮಾರ್ಗಗಳನ್ನೂ ಬಳಸಲು ಸಿದ್ಧ ಎಂದ ರಷ್ಯಾ ಅಧ್ಯಕ್ಷ

'ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿಮ್ ಅ.25 ರಂದು ರಷ್ಯಾದ ಕಾರ್ಯತಂತ್ರದ ಪರಮಾಣು ಶಕ್ತಿಗಳಿಗೆ ಸಂಬಂಧಿಸಿದ ಬ್ಯಾಲಿಸ್ಟಿಕ್ ಹಾಗೂ ಕ್ರೂಸ್ ಕ್ಷಿಪಣಿಗಳ ಅಭ್ಯಾಸ ಉಡಾವಣೆಗಳನ್ನು ವೀಕ್ಷಿಸಿದರು.
ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್
ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್

ಮಾಸ್ಕೋ: 'ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿಮ್ ಅ.25 ರಂದು ರಷ್ಯಾದ ಕಾರ್ಯತಂತ್ರದ ಪರಮಾಣು ಶಕ್ತಿಗಳಿಗೆ ಸಂಬಂಧಿಸಿದ ಬ್ಯಾಲಿಸ್ಟಿಕ್ ಹಾಗೂ ಕ್ರೂಸ್ ಕ್ಷಿಪಣಿಗಳ ಅಭ್ಯಾಸ ಉಡಾವಣೆಗಳನ್ನು ವೀಕ್ಷಿಸಿದರು.

ರಷ್ಯಾದ ಸರ್ಕಾರಿ ಟಿವಿಯ ಮಾಹಿತಿಯ ಪ್ರಕಾರ, ನಿಯಂತ್ರಣ ಕೊಠಡಿಯಿಂದ ಪುಟಿನ್ ತಾಲೀಮನ್ನು ವೀಕ್ಷಿಸಿದ್ದು, ರಷ್ಯಾ ಮೇಲೆ ದಾಳಿ ನಡೆಸುವವರ ವಿರುದ್ಧ ಎಲ್ಲಾ ಮಾರ್ಗಗಳನ್ನೂ ಬಳಸಲು ಸಿದ್ಧ ಎಂಬ ಸಂದೇಶದ ಬೆನ್ನಲ್ಲೇ ಈ ರೀತಿಯ ಬೆಳವಣಿಗೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಉಕ್ರೇನ್ ನಲ್ಲಿ ರಷ್ಯಾ ಮತ್ತಷ್ಟು ತೀವ್ರವಾದ ದಾಳಿ ನಡೆಸಬಹುದೆಂಬ ಆತಂಕದ ನಡುವೆ ಇಂದು ನ್ಯೂಕ್ಲಿಯರ್ ಡ್ರಿಲ್ ನಡೆದಿದೆ. ತಾಲೀಮಿನ ವೇಳೆ ದೇಶದ ಅಣ್ವಸ್ತ್ರ ಪಡೆಗಳು ಹಲವು ಕ್ಷಿಪಣಿಗಳ ಅಭ್ಯಾಸ ಉಡಾವಣೆ ನಡೆಸಿದವು.

ಈ ನಡುವೆ ಭಾರತ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಉಕ್ರೇನ್ ಸಂಘರ್ಷವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕು ಮತ್ತು ಪರಮಾಣು ಶಸ್ತ್ರಾಸ್ತ್ರ ಆಯ್ಕೆಯನ್ನು ಯಾವುದೇ ಕಡೆಯಿಂದ ಯಾರೂ ಕೂಡ ಆಶ್ರಯಿಸಬಾರದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ರಷ್ಯಾದ ಸಹವರ್ತಿ ಸೆರ್ಗೆಯ್ ಶೋಯಿಗು ಅವರಿಗೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com